• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಮವಾರದಿಂದಲೇ ನೂತನ ಜಿಎಸ್‌ಟಿ ದರ ಜಾರಿ: ಯಾವುದು ದುಬಾರಿ

|
Google Oneindia Kannada News

ನವದೆಹಲಿ, ಜುಲೈ 17; ಜೂನ್ ತಿಂಗಳು ಚಂಡೀಗಢದ ನಡೆದ 47ನೇ ಸರಕು ಮತ್ತು ಸೇವಾ ತೆರಿಗೆ ಸಭೆಯಲ್ಲಿ ಹಲವು ವಸ್ತುಗಳ ಮೇಲೆ ಜಿಎಸ್‌ಟಿ ದರಗಳನ್ನು ಹೆಚ್ಚಿಸಿದ್ದವು. ನೂತನ ಜಿಎಸ್‌ಟಿ ದರ ಸೋಮವಾರದಿಂದ ಜಾರಿಯಾಗಲಿದ್ದು, ಹೋಟೆಲ್‌ಗಳು ಮತ್ತು ಬ್ಯಾಂಕ್ ಸೇವೆಗಳು ಸೇರಿದಂತೆ ಹಲವಾರು ಗೃಹೋಪಯೋಗಿ ವಸ್ತುಗಳು ದುಬಾರಿಯಾಗಲಿವೆ.

ಸೋಮವಾರದಿಂದ ದಿನನಿತ್ಯದ ವಸ್ತುಗಳನ್ನು ಖರೀದಿಸಲು ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ಮೊಸರು, ಲಸ್ಸಿ, ಮಜ್ಜಿಗೆ, ಪನೀರ್, ಗೋಧಿ, ಅಕ್ಕಿ ಮುಂತಾದವುಗಳನ್ನು ಮೊದಲೇ ಪ್ಯಾಕ್ ಮಾಡಲಾದ ಮತ್ತು ಲೇಬಲ್ ಮಾಡಿದ ಉತ್ಪನ್ನಗಳಿಗೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಲಾಗಿದ್ದು, ಹೊಸ ದರ ಜಾರಿಗೆ ಬರಲಿದೆ.

ಹಾಲು ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ: ರೈತರು ಆಕ್ರೋಶಹಾಲು ಉತ್ಪನ್ನಗಳು ಜಿಎಸ್‌ಟಿ ವ್ಯಾಪ್ತಿಗೆ: ರೈತರು ಆಕ್ರೋಶ

ಕೃಷಿ ಮತ್ತು ಡೈರಿ ಉತ್ಪನ್ನಗಳಲ್ಲಿ, ಗ್ರಾಹಕರ ಮುಂದೆ ಪ್ಯಾಕ್ ಮಾಡದ ಅಥವಾ ಪ್ಯಾಕ್ ಮಾಡಿ ಮಾರಾಟ ಮಾಡಿದರೆ, ಜಿಎಸ್‌ಟಿಯಿಂದ ವಿನಾಯಿತಿ ಮುಂದುವರಿಸಲಾಗುತ್ತದೆ. ಈ ಹಿಂದೆ ಪ್ಯಾಕ್ ಮಾಡಿದ ಬ್ರಾಂಡೆಡ್ ಅಕ್ಕಿ ಮಾತ್ರ ಜಿಎಸ್‌ಟಿ ವ್ಯಾಪ್ತಿಯಲ್ಲಿತ್ತು. ಈಗ, ಎಲ್ಲಾ ಬ್ರ್ಯಾಂಡ್ ಇಲ್ಲದ, ಪೂರ್ವ-ಪ್ಯಾಕೇಜ್ ಮಾಡಿದ ಅಕ್ಕಿ, ಅಕ್ಕಿ ಹಿಟ್ಟು, ಗೋಧಿ ಹಿಟ್ಟಿನ ಮೇಲೂ ಜಿಎಸ್‌ಟಿ ವಿಧಿಸಲಾಗುತ್ತದೆ.

 48,440 ಕೋಟಿ ರು. ಜಿಎಸ್‌ಟಿ ಸಂಗ್ರಹ: ದೇಶದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ 48,440 ಕೋಟಿ ರು. ಜಿಎಸ್‌ಟಿ ಸಂಗ್ರಹ: ದೇಶದಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

 ಜೀವನ ಆಗಲಿದೆ ಮತ್ತಷ್ಟು ದುಬಾರಿ

ಜೀವನ ಆಗಲಿದೆ ಮತ್ತಷ್ಟು ದುಬಾರಿ

ಮೊಸರು, ಲಸ್ಸಿ, ಮಜ್ಜಿಗೆ, ಪನ್ನೀರ್, ಕಬ್ಬಿನ ಬೆಲ್ಲ, ತಾಳೆ ಬೆಲ್ಲ ಸೇರಿದಂತೆ ಎಲ್ಲಾ ರೀತಿಯ ಬೆಲ್ಲ, ಸಕ್ಕರೆ, ನೈಸರ್ಗಿಕ ಜೇನುತುಪ್ಪ, ಮಂಡಕ್ಕಿ, ಅವಲಕ್ಕಿ, ಅಕ್ಕಿ, ಗೋಧಿ, ಬಾರ್ಲಿ, ಓಟ್ಸ್, ಅಕ್ಕಿ ಹಿಟ್ಟು, ಗೋಧಿ ಹಿಟ್ಟಿನ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಟೆಂಡರ್ ಎಳನೀರಿನ ಮೇಲೆ ಶೇಕಡ 12 ರಷ್ಟು ಜಿಎಸ್‌ಟಿ ವಿಧಿಸಲಾಗಿದೆ.

 ಇತರೆ ವಸ್ತುಗಳು ಕೂಡ ದುಬಾರಿ

ಇತರೆ ವಸ್ತುಗಳು ಕೂಡ ದುಬಾರಿ

ಆಹಾರ ವಸ್ತುಗಳನ್ನು ಹೊರತು ಪಡಿಸಿ ಇತರೆ ವಸ್ತುಗಳು ಕೂಡ ದುಬಾರಿಯಾಗಲಿದ್ದು, ಎಲ್‌ಇಡಿ ದೀಪಗಳು, ಶಾಯಿ, ಚಾಕು, ಬ್ಲೇಡ್, ಪೆನ್ಸಿಲ್ ಶಾರ್ಪನರ್, ಸ್ಪೂನ್, ಪೋರ್ಕ್ಸ್, ಏಣಿ, ಸ್ಕಿಮ್ಮರ್, ಕೇಕ್ ಸರ್ವರ್, ಲೋಹ ಮುದ್ರಿತ ಸರ್ಕ್ಯೂಟ್ ಬೋರ್ಡ್‌ಗಳ ಮೇಲೆ ಶೇಕಡ 18ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಮತ್ತಷ್ಟು ದುಬಾರಿಯಾಗಲಿದೆ.

ವಿದ್ಯುತ್ ಚಾಲಿತ ಪಂಪ್‌ಗಳು, ಸೈಕಲ್ ಪಂಪ್, ಡೈರಿ ಯಂತ್ರೋಪಕರಣ, ಶ್ರೇಣೀಕರಿಸಿದ ಬೀಜಗಳು, ಧಾನ್ಯದ ಕಾಳುಗಳಿಗೆ ಬಳಸುವ ಯಂತ್ರಗಳು, ಗಿರಣಿ ಉದ್ಯಮದಲ್ಲಿ ಬಳಸುವ ಯಂತ್ರಗಳು, ವೆಟ್‌ ಗ್ರೈಂಡರ್ ಮೇಲೂ ಶೇಕಡ 18 ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಇವುಗಳ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳವಾಗಲಿದೆ.

 ಆಸ್ಪತ್ರೆ ಬಿಲ್ ಮೇಲೂ ಜಿಎಸ್‌ಟಿ

ಆಸ್ಪತ್ರೆ ಬಿಲ್ ಮೇಲೂ ಜಿಎಸ್‌ಟಿ

ಚೆಕ್‌ಗಳ ವಿತರಣೆಗೆ ಬ್ಯಾಂಕ್‌ಗಳು ವಿಧಿಸುವ ಶುಲ್ಕದ ಮೇಲೆ ಶೇಕಡಾ 18 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ದಿನಕ್ಕೆ 1,000 ರುಪಾಯಿಗಿಂತ ಕಡಿಮೆ ದರ ಇರುವ ಹೋಟೆಲ್ ಕೊಠಡಿಗಳ ಬಾಡಿಗೆ ಶೇಕಡ 12 ರಷ್ಟು ತೆರಿಗೆ ವಿಧಿಸಲಾಗಿದ್ದು, ಸೋಮವಾರದಿಂದ ಜಾರಿಗೆ ಬರಲಿದೆ.

ಪ್ರತಿ ದಿನ 5000 ರುಪಾಯಿ ಮೀರಿದ ಶುಲ್ಕ ವಿಧಿಸುವ ಆಸ್ಪತ್ರೆಯ ರೋಗಿಗಳ ವಾರ್ಡ್‌ಗಳಿಗೆ (ಐಸಿಯು ಹೊರತುಪಡಿಸಿ) ಶೇಕಡಾ 5 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಸೋಲಾರ್ ವಾಟರ್ ಹೀಟರ್ ಮತ್ತು ಸಿಸ್ಟಮ್ ಮೇಲೆ ಶೇಕಡ 12 ರಷ್ಟು ತೆರಿಗೆ ವಿಧಿಸಲಾಗಿದೆ. ಚರ್ಮದಿಂದ ತಯಾರಿಸಿದ ಉತ್ಪನ್ನಗಳ ಮೇಲೆ, ನಕ್ಷೆಗಳು, ಚಾರ್ಟ್‌ಗಳ ಮೇಲೂ ಶೇಕಡ 12 ರಷ್ಟು ತೆರಿಗೆ ವಿಧಿಸಲಾಗಿದೆ.

 ಕಾಮಗಾರಿಗಳ ಒಪ್ಪಂದದ ಹಣದ ಮೇಲೂ ತೆರಿಗೆ

ಕಾಮಗಾರಿಗಳ ಒಪ್ಪಂದದ ಹಣದ ಮೇಲೂ ತೆರಿಗೆ

ರಸ್ತೆಗಳು, ಸೇತುವೆಗಳು, ರೈಲುಮಾರ್ಗಗಳು, ಮೆಟ್ರೋ, ತ್ಯಾಜ್ಯನೀರಿನ ಸಂಸ್ಕರಣಾ ಘಟಕ, ಸ್ಮಶಾನ ಮತ್ತು ಇತರವುಗಳಿಗೆ ಶೇಕಡ 18 ರಷ್ಟು ತೆರಿಗೆ ವಿಧಿಸಲಾಗಿದೆ. ಕಾಮಗಾರಿಗಳ ಒಪ್ಪಂದ, ಐತಿಹಾಸಿಕ ಸ್ಮಾರಕಗಳು, ಕಾಲುವೆಗಳು, ಅಣೆಕಟ್ಟುಗಳು, ಪೈಪ್‌ಲೈನ್‌ಗಳು, ನೀರು ಪೂರೈಕೆಗಾಗಿ ಸ್ಥಾವರಗಳು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಇತ್ಯಾದಿಗಳಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಅಧಿಕಾರಿಗಳು ಮತ್ತು ಅದರ ಉಪ-ಗುತ್ತಿಗೆದಾರರಿಗೆ ಕೆಲಸದ ಗುತ್ತಿಗೆ ಪಡೆಯುವ ಮೊತ್ತದ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ.


ಮಣ್ಣಿನ ಕೆಲಸಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಒದಗಿಸಲಾದ ಕೆಲಸದ ಗುತ್ತಿಗೆ ಮತ್ತು ಉಪ ಗುತ್ತಿಗೆಗಳ ಮೊತ್ತದ ಮೇಲೆ ಶೇಕಡ 12 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜುಲೈ 1, 2017 ರಂದು ಪರಿಚಯಿಸಲಾಯಿತು ಮತ್ತು ಜಿಎಸ್‌ಟಿ ಜಾರಿಯಿಂದ ಉಂಟಾಗುವ ಆದಾಯ ನಷ್ಟಕ್ಕೆ ಜೂನ್ 2022 ರವರೆಗೆ ಪರಿಹಾರವನ್ನು ರಾಜ್ಯಗಳಿಗೆ ನೀಡುವ ಭರವಸೆ ನೀಡಲಾಯಿತು.

English summary
The 47th GST meeting held in Chandigarh in June saw GST rates hiked on many items. The new GST rate will come into force from Monday and many household items including hotels and bank services will become more expensive.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X