ಗಿನ್ನಿಸ್ ದಾಖಲೆ ಬರೆದ ವಜ್ರದುಂಗುರ ಆನ್‍ಲೈನ್‍ನಲ್ಲಿ ಹರಾಜು
ಬೆಂಗಳೂರು, ನ.2: ಹೈದರಾಬಾದ್‍ನಲ್ಲಿರುವ ದಿ ಡೈಮಂಡ್ ಸ್ಟೋರ್ ಬೈ ಚಂದೂಭಾಯ್(ಹಾಲ್‍ಮಾರ್ಕ್ ಜ್ಯುವೆಲರ್ಸ್‍ನ ಘಟಕ)ನ ಮಾಲೀಕರಾದ ಕೊಟ್ಟಿ ಶ್ರೀಕಾಂತ್ ಅವರು ಒಂದು ಉಂಗುರದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ ವಜ್ರಗಳನ್ನು ಅಳವಡಿಸಿ ಗಿನ್ನಿಸ್ ದಾಖಲೆ ಬರೆದ ಉಂಗುರವನ್ನು ಈಗ ಆನ್‍ಲೈನ್‍ನಲ್ಲಿ ಹರಾಜು ಹಾಕಲಾಗುತ್ತಿದೆ.
ಶ್ರೀಕಾಂತ್ ಅವರು ಸೆಪ್ಟೆಂಬರ್, 2020ರಲ್ಲಿ ನೂತನ ಗಿನ್ನಿಸ್ ದಾಖಲೆಯ ಸಾಧನೆ ಸ್ಥಾಪಿಸಿದ್ದರು. ಒಟ್ಟು7801 ನೈಸರ್ಗಿಕ ವಜ್ರಗಳನ್ನು ಬಳಸಲಾಗಿರುವ ಉಂಗುರವನ್ನು ಆನ್‍ಲೈನ್‍ನಲ್ಲಿ ನವೆಂಬರ್ 13ರಿಂದ ನವೆಂಬರ್22, 2020 ರವರೆಗೆ ಹರಾಜು ಹಾಕಲಾಗುತ್ತಿದೆ. ಹರಾಜಿಗೆ ನೋಂದಣಿ ಪ್ರಕ್ರಿಯೆ ನವೆಂಬರ್ 2, 2020ರಿಂದ ಆರಂಭವಾಗುತ್ತಿದೆ. ಹರಾಜಿನಲ್ಲಿ ಭಾಗವಹಿಸುವವರಿಗೆ ಇದರ ಮೀಸಲು ಬೆಲೆಯನ್ನು 78,01,000 ರೂ.(ಸುಮಾರು 104,692 ಯುಎಸ್ ಡಾಲರ್)ಗಳೆಂದು ನಿಗದಿಪಡಿಸಲಾಗಿದೆ.
ಈ ಉಂಗುರದ ಸೃಷ್ಟಿಕರ್ತರಾದ ಕೊಟ್ಟಿ ಶ್ರೀಕಾಂತ್ ಅವರು ಮಾತನಾಡಿ, ''ಆಭರಣಗಳಲ್ಲಿ ಅತ್ಯಂತ ಅನನ್ಯ ಕಲಾವಸ್ತುಗಳನ್ನು ಸೃಷ್ಟಿಸುವ ನನ್ನ ಭಾವೋದ್ವೇಗವನ್ನು ಗುರುತಿಸಿರುವುದಕ್ಕೆ ನಾನು ಗಿನ್ನಿಸ್ ವಿಶ್ವದಾಖಲೆ ಸಂಸ್ಥೆಗೆ ವಂದನೆ ಸಲ್ಲಿಸುತ್ತೇನೆ ಮತ್ತು ನನಗಿದು ಅತ್ಯಂತ ಗೌರವದ ವಿಷಯವಾಗಿದೆ. ಈ ಯಶಸ್ಸನ್ನು ಹಂಚಿಕೊಳ್ಳಲು ಮತ್ತು ಜಾಗತಿಕ ಆನ್‍ಲೈನ್ ಹರಾಜಿಗೆ ಈ ಮೇರುಕೃತಿಯನ್ನು ಸಾದರಪಡಿಸಲು ನಾನು ಹರ್ಷಿಸುತ್ತೇನೆ. ಅಲ್ಲದೆ ಈ ಹರಾಜಿನಿಂದ ಬರುವ ಮೊತ್ತದಲ್ಲಿ ಶೇ.10ರಷ್ಟನ್ನು ಪಿಎಂ ಕೇರ್ಸ್ ನಿಧಿಗೆ ನೀಡಲು ನಾನು ಇಚ್ಛಿಸಿದ್ದೇನೆ''ಎಂದರು.

ಹರಾಜು ಪ್ರಕ್ರಿಯೆ
ವೆಬ್‍ಸೈಟ್ thedivine7801 ನೋಂದಣಿಗಳನ್ನು ಆಹ್ವಾನಿಸಲಾಗಿದೆ. ನೋಂದಣಿಗಳು ಮುಕ್ತಾಯವಾದ ನಂತರ ಹರಾಜಿಗಾಗಿ ಒಂದು ಯುಆರ್‍ಎಲ್, ಯುಸರ್ ಐಡಿ, ಮತ್ತು ಪಾಸ್‍ವರ್ಡ್‍ಗಳನ್ನು ನೋಂದಾಯಿತ ಹರಾಜುದಾರರಿಗೆ ಕಳುಹಿಸಲಾಗುವುದು. ಮಾನ್ಯತೆ ಹೊಂದಿರುವ ಯುಸರ್ ಐಡಿ ಮತ್ತು ಪಾಸ್‍ವರ್ಡ್ ಹೊಂದಿರುವ ಎಲ್ಲಾ ಹರಾಜುದಾರರಿಗೆ ಈ ಹರಾಜಿನಲ್ಲಿ ರಿಯಲ್‍ಟೈಮ್‍ನಲ್ಲಿ ನೇರವಾಗಿ ಭಾಗವಹಿಸುವ ಅವಕಾಶ ಇರುತ್ತದೆ.

ದಿ ಡಿವೈನ್ 7801 ''ಬ್ರಹ್ಮವಜ್ರ ಕಮಲಂ''
ಹಿಮಾಲಯದಲ್ಲಿ ಕಂಡು ಬರುವ ಅಪರೂಪದ ಹೂವಾದ ಬ್ರಹ್ಮಕಮಲದಿಂದ ಈ ಉಂಗುರದ ಹೆಸರು ಸ್ಫೂರ್ತಿ ಪಡೆದಿದೆ. ಈ ಹೂವು ವೈದ್ಯಕೀಯ ಗುಣಗಳನ್ನೂ ಹೊಂದಿರುತ್ತದೆ ಎಂದು ಪರಿಗಣಿಸಲಾಗಿದೆ. ಸಂಸ್ಕೃತ, ತೆಲುಗು ಹಾಗೂ ಕನ್ನಡದಲ್ಲಿ ಡೈಮಂಡ್ ಅನ್ನು ವಜ್ರ ಎಂದು ಕರೆಯಲಾಗುತ್ತದೆ. ದಿ ಡಿವೈನ್ ರಿಂಗ್(ದೈವೀಕ ಉಂಗುರ) ವಿನ್ಯಾಸಕ್ಕಾಗಿ ಆರಿಸಲಾದ ಹೂವು ಅತ್ಯಂತ ನೈಸರ್ಗಿಕ ಮತ್ತು ಪರಿಶುದ್ಧ ರೂಪದಲ್ಲಿ ಸಾಮಾನ್ಯ ಪೂಜೆಯ ಅರ್ಪಣೆಯಾಗಿರುತ್ತದೆ. ಸೆಪ್ಟೆಂಬರ್ 2018ರಲ್ಲಿ ಈ ಉಂಗುರದ ಚಿಂತನೆಯನ್ನು ರೂಪಿಸಲಾಗಿದ್ದು, ಅದನ್ನು ಪೂರ್ಣಗೊಳಿಸಲು 11 ತಿಂಗಳುಗಳ ಸಮರ್ಪಿತ ಕಲಾತ್ಮಕ ಪ್ರಯತ್ನ ಮತ್ತು ಕರಕುಶಲತೆ ಅಗತ್ಯವಾಯಿತು. ಎಂಟು ದಳಗಳೊಂದಿಗೆ ಐದು ಪದರಗಳನ್ನು ಇದು ಹೊಂದಿದ್ದು, ಅತ್ಯಂತ ಮೇಲ್ಭಾಗದ ಪದರ ಆರು ದಳಗಳನ್ನು ಹೊಂದಿರುವುದರ ಜೊತೆಗೆ ಕೇಂದ್ರ ಭಾಗದಲ್ಲಿ ಮೂರು ಪುಷ್ಪರೇಣುಗಳನ್ನು ಹೊಂದಿರುತ್ತದೆ.

ಕೊಟ್ಟಿ ಶ್ರೀಕಾಂತ್ ಅವರು ಪರಿಣತ ಆಭರಣ ವಿನ್ಯಾಸಕಾರ
ಕೊಟ್ಟಿ ಶ್ರೀಕಾಂತ್ ಅವರು ಪರಿಣತ ಆಭರಣ ವಿನ್ಯಾಸಕಾರರಾಗಿರುವುದಲ್ಲದೆ, ಮಾನವ ಹಸ್ತ ವಿನ್ಯಾಸದಲ್ಲಿ ಡಿಪ್ಲೊಮಾ, ಕಂಪ್ಯೂಟರ್ ನೆರವಿನ ಆಭರಣ ವಿನ್ಯಾಸ ಡಿಪ್ಲೊಮಾಗಳನ್ನು ಮುಂಬಯಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಜ್ಯುವೆಲರಿಯಿಂದ ಪಡೆದಿರುತ್ತಾರೆ. ಜೊತೆಗೆ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂಬಿಎ ಪದವೀಧರರಾಗಿರುತ್ತಾರೆ. ಜೊತೆಗೆ ಅವರು ಜೆಮಾಲಾಜಿಕಲ್ ಇನ್‍ಸ್ಟಿಟ್ಯೂಟ್ ಆಫ್ ಅಮೇರಿಕಾ(ಜಿಐಎ)ದಿಂದ ಪ್ರಾಮಾಣೀಕೃತ ಡೈಮಂಡ್ ಗ್ರ್ಯಾಜುಯೇಟ್ ಆಗಿರುತ್ತಾರೆ. ತಮ್ಮ ತಂದೆ ಚಂದ್ರಪ್ರಕಾಶ್ ಅವರಿಂದ ತಮಗೆ ಈ ಆಭರಣಗಳನ್ನು ಕುರಿತಾದ ಪ್ರೀತಿ ಬಳುವಳಿಯಾಗಿ ಬಂದಿದೆ ಎಂದು ಅವರು ಹೇಳುತ್ತಾರೆ. ಅವರ ತಂದೆಯ ಅಡಿಯಲ್ಲಿ ಕೊಟ್ಟಿ ಶ್ರೀಕಾಂತ್ ಅವರು ಕೆಲಸ ಮಾಡಿ ಈ ವಹಿವಾಟಿನ ಸೂಕ್ಷ್ಮತೆಗಳನ್ನು ಕಲಿತಿರುತ್ತಾರೆ

ಹಾಲ್‍ಮಾರ್ಕ್ ಆಭರಣ ವ್ಯವಹಾರ ತಜ್ಞರು
2009ರಲ್ಲಿ ಈ ತಂದೆ ಮತ್ತು ಮಗ(ಶ್ರೀಕಾಂತ್) ಅವರ ಜೋಡಿ ಹಾಲ್‍ಮಾರ್ಕ್ ಆಭರಣ ವ್ಯವಹಾರವನ್ನು ಸ್ಥಾಪಿಸಿದ್ದರಲ್ಲದೆ 2017ರಲ್ಲಿ ಡೈಮಂಡ್ ಸ್ಟೋರ್ ಬೈ ಚಂದೂಭಾಯ್ ಅನ್ನು ಆರಂಭಿಸಿದ್ದರು. ತಮ್ಮಲ್ಲಿನ ವಿನ್ಯಾಸಗಳು ಮತ್ತು ಸೂಕ್ಷ್ಮ ಕರಕುಶಲತೆ ಜೊತೆಗೆ ಹೈದ್ರಾಬಾದ್‍ನ ವಜ್ರಾಭರಣ ಪ್ರೇಮಿಗಳ ನಡುವೆ ತಮ್ಮದೇ ಆದ ಛಾಪನ್ನು ಈ ಮಳಿಗೆ ಈಗಾಗಲೇ ಸೃಷ್ಟಿಸಿಕೊಂಡಿದೆ. ಗಿನ್ನಿಸ್ ವಿಶ್ವ ದಾಖಲೆ ಹೊಂದಿರುವುದು ಅವರ ಸೃಜನಾತ್ಮಕ ಶಕ್ತಿಯನ್ನು ಸ್ಥಾಪಿಸಿರುವುದಲ್ಲದೆ, ಕಲಾತ್ಮಕ ಆಭರಣಗಳ ಸೃಷ್ಟಿಕರ್ತರಾಗಿ ಅವರ ಪ್ರಯಾಣದಲ್ಲಿ ನೂತನ ಅಧ್ಯಾಯದ ಆರಂಭವನ್ನು ಇದು ಗುರುತಿಸುತ್ತದೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications