ವೆಬ್ ಬ್ರೌಸಿಂಗ್: ಐಇ ಅಧಿಪತ್ಯ ಅಂತ್ಯ, ಕ್ರೋಮ್ ಈಗ ಕಿಂಗ್

Posted By:
Subscribe to Oneindia Kannada

ಬೆಂಗಳೂರು, ಮೇ 03: ವೆಬ್ ಬ್ರೌಸಿಂಗ್ ಕ್ಷೇತ್ರದಲ್ಲಿ ಮೈಕ್ರೋಸಾಫ್ಟ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ (ಐಇ) ನಡೆಸಿದ್ದ ಏಕಚಕ್ರಾಧಿಪತ್ಯ ಕೊನೆಗೊಂಡಿದೆ. ಗೂಗಲ್ ನ ಕ್ರೋಮ್ ಬ್ರೌಸರ್ ಈಗ ಹೊಸ ಕಿಂಗ್ ಆಗಿ ಉದಯಿಸಿದೆ. ಅತ್ಯಂತ ಜನಪ್ರಿಯ ಬ್ರೌಸರ್ ಆಗಿ ಇಂಟರ್ನೆಟ್ ನಲ್ಲಿ ಕ್ರೋಮ್ ಅಧಿಕಾರ ಸ್ಥಾಪಿಸಿದೆ.

2008ರಲ್ಲಿ ಗೂಗಲ್ ನಿಂದ ಹೊರ ಬಂದ ಕ್ರೋಮ್ ಬ್ರೌಸರ್ 2012ರಲ್ಲೇ ಜನಪ್ರಿಯತೆಯ ತುತ್ತತುದಿ ತಲುಪಿತ್ತು. ಆದರೆ, ಕಂಪ್ಯೂಟರ್, ಇಂಟರ್ನೆಟ್ ಎಂದರೆ ಜನಕ್ಕೆ ಮೈಕ್ರೋಸಾಫ್ಟ್, ಇಂಟರ್ನೆಟ್ ಎಕ್ಸ್ ಪ್ಲೋರರ್ ಎಂಬ ನಂಬಿಕೆಯನ್ನು ಕ್ರೋಮ್ ಬದಲಾಯಿಸುತ್ತಾ ಬಂದಿತು. [ಬ್ರೌಸರ್ ನಲ್ಲಿ ಕನ್ನಡದ ಸ್ಪೆಲ್ ಚೆಕ್ಕರ್ ಹಾಕ್ಕೊಳ್ಳಿ]

ಏಪ್ರಿಲ್ ತಿಂಗಳ ಕಂಪ್ಯೂಟರ್ ವರ್ಲ್ಡ್ ಅಂಕಿ ಅಂಶದಂತೆ ಕ್ರೋಮ್ ಈಗ ಬ್ರೌಸರ್ ಮಾರುಕಟ್ಟೆಯಲ್ಲಿ ಶೇ 41.66ರಷ್ಟು ಪ್ರಾಬಲ್ಯ ಹೊಂದಿದೆ.ಮೈಕ್ರೋಸಾಫ್ಟ್ ನ ಬ್ರೌಸರ್ ಗಳು ಶೇ 41.35ರಷ್ಟು ಪಾಲು ಹೊಂದಿವೆ.

Google Chrome crowned as Most Popular Web Browser

ಕ್ರೋಮ್ ಜನಪ್ರಿಯತೆ ಕಾರಣ!: ಬ್ರೌಸರ್ ನಿಂದ ಡೌನ್ ಲೋಡ್ ಆಗುವ ಪ್ರತಿ ಫೈಲ್ ಗಳನ್ನು ಸೂಕ್ಷ್ಮವಾಗಿ ಸ್ಕ್ಯಾನ್ ಮಾಡಿ ಸೇಫ್ ಬ್ರೌಸಿಂಗ್ ಗೆ ಇನ್ನೊಂದು ಹೆಸರಾಗಿದೆ. [ವೆಬ್ ಸೈಟ್ ನಿಂದ ವಾಟ್ಸಪ್ ಬಳಸುವುದು ಹೇಗೆ?]

* ಫಿಶಿಂಗ್ ಹಾಗೂ ಹಾನಿಕಾರಕ ವೆಬ್ ತಾಣಗಳ ಬಗ್ಗೆ ತಕ್ಷಣವೇ ಸೂಚನೆ ನೀಡಲಾಗುತ್ತದೆ.

* ಅಡೋಬ್ ಫ್ಲಾಶ್ ಪ್ಲೇಯರ್ ಗೆ ಹೆಚ್ಚಿನ ಸಹಕಾರ ಈ ಬ್ರೌಸರ್ ನೀಡುತ್ತಿದೆ. ಹೀಗಾಗಿ ಆಡಿಯೋ ವಿಡಿಯೋ ಪ್ಲೇ ಸುಲಭವಾಗಿದೆ.

* 3ಡಿ ಸಿಎಸ್ಎಸ್ ಗೆ ಬೆಂಬಲ ಇರುವುದರಿಂದ 3ಡಿ ಎಫೆಕ್ಟ್ ನೀಡುವ ವೆಬ್ ಅಪ್ಲಿಕೇಷನ್ ಹಾಗೂ ವೆಬ್ ಪುಟಗಳನ್ನು ಸ್ಪಷ್ಟವಾಗಿ ನೋಡಬಹುದು. [ಅಂತರ್ಜಾಲ ಲೋಕದಲ್ಲಿ ಮಿನುಗುವ ನಕ್ಷತ್ರ ಯುಸಿ ಬ್ರೌಸರ್]

* ವಿಂಡೋಸ್, ಮ್ಯಾಕ್ ಹಾಗೂ ಲೈನಕ್ಸ್ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಕಂಪ್ಯೂಟರ್ ಗಳಲ್ಲಿ ಕ್ರೋಮ್ ಬ್ರೌಸರ್ ಉಚಿತವಾಗಿ ಡೌನ್ ಲೋಡ್ ಮಾಡಬಹುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Google Chrome crowned as Most Popular Web Browser with 41.66 percent of the market share compared to Microsoft's Internet Explorer which as 41.35 percent.
Please Wait while comments are loading...