ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಚ್‌ಸಿಎಲ್ ತ್ರೈಮಾಸಿಕ ವರದಿ ಪ್ರಕಟಿಸಿದ ಬೆನ್ನಲ್ಲೇ, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಶಿವ ನಡಾರ್

|
Google Oneindia Kannada News

ನವದೆಹಲಿ, ಜುಲೈ 17: ಪ್ರಮುಖ ಐಟಿ ಸಂಸ್ಥೆಗಳಲ್ಲಿ ಒಂದಾದ ಹೆಚ್‌ಸಿಎಲ್ ಟೆಕ್ನಾಲಜೀಸ್ ಶುಕ್ರವಾರ 2020-21ರ ಮೊದಲ ತ್ರೈಮಾಸಿಕ ವರದಿ ಪ್ರಕಟಿಸಿದ ಬೆನ್ನಲ್ಲೇ ಕಂಪನಿಯ ಅಧ್ಯಕ್ಷ ಸ್ಥಾನದಿಂದ ಶಿವ ನಡಾರ್ ಕೆಳಗಿಳಿದಿದ್ದಾರೆ.

Recommended Video

ಕೇಂದ್ರ ಸರ್ಕಾರಕ್ಕೆ ವರ್ನಿಂಗ್ ಕೊಟ್ಟ ರಾಹುಲ್ ಗಾಂಧಿ.! | Oneindia Kannada

ಎಚ್‌ಸಿಎಲ್ ಟೆಕ್ನಾಲಜೀಸ್ ಏಪ್ರಿಲ್-ಜೂನ್ ತ್ರೈಮಾಸಿಕದ ನಿವ್ವಳ ಲಾಭ ಶೇ. 31.7ರಷ್ಟು ಏರಿಕೆಗೊಂಡು 2,935 ಕೋಟಿ ರುಪಾಯಿಗಳಷ್ಟಿದೆ ಎಂದು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಶಿವ ನಾಡರ್ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ನಾಡರ್ ಅವರ ಮಗಳು ರೋಶ್ನಿ ನಾಡರ್ ಮಲ್ಹೋತ್ರಾ ಅವರ ನಂತರದ ಉತ್ತರಾಧಿಕಾರಿಯಾಗಲಿದ್ದಾರೆ.

ಇನ್ಫೋಸಿಸ್ ಷೇರು ಜಿಗಿತ: 1 ಗಂಟೆಯಲ್ಲಿ 50,000 ಕೋಟಿ ಗಳಿಸಿದ ಹೂಡಿಕೆದಾರರುಇನ್ಫೋಸಿಸ್ ಷೇರು ಜಿಗಿತ: 1 ಗಂಟೆಯಲ್ಲಿ 50,000 ಕೋಟಿ ಗಳಿಸಿದ ಹೂಡಿಕೆದಾರರು

ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ ಶಿವ ನಾಡರ್ ಅವರ ಸ್ಥಾನಕ್ಕೆ ಜುಲೈ 17 ರಿಂದ ಜಾರಿಗೆ ಬರುವಂತೆ ಮಂಡಳಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ರೋಶ್ನಿ ನಾಡರ್ ಮಲ್ಹೋತ್ರಾ ಅವರನ್ನು ನಿರ್ದೇಶಕರ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ ಎಂದು ಎಚ್‌ಸಿಎಲ್ ಟೆಕ್ನಾಲಜೀಸ್ ತಿಳಿಸಿದೆ.

HCL Tech Q1 Result: Profit Jumps 32%, Shiv Nadar To Steps Down As Chairman

ಶಿವ ನಾಡರ್ ಕಂಪನಿಯ ಮುಖ್ಯ ಕಾರ್ಯತಂತ್ರ ಅಧಿಕಾರಿಯಾಗಿ ಹುದ್ದೆಯೊಂದಿಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಮುಂದುವರಿಯುವ ಸಾಧ್ಯತೆ ಇದೆ.

ಕ್ಯೂ 1 ಎಫ್‌ವೈ 21 ರಲ್ಲಿ ಕಂಪನಿಯ ಏಕೀಕೃತ ಆದಾಯವು ಶೇಕಡಾ 8.60 ರಷ್ಟು ಹೆಚ್ಚಳವಾಗಿ 17,841 ಕೋಟಿ ರೂ.ಗಳಿಗೆ ತಲುಪಿದೆ. ಇಬಿಐಟಿಡಿಎ ಏಪ್ರಿಲ್-ಜೂನ್ ಅವಧಿಯಲ್ಲಿ ಶೇಕಡಾ 34.30 ಏರಿಕೆ ಕಂಡು 4,566 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3,401 ಕೋಟಿ ರೂಪಾಯಿಗಳಷ್ಟಿತ್ತು.

English summary
It major HCL Technologies on friday posted 31.70 per cent year-on-year (YoY) rise in net profit at Rs 2,925 crore for the quarter ended June 30. And Shiv Nadar is stepping down from the chairman's role
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X