ಇಸ್ರೇಲ್ ಮೇಲೆ ಹಮಾಸ್ ದಾಳಿ: ಕಚ್ಚಾ ತೈಲ ಬೆಲೆ ಭಾರೀ ಏರಿಕೆ, ವಿವರ ತಿಳಿಯಿರಿ
ನವದೆಹಲಿ, ಅಕ್ಟೋಬರ್ 09: ಇಸ್ರೋಲ್ ಮೇಲೆ ಹಮಾಸ್ ಉಗ್ರಗಾಮಿಗಳ ದಾಳಿಯಿಂದ ಜಾಗತಿಕ ಕಚ್ಚಾ ತೈಲ ಪೂರೈಕೆಗೆ ಹೊಡೆತ ಬಿದ್ದಿದ್ದು, ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದೆ.
ಜಾಗತಿಕ ಕಚ್ಚಾ ತೈಲ ಬೆಲೆಗಳು ಸೋಮವಾರ ಭಾರೀ ಏರಿಕೆಯಾಯಿತು. ಇಸ್ರೇಲ್ ಹಾಗೂ ಹಮಾಸ್ ನಡುವಿನ ಯುದ್ಧ 3ನೇ ದಿನಕ್ಕೆ ಪ್ರವೇಶಿಸಿದ ನಂತರ ಎರಡೂ ಕಡೆಗಳಲ್ಲಿ ದೊಡ್ಡ ಸಾವುನೋವುಗಳು ಹೆಚ್ಚಾಗಿವೆ. ಬ್ರೆಂಟ್ ಕಚ್ಚಾ ತೈಲವನ್ನು ಸಾಮಾನ್ಯವಾಗಿ ಜಾಗತಿಕ ಮಾನದಂಡವೆಂದು ಪರಿಗಣಿಸಲಾಗಿದೆ.

ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 87.61ಕ್ಕೆ ಏರಿಕೆ ಕಂಡಿದೆ. ಕಳೆದ ವಾರದ ವಹಿವಾಟಿಗಿಂತ ಶೇಕಡಾ 3.52 ಹೆಚ್ಚಾಗಿದೆ. ಡಬ್ಲ್ಯುಟಿಐ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ 3 ಪ್ರತಿಶತದಷ್ಟು ಅಂದರೆ 85.96ಕ್ಕೆ ಹೆಚ್ಚಾಗಿದೆ. ಜಾಗತಿಕ ಹಣದುಬ್ಬರ ಅನಿಶ್ಚಿತತೆಯ ಮಧ್ಯೆ ಕೆಲವು ಉತ್ಪಾದಕ ರಾಷ್ಟ್ರಗಳಿಂದ ಕಚ್ಚಾ ತೈಲ ಉತ್ಪಾದನೆ ಕುಸಿತವಾಗಿ ಉಂಟಾದ ಪೂರೈಕೆ ಕೊರತೆಯು ತೈಲ ಬೆಲೆಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಹಮಾಸ್ ಇಸ್ರೇಲ್ ನಡುವಿನ ಯುದ್ಧದಲ್ಲಿ ಇಲ್ಲಿಯವರೆಗೆ ಸುಮಾರು 700 ಇಸ್ರೇಲಿಗಳು ಕೊಲ್ಲಲ್ಪಟ್ಟಿದ್ದಾರೆ. ಅಲ್ಲದೆ ಪ್ಯಾಲೆಸ್ಟೈನ್ ಭಾಗದಲ್ಲಿ 300 ಸಾವುಗಳು ದಾಖಲಾಗಿವೆ. ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, "ಭಾರತವು ಈ ಪರಿಣಾಮವನ್ನು ಪ್ರಬುದ್ಧತೆಯಿಂದ ನಿಭಾಯಿಸುತ್ತದೆ. ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲಸ ನಡೆಯುತ್ತಿರುವ ಸ್ಥಳವು ಅನೇಕ ವಿಷಯಗಳಲ್ಲಿ ಜಾಗತಿಕ ಶಕ್ತಿಯ ಕೇಂದ್ರವಾಗಿದೆ. ನಾವು ಇದನ್ನು ಬಹಳ ಎಚ್ಚರಿಕೆಯಿಂದ ನೋಡುತ್ತೇವೆ. ಈ ರೀತಿಯ ಅನಿಶ್ಚಿತತೆಗಳು ಜನರನ್ನು ಸಮರ್ಥನೀಯ ಮತ್ತು ಶುದ್ಧ ಇಂಧನಕ್ಕೆ ಪ್ರೋತ್ಸಾಹಿಸುತ್ತವೆ" ಎಂದು ಹೇಳಿದ್ದಾರೆ.
ಇಸ್ರೇಲ್‌ನ ಮೇಲೆ ಹಮಾಸ್ ದಾಳಿಯು ಪ್ರಪಂಚದ ಮೂರನೇ ಒಂದು ಭಾಗದಷ್ಟು ಕಚ್ಚಾ ತೈಲದ ಮೂಲವಾದ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುವ ಸಂಭವವಿದ್ದರಿಂದ ಸೋಮವಾರದ ಆರಂಭಿಕ ಏಷ್ಯನ್ ವ್ಯಾಪಾರದಲ್ಲಿ ತೈಲ ಬೆಲೆಗಳು ಶೇಕಡಾ 4 ಕ್ಕಿಂತ ಹೆಚ್ಚು ಏರಿದೆ.
"ತೈಲ ವ್ಯಾಪಾರಿಗಳು ಕೂಡ ಇರಾನ್‌ನತ್ತ ಗಮನ ಹರಿಸುವುದರೊಂದಿಗೆ ಸಂಘರ್ಷವು ಉಳಿದ ಮಧ್ಯಪ್ರಾಚ್ಯ ಪ್ರದೇಶಗಳಿಗೆ ಹರಡುತ್ತದೆಯೇ ಎಂಬುದರ ಮೂಲಕ ಮಾರುಕಟ್ಟೆಗಳಲ್ಲಿನ ಕುಸಿತವನ್ನು ನಿರ್ಧರಿಸಲಾಗುತ್ತದೆ. ಇರಾನ್ ಪ್ರಮುಖ ತೈಲ ಉತ್ಪಾದಕ ಮತ್ತು ಹಮಾಸ್‌ನ ಬೆಂಬಲಿಗ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ರಿಟೇಲ್ ರಿಸರ್ಚ್ ಮುಖ್ಯಸ್ಥ ದೀಪಕ್ ಜಸಾನಿ ಹೇಳಿದ್ದಾರೆ.
ಏತನ್ಮಧ್ಯೆ, ಒಪೆಕ್ ತನ್ನ ವಾರ್ಷಿಕ ವಿಶ್ವ ತೈಲ ವರದಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಇದು ದೀರ್ಘಾವಧಿಯ ಬೇಡಿಕೆ ಮತ್ತು ಪೂರೈಕೆಗಾಗಿ ನವೀಕರಿಸಿದ ಮುನ್ಸೂಚನೆಗಳನ್ನು ನೀಡಿದೆ. ವಿಶೇಷವಾಗಿ ವಿವಿಧ ಮೂಲಗಳಿಂದ ಕಚ್ಚಾ ತೈಲದ ದೊಡ್ಡ ಆಮದುದಾರರಾಗಿರುವ ಭಾರತಕ್ಕೆ ಇಂಧನ ಬೆಲೆಗಳ ಮೇಲಿನ ಈ ಇತ್ತೀಚಿನ ಬೆಲೆಯ ಒತ್ತಡವು ನೀತಿ ನಿರೂಪಕರಿಗೆ ತಲೆನೋವಾಗಿದೆ ಎಂದು ತಿಳಿಸಿದೆ.
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ












Click it and Unblock the Notifications