ಯೆಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ದಾರರಿಗೆ ಮಹತ್ವದ ಸೂಚನೆ

ಬೆಂಗಳೂರು, ಮಾರ್ಚ್ 11: ಯೆಸ್ ಬ್ಯಾಂಕ್ ಜೊತೆಗಿನ ಎಲ್ಲಾ ಆರ್ಥಿಕ ವ್ಯವಹಾರಕ್ಕೆ ಕಡಿತಬಿದ್ದ ಬಳಿಕ ಕಂಗಾಲಾಗಿದ್ದ ಗ್ರಾಹಕರಿಗೆ ಹಂತ ಹಂತವಾಗಿ ನೆಮ್ಮದಿಯ ಸುದ್ದಿಯನ್ನು ನೀಡಲಾಗುತ್ತಿದೆ. ದುಡ್ಡು ವಿಥ್ ಡ್ರಾ ಮಾಡುವುದು ಹೇಗೆ? ಎಂದು ಚಿಂತಿಸುತ್ತಿದ್ದ ಗ್ರಾಹಕರಿಗೆ ಯೆಸ್ ಬ್ಯಾಂಕ್ ಸಿಹಿ ಸುದ್ದಿ ನೀಡಿತ್ತು. ಈಗ ಕ್ರೆಡಿಟ್ ಕಾರ್ಡ್ ಬಾಕಿ ಉಳಿಸಿಕೊಂಡವರಿಗೆ ಮಹತ್ವದ ಸೂಚನೆ ನೀಡಿದೆ.

Recommended Video

      Good news for Yes Bank Credit Card holders.

      ಯೆಸ್ ಬ್ಯಾಂಕ್ ಗ್ರಾಹಕರು ಈಗ ಎಟಿಎಂನಿಂದ ಹಣ ವಿಥ್ ಡ್ರಾ ಮಾಡಿಕೊಳ್ಳಬಹುದಾಗಿದೆ. ಯೆಸ್ ಬ್ಯಾಂಕ್ ಡೆಬಿಟ್ ಕಾರ್ಡನ್ನು ಯೆಸ್ ಬ್ಯಾಂಕ್ ಎಟಿಎಂ ಅಲ್ಲದೆ ಇತರೆ ಎಟಿಎಂ ಬ್ಯಾಂಕ್ ಎಟಿಎಂಗಳಲ್ಲೂ ಬಳಸಬಹುದು ಎಂದು ಯೆಸ್ ಬ್ಯಾಂಕ್ ಅಧಿಕೃತವಾಗಿ ಟ್ವೀಟ್ ಮಾಡಿತ್ತು. ಈಗ ಕ್ರೆಡಿಟ್ ಕಾರ್ಡ್ ಬಾಕಿ ಮೊತ್ತ ಪಾವತಿ, ಸಾಲ ಪಾವತಿ ಬಗ್ಗೆ ಟ್ವೀಟ್ ಮಾಡಿದೆ.

      Good news for Yes Bank Credit Card holders

      ಇತರೆ ಬ್ಯಾಂಕ್ ಖಾತೆಗಳ ಮೂಲಕವೂ ಸಾಲ ಹಾಗೂ ಕ್ರೆಡಿಟ್ ಕಾರ್ಡ್ ಬಾಕಿ ಕಟ್ಟುವ ಅವಕಾಶವನ್ನು ನೀಡಲಾಗಿದೆ ಎಂದು ಯೆಸ್ ಬ್ಯಾಂಕ್ ಹೇಳಿದೆ.

      ಬ್ಯಾಂಕಿಂಗ್ ನಿಯಮವನ್ನು ಗಾಳಿಗೆ ತೂರಿದ ಕಾರಣದಿಂದಾಗಿ ಯೆಸ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಸೂಪರ್ ಸೀಡ್ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

      ಆರ್ ಬಿಐ ನಿರ್ದೇಶನದಂತೆ ಹಣಕಾಸು ಇಲಾಖೆ ಮಾರ್ಚ್ 5ರಂದು ಹೊರಡಿಸಿದ ಸುತ್ತೋಲೆಯಂತೆ ಹಣ ವಿತ್‌ ಡ್ರಾ ಮಾಡಲು 50,000 ರೂಪಾಯಿಗಳ ಮಿತಿ ಹೇರಲಾಗಿದ್ದು, ಮಾರ್ಚ್ 5ರಿಂದ ಏಪ್ರಿಲ್ 3ರ ವರೆಗೆ ನಿರ್ಬಂಧ ಜಾರಿಯಲ್ಲಿರಲಿದೆ. ಯೆಸ್ ಬ್ಯಾಂಕ್ ಜೊತೆಗೆ ಡಿಜಿಟಲ್ ಪೇಮೆಂಟ್ ಒಪ್ಪಂದ ಮಾಡಿಕೊಂಡಿದ್ದ ಸಹ ಸಂಸ್ಥೆಗಳ ವ್ಯವಹಾರಕ್ಕೂ ತೊಂದರೆ ಉಂಟಾಗಿದೆ. ಮುಖ್ಯವಾಗಿ ಫೋನ್ ಪೇ ವ್ಯವಹಾರ ಕೂಡಾ ಸರಿಯಾಗಿ ಆಗುತ್ತಿಲ್ಲ. ಈ ಕುರಿತಂತೆ ಮುಖ್ಯ ಕಾರ್ಯಕಾರಿ ಸಮೀರ್ ನಿಗಮ್ ಅವರು ಸ್ಪಷ್ಟಪಡಿಸಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+