ಗ್ರಾಹಕರಿಗೊಂದು ಒಳ್ಳೆ ಸುದ್ದಿ: ಎಸ್ಬಿಐ ಐಎಂಪಿಎಸ್ ದರ ಕಡಿತ!

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 26: ಎಸ್ ಬಿ ಐ ಉಳಿತಾಯ ಖಾತೆಯ ಕನಿಷ್ಠ ಮಿತಿಯನ್ನು ಈ ತಿಂಗಳ ಆರಂಭದಲ್ಲಿ ಇಳಿಕೆ ಮಾಡಲಾಗಿತ್ತು. ಈಗ ಗ್ರಾಹಕರಿಗೆ ಮತ್ತೊಂದು ಒಳ್ಳೆ ಸುದ್ದಿ ಸಿಕ್ಕಿದೆ. ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡುವ ಗ್ರಾಹಕರಿಗೆ ಎಸ್ ಬಿಐ ನೆಮ್ಮದಿ ನೀಡಿದೆ.

ಒಂದೇ ದಿನ 60 ಸಾವಿರ ಕೋಟಿ ಮಾರ್ಕೆಟ್ ಮೌಲ್ಯ ಹೆಚ್ಚಿಸಿಕೊಂಡ ಎಸ್ ಬಿಐ

ಆನ್ ಲೈನ್ ಮೂಲಕ ಹಣ ವರ್ಗಾವಣೆ ಮಾಡುವಾಗ ಐಎಂಪಿಎಸ್ ಬಳಸುವ ಗ್ರಾಹಕರಿಗೆ ವಿಧಿಸುತ್ತಿದ್ದ ಶುಲ್ಕವನ್ನು ಶೇಕಡಾ 80ರಷ್ಟು ಇಳಿಕೆ ಮಾಡಿದೆ. ಉದಾಹರಣೆಗೆ ಗ್ರಾಹಕರು ಸಾವಿರ ರೂಪಾಯಿಯನ್ನು ಐಎಂಪಿಎಸ್ ಮೂಲಕ ವರ್ಗಾವಣೆ ಮಾಡಿದರೆ ಯಾವುದೇ ಶುಲ್ಕ ಕಡಿತವಾಗುವುದಿಲ್ಲ.

Good news for SBI customers, IMPS service charges slashed up to 80 pct

ಐಎಂಪಿಎಸ್ ಮೂಲಕ 1001 ರೂಪಾಯಿ ಇಂದ 10 ಸಾವಿರ ರೂಪಾಯಿಯವರೆಗೆ ಹಣ ವರ್ಗಾವಣೆ ಮಾಡಿದಲ್ಲಿ 1 ರೂಪಾಯಿಯನ್ನು ಬ್ಯಾಂಕಿಗೆ ಶುಲ್ಕ ರೂಪದಲ್ಲಿ ನೀಡಬೇಕಾಗುತ್ತದೆ. 10 ಸಾವಿರದಿಂದ 1 ಲಕ್ಷದವರೆಗೆ ಹಣ ವರ್ಗಾವಣೆ ಮಾಡಲು 2 ರೂಪಾಯಿ ಕಡಿತವಾಗಲಿದೆ.

ಎಸ್ ಬಿಐ ತನ್ನ ಅಧಿಕೃತ ಟ್ವೀಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದೆ. ಈ ಮೊದಲು ಬ್ಯಾಂಕ್ ಉಳಿತಾಯ ಖಾತೆ ಕನಿಷ್ಠ ಮಿತಿಯನ್ನು 5 ಸಾವಿರ ರೂಪಾಯಿ ಬದಲು 3 ಸಾವಿರ ರೂಪಾಯಿಗೆ ಇಳಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a good news for the SBI customers, the bank has slashed Immediate Payment Service (IMPS) charges up to 80 pct. This latest development by the State Bank of India comes as a huge relief for the SBI customers reports Indian Express.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ