Get Updates
Get notified of breaking news, exclusive insights, and must-see stories!

Gold Price Today: ಮತ್ತೆ ಸತತವಾಗಿ ಚಿನ್ನ-ಬೆಳ್ಳಿ ಬೆಲೆ ಹೆಚ್ಚಳ, ಹೂಡಿಕೆದಾರರಿಗೆ ಸಿಹಿ, ಗ್ರಾಹಕರಿಗೆ ಕಹಿ

Gold Price on Feb 21st: ಭಾರತ ಸೇರಿದಂತೆ ಜಾಗತಿಕವಾಗಿ ಹೆಚ್ಚು ಬೇಡಿಕೆ ಇರುವ ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತ ಮುಂದುವರಿದಿದೆ. ಸತತ ಮೂರನೇ ದಿನವು ಚಿನ್ನದ ಬೆಲೆ ಹೆಚ್ಚಳ ಮುಂದುವರಿದಿದೆ. ಬೆಳ್ಳಿಯ ದರ ಎರಡು ದಿನದಲ್ಲಿ ಬರೋಬ್ಬರಿ 20,000 ಸಾವಿರ ರೂಪಾಯಿ ಹೆಚ್ಚಾಗಿದೆ. ಇಂದು ನಗರವಾರು ಚಿನ್ನದ ಬೆಲೆ ಎಷ್ಟಿದೆ?, ಇತ್ತೀಚೆಗೆ ಎಷ್ಟು ಬಾರಿ ಈ ಲೋಹಗಳ ಬೆಲೆ ಏರಿಕೆ ಮತ್ತು ಇಳಿಕೆ ಕಂಡಿದೆ ಎಂಬ ಮಾಹಿತಿ ಇಲ್ಲಿದೆ.

ಅಂತಾರಾಷ್ಟ್ರೀಯ ಯುದ್ಧಗಳು, ರಾಜತಾಂತ್ರಿಕ ಕಾರಣ, ಸುಂಕ ನೀತಿ, ಡಾಲರ್ ಮೌಲ್ಯ ಕುಸಿತ ಹಾಗೂ ಕೇಂದ್ರೀಯ ಬ್ಯಾಂಕ್‌ಗಳಿಂದ ಹೆಚ್ಚಿನ ಚಿನ್ನ ಖರೀದಿ, ಕೈಗಾರಿಕೆಗೆ ಬೆಳ್ಳಿ ಬಳಕೆಯಲ್ಲಿ ಹೆಚ್ಚಳ ಸೇರಿ ಕೆಲವು ಕಾರಣಗಳಿಂದಾಗಿ ಚಿನ್ನ ಮತ್ತು ಬೆಳ್ಳಿ ದರಗಳು ಗರಿಷ್ಟ ಮಟ್ಟ ತಲುಪಿದ್ದವು. ಫೆಬ್ರವರಿ 1 ಹೊತ್ತಿಗೆ ಇಳಿಕೆ ಆಗಿದ್ದು, ಅಲ್ಲಿಂದ ಏರಿಳಿತ ಮುಂದುವರಿದಿದೆ.

Gold Silver Price

ಇಂದಿನ ಚಿನ್ನ ಬೆಳ್ಳಿ ದರ ಅಪ್ಡೇಟ್

ಇಂದು ಶನಿವಾರ (ಫೆ.21) 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆ 175 ರೂ. ಹೆಚ್ಚಾಗುವ ಮೂಲಕ ದರ 14,600 ರೂ. ತಲುಪಿದೆ. ಅದೇ ರೀತಿ 24 ಕ್ಯಾರಟ್ ಚಿನ್ನದ ಬೆಲೆ 191 ರೂ. ಹೆಚ್ಚಾಗುವ ಮುಖೇನ ಬೆಲೆಯು 15,928 ರೂಪಾಯಿಗೆ ಏರಿಕೆ ಆಗಿದೆ.

ಈ ಮೇಲಿನಂತೆ ಕ್ರಮವಾಗಿ 10 ಗ್ರಾಂ ಚಿನ್ನದ ಬೆಲೆಯು 1750 ರೂಪಾಯಿ ಏರಿಕೆ ಆಗುವ ಮೂಲಕ ಚಿನ್ನದ ದರ 1,46,000 ರೂಪಾಯಿ ಇದೆ. 1910 ರೂ. ಹೆಚ್ಚಳದಿಂದ 24 ಕ್ಯಾರಟ್ ಬಂಗಾರದ ದರವು 1,59,280 ರೂಪಾಯಿಗೆ ಮುಟ್ಟಿದೆ. ಕಳೆದ ಮೂರು ದಿನಗಳಿಂದಲೂ ನಿರಂತರವಾಗಿ ಚಿನ್ನ ಬೆಲೆ ಹೆಚ್ಚಾಗುತ್ತಲೇ ಬಂದಿದೆ. ಈ ಹೆಚ್ಚಳವು ಚಿನ್ನ -ಬೆಳ್ಳಿ ಹೂಡಿಕೆದಾರರಿಗೆ ಗುಡ್ ನ್ಯೂಸ್ ನೀಡಿದಂತಾಗಿದೆ. ಖರೀದಿಸುವ ಗ್ರಾಹಕರಿಗೆ ಹೊಸ ದರ ಆಘಾತ ನೀಡಿವೆ.

ಒಂದು ಗ್ರಾಂ 22 ಮತ್ತು 24 ಕ್ಯಾರಟ್ ಚಿನ್ನವು ಕ್ರಮವಾಗಿ ಫೆ.19ರಂದು 210 ಮತ್ತು 229, ಫೆಬ್ರವರಿ 20ರಂದು 80 ಮತ್ತು 80 ರೂಪಾಯಿ ಹಾಗೂ ಇಂದು ಫೆಬ್ರವರಿ 21ರಂದು 175 ಮತ್ತು 191 ರೂ. ಹೆಚ್ಚಾಗಿದೆ. ಅದೇ ರೀತಿ ಬೆಳ್ಳಿಯ ದರವು ಮೂರು ದಿನದಲ್ಲಿ ಎರಡು ದಿನ ದಾಖಲೆ ಬೆಲೆಯಲ್ಲಿ ಏರಿಕೆ ಕಂಡಿದೆ. ಒಂದು ದಿನ ಯಥಾ ಸ್ಥಿತಿಯಲ್ಲಿದೆ.

ಬೆಳ್ಳಿ ದರ 20,000 ರೂಪಾಯಿ ಏರಿಕೆ

4.20 ಲಕ್ಷ ರೂಪಾಯಿವರೆಗೆ ತಲಪಿದ್ದ ಚಿನ್ನದ ಬೆಲೆಯು ನಿರಂತರ ಏರಿಳಿಕೆ ಕಾಣುತ್ತಿದೆ. ಇಂದು ಒಂದು ಕೆಜಿ ಬೆಳ್ಳಿಗೆ 5000 ರೂಪಾಯಿ ಹೆಚ್ಚಾಗಿದೆ. ನೆನ್ನೆ ಫೆಬ್ರವರಿ 20 ಶುಕ್ರವಾರ ದರದಲ್ಲಿ ಬದಲಾವಣೆ ಆಗಿರಲಿಲ್ಲ. ಮೊನ್ನೆ ಫೆಬ್ರವರಿ 19ರಂದು ಬರೋಬ್ಬರಿ 15,000 ರೂಪಾಯಿ ಏರಿಕೆ ಆಗಿತ್ತು. ಒಟ್ಟು ಮೂರು ದಿನ ಪೈಕಿ ಎರಡೇ ದಿನದಲ್ಲಿ ಮತ್ತೆ ಗರಿಷ್ಠ ಹೆಚ್ಚಳ ಕಾಣುವಂತಾಯಿತು. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಳ ಕಾಣುವ ಸಾಧ್ಯತೆ ಇದೆ. ಆದರೆ ಹೂಡಿಕೆಗೆ ಇದು ಸೂಕ್ತವಲ್ಲ, ಮಾರುಕಟ್ಟೆಯಲ್ಲಿ ಬದಲಾವಣೆ ಆಗುವ ನಿರೀಕ್ಷೆ ಇದ್ದು, ಅದಾದರೆ ಮತ್ತೆ ಇಳಿಕೆ ಆಗಲೂ ಬಹುದೆಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ನಗರವಾರು 22 ಕ್ಯಾರಟ್ 1ಗ್ರಾಂ ಚಿನ್ನದ ಬೆಲೆ ಪಟ್ಟಿ

ಬೆಂಗಳೂರು -14,440 ರೂಪಾಯಿ

ದೆಹಲಿ -14,440 ರೂಪಾಯಿ

ಚೆನ್ನೈ- 14,565 ರೂಪಾಯಿ

ಮುಂಬೈ-14,440 ರೂಪಾಯಿ

ಹೈದರಾಬಾದ್ -14,440 ರೂಪಾಯಿ

ಅಹಮದಾಬಾದ್ -14,605 ರೂಪಾಯಿ

ಪುಣೆ - 14,440 ರೂಪಾಯಿ

ಕೋಲ್ಕತ್ತಾ -14,440 ರೂಪಾಯಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+