ಜಿಎಸ್ ಟಿ ಪರಿಣಾಮ: ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ
ನವದೆಹಲಿ, ಜೂನ್ 3: ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಅಡಿಯಲ್ಲಿ ಚಿನ್ನ, ಪಾದರಕ್ಷೆ ಸೇರಿದಂತೆ ಇತರ ಪರಿಕರಗಳಿಗೆ ವಿಧಿಸಬೇಕಿದ್ದ ದರಗಳ ಪಟ್ಟಿ ಅಂತಿಮಗೊಂಡಿದೆ.
ಶನಿವಾರ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ನೇತೃತ್ವದಲ್ಲಿ ನಡೆದ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ದರಗಳನ್ನು ಅಂತಿಮಗೊಳಿಸಲಾಯಿತು.[ಜಿಎಸ್ ಟಿ ಜಾರಿಯಾದ್ರೆ ಚಿತ್ರರಂಗಕ್ಕೆ ವಿದಾಯ: ಕಮಲ್ ಹಾಸನ್]

ಅದರಂತೆ, ಚಿನ್ನದ ಮೇಲೆ ಶೇ. 3ರಷ್ಟು, ತಿನ್ನುವ ಬಿಸ್ಕತ್ ಗಳ ಮೇಲೆ ಶೇ 18ರಷ್ಟು, ಬಟ್ಟೆಗಳ ಮೇಲೆ ಶೇ. 12ರಷ್ಟು ತೆರಿಗೆ ಬೀಳುತ್ತದೆ. ಸಭೆಯ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಅರುಣ್ ಜೇಟ್ಲಿ ಹೇಳಿದ್ದಿಷ್ಟು.
- ರಫ್ ಡೈಮೆಂಡ್ ಗಳ ಮೇಲೆ ಶೇ. 0.25ರಷ್ಟು ಸುಂಕ.
- ಜಿಎಸ್ ಟಿ ಜಾರಿಯಿಂದ ಚಿನ್ನದ ಮೇಲೆ ಶೇ. 3ರಷ್ಟು ತೆರಿಗೆ.
- ಚಿನ್ನ ಮಾತ್ರವಲ್ಲ, ವಜ್ರ, ಇತರೆ ಅಲಂಕಾರಿಗೆ ಹರಳುಗಳ ಮೇಲೂ ಶೇ. 3ರಷ್ಟು ತೆರಿಗೆ.[ಜಿಎಸ್ ಟಿ ಪರಿಣಾಮ: ಯಾವ್ಯಾವುದರ ಮೇಲೆ ಎಷ್ಟೆಷ್ಟು ತೆರಿಗೆ?]
- 500 ರು. ಒಳಗಿರುವ ಪಾದರಕ್ಷೆಗಳಿಗೆ ಶೇ. 5ರಷ್ಟು ಹಾಗೂ 500 ರು.ಗಳಿಗಿಂತ ಮೇಲ್ಪಟ್ಟ ಪಾದರಕ್ಷಗಳಿಗೆ ಶೇ. 18ರಷ್ಟು ತೆರಿಗೆ.
- ಸಿದ್ಧ ಉಡುಪುಗಳ ಮೇಲೆ ಶೇ. 12ರಷ್ಟು ಜಿಎಸ್ ಟಿ, ಯಾರ್ನ್ ಹಾಗೂ ಫ್ಯಾಬ್ರಿಕ್ ಕಾಟನ್ ಮೇಲೆ ಶೇ. 5ರಷ್ಟು ತೆರಿಗೆ. ಬಟ್ಟೆ ಕೊಳ್ಳುವ ಗ್ರಾಹಕರಿಗೆ ಇದು ಕೊಂಚ ದುಬಾರಿ ಎನಿಸಬಹುದು.
- ಬಿಸ್ಕೆಟ್ ಗಳ ಮೇಲೆ ಶೇ. 18ರಷ್ಟು ಸುಂಕ
- ನಾರಿನ ಉತ್ಪನ್ನಗಳ ಮೇಲೆ ಸುಂಕವಿಲ್ಲ.
- ಬೀಡಿಗಳ ಮೇಲೆ ಶೇ. 28ರಷ್ಟು ತೆರಿಗೆ. ಆದರೆ, ಇದಿನ್ನೂ ಅಂತಿಮವಾಗಿಲ್ಲ.[ಜಿಎಸ್ ಟಿ ಪರಿಣಾಮ: ಹೊಸ ಮನೆ ಕೊಳ್ಳೋರಿಗೆ ಕೊಂಚ ಹೆಚ್ಚು ಹೊರೆ!]












Click it and Unblock the Notifications