• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೂಗಲ್‌ ಮಾತೃಸಂಸ್ಥೆ ಆಲ್ಫಾಬೆಟ್‌ನಿಂದ 10,000 ಉದ್ಯೋಗಿ ವಜಾಕ್ಕೆ ಚಿಂತನೆ

|
Google Oneindia Kannada News

ನವದೆಹಲಿ, ನವೆಂಬರ್‌ 22: ಟ್ವಿಟ್ಟರ್‌, ಫೇಸ್‌ಬುಕ್‌, ಅಮೆಜಾನ್‌ ಹಾಗೂ ಮೈಕ್ರೋಸಾಫ್ಟ್‌ ಬಳಿಕ ಈಗ ಗೂಗಲ್‌ನ ಮಾತೃಸಂಸ್ಥೆಯಾದ ಆಲ್ಫಾಬೆಟ್‌ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಳಪೆ ಕಾರ್ಯಕ್ಷಮತೆಯ ನೆಪವೊಡ್ಡಿ ಕಂಪೆನಿಯ ಶೇ. 6ರಷ್ಟು ಅಂದರೆ ಸುಮಾರು 10,000 ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ.

ವರದಿಗಳ ಪ್ರಕಾರ ಹೊಸ ಶ್ರೇಯಾಂಕ ಹಾಗೂ ಕಾರ್ಯಕ್ಷಮತೆಯ ಸುಧಾರಣೆಯ ಕಾರಣವೊಡ್ಡಿ ಬರೋಬ್ಬರಿ 10,000 ಉದ್ಯೋಗಿಗಳನ್ನು ತೆಗೆದುಹಾಕಲು ಗೂಗಲ್‌ನ ಆಲ್ಫಾಬೆಟ್‌ ಯೋಜಿಸಿದೆ. ಹೊಸ ಕಾರ್ಯನಿರ್ವಾಹಕರು ಮುಮದಿನ ವರ್ಷದ ಆರಂಭದಲ್ಲಿ ಹಲವಾರು ಕಡಿಮೆ ಕಾರ್ಯಕ್ಷಮತೆಯುಳ್ಳ ಉದ್ಯೋಗಿಗಳನ್ನು ಕೈಬಿಡಲು ಮುಂದಾಗಲಿದೆ. ವಿಭಾಗದ ವ್ಯವಸ್ಥಾಪಕರು ಅವರಿಗೆ ಬೋನಸ್‌ ನೀಡುವುದು ಹಾಗೂ ಸ್ಟಾಕ್‌ ಅನುದಾನ ನೀಡುವುದನ್ನು ತಪ್ಪಿಸಲು ರೇಟಿಂಗ್‌ ನೀಡುವುದನ್ನು ತಪ್ಪಿಸಬಹುದು ಎಂದು ವರದಿಗಳು ತಿಳಿಸಿವೆ.

Largest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವುLargest Layoffs of 2022 : ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಪ್ರಮುಖ ಕಂಪನಿಗಳಿವು

ಹೊಸ ವ್ಯವಸ್ಥೆಯಡಿಯಲ್ಲಿ ಕಂಪೆನಿಯ ವ್ಯವಹಾರದ ಮೇಲೆ ಅವರ ಪ್ರಭಾವದ ದೃಷ್ಟಿಯಿಂದ 6 ಪ್ರತಿಶತ ಉದ್ಯೋಗಿಗಳನ್ನು ಅಥವಾ ಸರಿಸುಮಾರು 10,000 ಜನರನ್ನು ಕಡಿಮೆ ಕಾರ್ಯಕ್ಷಮತೆಯುಳ್ಳವರು ಎಂದು ವರ್ಗೀಕರಿಸಲು ವ್ಯವಸ್ಥಾಪಕರಿಗೆ ನಿರ್ದೇಶನ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಯು ಹೆಚ್ಚಿನ ರೇಟಿಂಗ್ ಗಳಿಸುವ ಉದ್ಯೋಗಿಗಳ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.

ವರದಿಯ ಪ್ರಕಾರ ಆಲ್ಫಾಬೆಟ್‌ನಲ್ಲಿನ ಹೊಸ ಕಾರ್ಯಕ್ಷಮತೆ ವ್ಯವಸ್ಥೆಯು ಉದ್ಯೋಗಿಗಳ ಬೋನಸ್‌ಗಳು ಮತ್ತು ಸ್ಟಾಕ್ ಅನುದಾನವನ್ನು ಪಾವತಿಸುವುದನ್ನು ತಪ್ಪಿಸಲು ರೇಟಿಂಗ್‌ಗಳನ್ನು ನಿಲ್ಲಿಸಬಹುದು ಎನ್ನಲಾಗಿದೆ. ಆದರೆ ಉದ್ಯೋಗಿಗಳ ವಜಾ ಬಗ್ಗೆ ವರದಿಯ ಕುರಿತು ಆಲ್ಫಾಬೆಟ್ ಇನ್ನೂ ಪ್ರತಿಕ್ರಿಯಿಸಿಲ್ಲ. ಆಲ್ಫಾಬೆಟ್ ಸುಮಾರು 1,87,000 ಉದ್ಯೋಗಿಗಳ ಕಾರ್ಯಪಡೆಯನ್ನು ಹೊಂದಿದೆ.

ಹಿಂದಿನ ವರ್ಷಕ್ಕಿಂತ 27 ಶೇಕಡಾ ಕಡಿಮೆ ಲಾಭ

ಹಿಂದಿನ ವರ್ಷಕ್ಕಿಂತ 27 ಶೇಕಡಾ ಕಡಿಮೆ ಲಾಭ

ಯುಎಸ್‌ ಸೆಕ್ಯೂರಿಟೀಸ್ ಅಂಡ್ ಎಕ್ಸ್‌ಚೇಂಜ್ ಕಮಿಷನ್ ಫೈಲಿಂಗ್ ಪ್ರಕಾರ ಕಳೆದ ವರ್ಷ ಆಲ್ಫಾಬೆಟ್ ಉದ್ಯೋಗಿಗಳಿಗೆ ಸರಾಸರಿ ಪರಿಹಾರವು ಸುಮಾರು $2,95,884 ಆಗಿತ್ತು. ಆಲ್ಫಾಬೆಟ್ ಮೂರನೇ ತ್ರೈಮಾಸಿಕದಲ್ಲಿ $13.9 ಶತಕೋಟಿ ನಿವ್ವಳ ಲಾಭವನ್ನು ಪಡೆದಿದೆ. ಆದರೆ ಇದು ಹಿಂದಿನ ವರ್ಷಕ್ಕಿಂತ 27 ಶೇಕಡಾ ಕಡಿಮೆಯಾಗಿದೆ. ಜಾಗತಿಕ ಮಂದಗತಿಯ ವ್ಯವಹಾರ ಹಾಗೂ ಆರ್ಥಿಕ ಹಿಂಜರಿತದ ನಡುವೆ ಕಂಪೆನಿ ಆದಾಯವು 6 ಶೇಕಡಾ ಏರಿಕೆಯಾಗಿ $69.1 ಶತಕೋಟಿಗೆ ನಿಂತಿದೆ.

Amazon Lay Offs : ಬರೋಬ್ಬರಿ 10,000 ಉದ್ಯೋಗಿಗಳ ವಜಾಕ್ಕೆ ಅಮೆಜಾನ್‌ ಚಿಂತನೆAmazon Lay Offs : ಬರೋಬ್ಬರಿ 10,000 ಉದ್ಯೋಗಿಗಳ ವಜಾಕ್ಕೆ ಅಮೆಜಾನ್‌ ಚಿಂತನೆ

ಪಿಚ್ಚೈನಿಂದ ಉದ್ಯೋಗ ಕಡಿತದ ಸುಳಿವು

ಪಿಚ್ಚೈನಿಂದ ಉದ್ಯೋಗ ಕಡಿತದ ಸುಳಿವು

ಗೂಗಲ್‌ ಸಿಇಒ ಸುಂದರ್ ಪಿಚೈ ಅವರು ಆಲ್ಫಾಬೆಟ್ ಅನ್ನು ಶೇಕಡಾ 20ರಷ್ಟು ಹೆಚ್ಚು ಪರಿಣಾಮಕಾರಿಯಾಗಿ ಮುನ್ನಡೆಸುವ ಗುರಿಯನ್ನು ಹೊಂದಿದ್ದು, ಉದ್ಯೋಗ ಕಡಿತದ ಸುಳಿವು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ತಮ್ಮ ಉದ್ಯೋಗಿಗಳನ್ನು ಕಡಿತಗೊಳಿಸಿದರೆ ಕಂಪನಿಯಲ್ಲಿ ಬೇರೆ ಕಡೆ ಅರ್ಜಿ ಸಲ್ಲಿಸಲು ಆಲ್ಫಾಬೆಟ್ ಕೆಲವು ಉದ್ಯೋಗಿಗಳಿಗೆ 60 ದಿನಗಳ ಕಾಲಾವಕಾಶ ನೀಡುತ್ತಿದೆ ಎಂಬ ವರದಿಗಳು ಈ ಹಿಂದೆ ಪ್ರಕಟಗೊಂಡಿದ್ದವು.

ಕಂಪೆನಿ ವಿಷಯದಲ್ಲಿ ಬುದ್ಧಿವಂತರಾಗುವುದು ಮುಖ್ಯ

ಕಂಪೆನಿ ವಿಷಯದಲ್ಲಿ ಬುದ್ಧಿವಂತರಾಗುವುದು ಮುಖ್ಯ

ಕಂಪನಿಯು ಕ್ವಾಂಟಮ್ ಕಂಪ್ಯೂಟಿಂಗ್‌ನಂತಹ ದೀರ್ಘಾವಧಿಯ ಯೋಜನೆಗಳಲ್ಲಿ ಇನ್ನೂ ಹೂಡಿಕೆ ಮಾಡುತ್ತಿದೆ. ಆದರೆ ಕಂಪೆನಿ ವಿಷಯದಲ್ಲಿ ಬುದ್ಧಿವಂತರಾಗಿರುವುದು, ಮಿತವ್ಯಯಕಾರಿಯಾಗಿರುವುದು ಹಾಗೂ ಹೆಚ್ಚು ಪರಿಣಾಮಕಾರಿಯಾಗಿರುವುದು ಮುಖ್ಯ. ನಮ್ಮ ಉದ್ಯೋಗಿಗಳ ಬಗ್ಗೆ ಕಾಳಜಿ ವಹಿಸಲು ನಾವು ಬದ್ಧರಾಗಿದ್ದೇವೆ. ನಾವು ಆರ್ಥಿಕವಾಗಿ ಕಠಿಣ ಸಂದರ್ಭದಲ್ಲಿ ಕೆಲಸ ಮಾಡುತ್ತಿದ್ದೇವೆ. ಕಂಪನಿಯಾಗಿ ನಾವು ಒಗ್ಗೂಡಿ ಮತ್ತು ಒಟ್ಟಿಗೆ ಕೆಲಸ ಮಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಎಂದು ಪಿಚೈ ಹೇಳಿದರು.

ಹೊಸ ಉದ್ಯೋಗಿಗಳ ನೇಮಕಕ್ಕೆ ತಡೆ

ಹೊಸ ಉದ್ಯೋಗಿಗಳ ನೇಮಕಕ್ಕೆ ತಡೆ

ಇದಕ್ಕೂ ಮೊದಲು ಯುಎಸ್‌ನಲ್ಲಿ ನಡೆದ ಕೋಡ್ ಕಾನ್ಫರೆನ್ಸ್‌ನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿಚೈ, ಕಂಪನಿಯು ಆರ್ಥಿಕ ಪರಿಸ್ಥಿತಿಗಳನ್ನು ಸ್ಥಿಮಿತಗೊಳಿಸಲು ಹೆಚ್ಚು ಪ್ರಯತ್ನಿಸುತ್ತದೆ. ಆರ್ಥಿಕ ಕಾರ್ಯಕ್ಷಮತೆಯು ಜಾಹೀರಾತು ಖರ್ಚು, ಗ್ರಾಹಕ ಖರ್ಚು ಮತ್ತು ಮುಂತಾದವುಗಳಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಅವರು ಸಭೆಯಲ್ಲಿ ಹೇಳಿದ್ದರು. ಹೊಸ ಉದ್ಯೋಗಿಗಳನ್ನು ನೇಮಿಸಿಕೊಳ್ಳುವುದನ್ನು ಗೂಗಲ್ ನಿಲ್ಲಿಸಿದೆ. ಉದ್ಯೋಗಿಗಳು ಕಂಪೆನಿ ನೀಡಿರುವ ಗುರಿಗಳನ್ನು ಪೂರೈಸದಿದ್ದಲ್ಲಿ ಅಸ್ತಿತ್ವದಲ್ಲಿರುವ ಕೆಲವು ಉದ್ಯೋಗಿಗಳಿಗೆ ಅಮಾನತು ಪತ್ರ ನೀಡಲಾಗುತ್ತದೆ ಎಂದು ವರದಿಯಾಗಿದೆ.

English summary
After Twitter, Facebook, Amazon and Microsoft, now Google's parent company, Alphabet, has acquired a percentage of the underperforming fake company. 6 percent i.e. about 10,000 employees are going to be laid off.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X