ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್ ಬಿಐನಿಂದ ಶುಭ ಸುದ್ದಿ: ಮನೆ ಸಾಲದ ಮಿತಿ ಏರಿಕೆ

By Mahesh
|
Google Oneindia Kannada News

ಮುಂಬೈ, ಅ.09: ರೆಪೋ ದರ ಇಳಿಕೆ ಮಾಡಿ ಮನೆ, ವಾಹನ ಇನ್ನಿತರ ಸಾಲದ ಮೇಲಿನ ಬಡ್ಡಿದರ ಇಳಿಕೆಗೆ ಕಾರಣವಾಗಿದ್ದ ಆರ್ ಬಿಐ ಈಗ ಮತ್ತೊಂದು ಶುಭ ಸುದ್ದಿ ನೀಡಿದೆ. 30 ಲಕ್ಷ ರು. ಹಾಗೂ ಅದಕ್ಕಿಂತ ಕಡಿಮೆ ಮೊತ್ತದ ಗೃಹ ಸಾಲದ ಮೇಲೆ ಶೇಕಡ 90ರಷ್ಟು ಮೊತ್ತವನ್ನು ಬ್ಯಾಂಕ್​ಗಳು ಗ್ರಾಹಕರಿಗೆ ಮಂಜೂರು ಮಾಡಬಹುದು ಎಂದು ಆರ್​ಬಿಐ ತಿಳಿಸಿದೆ.

ಈ ಸೌಲಭ್ಯ 20 ಲಕ್ಷ ರು.ವರೆಗಿನ ಗೃಹ ಸಾಲ ಪಡೆಯುವವವರಿಗಷ್ಟೇ ಇತ್ತು. ಇದು ಸಣ್ಣ ಮಟ್ಟದ ಗೃಹ ಸಾಲ ಪಡೆಯುವವರಿಗೆ ಅನುಕೂಲಕರವಾಗಲಿದೆ. [ ಗೃಹಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸಗಳೇನು?]

20 ರಿಂದ 30 ಲಕ್ಷ ರು ಸಾಲ ಮಾಡಿ ಮನೆ ಕಟ್ಟಲು ಬಯಸುವವರಿಗೆ ಆರ್ ಬಿಐ ಆದೇಶ ವರವಾಗಲಿದೆ. ಆರ್​ಬಿಐ ರೆಪೊ ದರವನ್ನು ಇಳಿಸಿದ ನಂತರ ಹಲವು ಬ್ಯಾಂಕ್​ಗಳು ಬಡ್ಡಿ ದರವನ್ನು ಇಳಿಸಿವೆ. [ಎಸ್ ಬಿಐನಿಂದ ಬಡ್ಡಿದರ ಕಡಿತ, ಸಾಲ ಮಾಡಿ ತುಪ್ಪ ತಿನ್ನಿ!]

Home buyers can now get more loan for property up to Rs 30 lakh: RBI

30 ಲಕ್ಷ ರು ಗಿಂತ ಕಡಿಮೆ ಸಾಲಕ್ಕೆ ಶೇ 90 ರಷ್ಟು ಮಂಜುರಾತಿ ಸಾಧ್ಯವಿದೆ. 30 ಲಕ್ಷದಿಂದ 75 ಲಕ್ಷ ರೂ.ವರೆಗೆ ಮಂಜೂರಾತಿ ಮೊತ್ತವು ಶೇ. 80 ಹಾಗೂ 75 ಲಕ್ಷ ರೂ.ಗಿಂತ ಹೆಚ್ಚಿನ ಮೊತ್ತದ ಸಾಲಕ್ಕೆ ಶೇ.75ರಷ್ಟು ಮಂಜೂರಾತಿ ಮೊತ್ತ (Loan to Value) ವನ್ನು ಆರ್​ಬಿಐ ನಿಗದಿಪಡಿಸಿದೆ.[ಬ್ಯಾಂಕುಗಳಿಂದ ಬಡ್ಡಿದರ ಇಳಿಕೆ, ಸಾಲ ಮಾಡಿ ಮನೆ ಕೊಳ್ಳಿ]

ರಿಯಲ್ ಎಸ್ಟೇಟ್ ಕ್ಷೇತ್ರದಿಂದ ಸ್ವಾಗತ: ಆರ್ ಬಿಐ ನಿರ್ಧಾರದಿಂದ II ಹಾಗೂ III ಶ್ರೇಣಿಯ ನಗರಗಳಲ್ಲಿ ಮನೆ ಕಟ್ಟುವವರಿಗೆ ನೆರವಾಗಲಿದೆ. 30 ಲಕ್ಷಕ್ಕಿಂತ ಕಡಿಮೆ ಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗಿದ್ದು, ಮೆಟ್ರೋ ನಗರಗಳಲ್ಲಿ 40 ಲಕ್ಷಕ್ಕೆ ಮಿತಿ ಏರಿಕೆ ಮಾಡಿದರೆ ಒಳ್ಳೆಯದು ಎಂದು ಕ್ರೆಡೈನ ಅಧ್ಯಕ್ಷ ಗೀತಾಂಬರ್ ಆನಂದ್ ಹೇಳಿದ್ದಾರೆ. (ಪಿಟಿಐ)

English summary
Banks can now provide home loans up to 90 per cent for properties that cost Rs 30 lakh or below, RBI said today. Earlier, the facility was available only in cases where the cost was up to Rs 20 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X