Gold: ನಿಮ್ಮ ಬಳಿ ಈಗಾಗಲೇ ಚಿನ್ನವಿದ್ದರೆ ಗುಡ್‌ನ್ಯೂಸ್: ಚಿನ್ನ ಪ್ರಿಯರಿಗೆ ಬ್ಯಾಡ್‌ನ್ಯೂಸ್
ಕಳೆದ ಮೂರು ವರ್ಷದಿಂದಲೂ ಚಿನ್ನದ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿದೆ. ಆದರೆ 2025ನೇ ಸಾಲಿನಲ್ಲಿ ಚಿನ್ನದ ಬೆಲೆಯು ಗಣನೀಯವಾಗಿ ಹೆಚ್ಚಳವಾಗಿದೆ. ಈಗಾಗಲೇ ಚಿನ್ನದ ಬೆಲೆಯನ್ನು ನೋಡಿ ಚಿನ್ನ ಪ್ರಿಯರು ಕಂಗಾಲಾಗಿದ್ದಾರೆ. ಈ ರೀತಿ ಇರುವಾಗಲೇ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಶೇ 30% ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆಗಳು ನಿರಂತರವಾಗಿ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಈ ವರ್ಷವೂ ಚಿನ್ನದ ಬೆಲೆ ಏರಿಕೆಯ ಹಾದಿಯಲ್ಲೇ ಮುಂದುವರಿಯಲಿದೆ ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ದೇಶೀಯ ಹಾಗೂ ಜಾಗತಿಕ ಆರ್ಥಿಕ ಪರಿಸ್ಥಿತಿ, ಭೌಗೋಳಿಕ-ರಾಜಕೀಯ ಅಸ್ಥಿರತೆಗಳು ಸೇರಿದಂತೆ ಹಲವು ಕಾರಣಗಳಿಗೆ ಚಿನ್ನ ಮತ್ತು ಬೆಳ್ಳಿ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇನ್ನು ಈ ವರ್ಷಾಂತ್ಯದ ಒಳಗೆ ಚಿನ್ನದ ಬೆಲೆ ಹೊಸ ದಾಖಲೆಯನ್ನು ಬರೆಯಲಿದೆ. ಬೆಳ್ಳಿಯ ಬೆಲೆಯಲ್ಲೂ ಹೆಚ್ಚಳ ಮುಂದುವರಿಯಲಿದೆ ಎಂದು ನಿರೀಕ್ಷಿಸಲಾಗಿದೆ.

ವಿವಿಧ ದೇಶಗಳ ನಡುವೆ ಸಂಘರ್ಷ ಹೆಚ್ಚಾಗುತ್ತಿರುವುದು, ಡಾಲರ್ ಮುಂದೆ ರೂಪಾಯಿ ಮೌಲ್ಯವು ಸರ್ವಕಾಲಿಕ ಕುಸಿತ ಕಂಡಿರುವುದು ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆ ಹೆಚ್ಚಳವಾಗುತ್ತಿದೆ. ಈ ಎಲ್ಲಾ ಕಾರಣಗಳಿಂದಾಗಿ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಇದರ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು 10 ಗ್ರಾಂಗೆ ರೂ.1,62,000 ರೂಪಾಯಿಗೆ ಹೆಚ್ಚಳವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ 1,80,000 ರೂಪಾಯಿಗೆ ತಲುಪುವ ಸಾಧ್ಯತೆ ಇದೆ. ಇದು 2025ರ ಅಂತ್ಯದ ಬೆಲೆ ಹೋಲಿಕೆಯಲ್ಲಿ ಸುಮಾರು 30 ಶೇಕಡಾ ಏರಿಕೆಯಾಗಿರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
2025ರ ಅವಧಿಯಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಳವಾಗಿದೆ. 10 ಗ್ರಾಂಗೆ 1,38,000 ರೂಪಾಯಿಯೊಂದಿಗೆ ಮುಕ್ತಾಯಗೊಂಡಿತ್ತು. ಇದು 2024ರಲ್ಲಿ ಇದ್ದ 10 ಗ್ರಾಂ ಚಿನ್ನದ ಬೆಲೆಯ 76,748 ರೂಪಾಯಿಗೆ ಹೋಲಿಕೆ ಮಾಡಿದರೆ ಅಂದಾಜು ಶೇ 80 ಏರಿಕೆಯಾಗಿದೆ ಎಂದು ರೆಫಿನಿಟಿವ್ ಹಾಗೂ ಏಂಜಲ್ ಒನ್ ರಿಸರ್ಚ್ ದತ್ತಾಂಶ ಉಲ್ಲೇಖಿಸಿದೆ.
World Gold Council ಮಾಹಿತಿಯ ಪ್ರಕಾರ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಈಗಾಗಲೇ ಈ ವರ್ಷ ಶೇ.6 ಕ್ಕಿಂತ ಹೆಚ್ಚಳವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಚಿನ್ನದ ಬೆಲೆಯು ಶೇ 60ರಿಂದ70 ಹೆಚ್ಚಳವಾಗಿದೆ. ಇದು ಕಳೆದ ಹಲವು ದಶಕಗಳಲ್ಲಿ ಕಂಡ ದೊಡ್ಡ ಮಟ್ಟದ ಚಿನ್ನದ ಬೆಲೆ ಏರಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಇನ್ನಷ್ಟು ಹೆಚ್ಚಳವಾಗಲಿದೆ ಚಿನ್ನದ ಬೆಲೆ
ಇನ್ನು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಚಿನ್ನದ ಬೆಲೆಯು 10 ಗ್ರಾಂಗೆ ರೂ.1.5 ಲಕ್ಷ ದಾಟಿದರೂ ಇನ್ನೂ ಏರಿಕೆಗೆ ಅವಕಾಶವಿದೆ. ವ್ಯಾಪಾರ ನಿರ್ಬಂಧಗಳು, ಆಮದು ಸುಂಕ, ಜಾಗತಿಕವಾಗಿ ರಾಜಕೀಯ ಉದ್ವಿಗ್ನತೆ, ವಿವಿಧ ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ಹಾಗೂ ವಿವಿಧ ದೇಶಗಳ ಬ್ಯಾಂಕ್‌ಗಳು ಚಿನ್ನವನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವುದರಿಂದ ಅಂತಾರಾಷ್ಟ್ರೀಯವಾಗಿ ಪ್ರತಿ ಔನ್ಸ್ (28.34 ಗ್ರಾಂ) ಗೆ 5,500 ಡಾಲರ್‌ಗಳವರೆಗೆ ಮತ್ತು ದೇಶೀಯವಾಗಿ 10 ಗ್ರಾಂಗೆ 1,72,000 ರೂಪಾಯಿಯ ವರೆಗೆ ಚಿನ್ನದ ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಒಟ್ಟಾರೆ 2026ರ ಅಂತ್ಯದ ವೇಳೆಗೆ ಚಿನ್ನದ ಬೆಲೆಯು ಶೇ. 30ರಷ್ಟು ಒಟ್ಟಾರೆ ಹೆಚ್ಚಳವಾಗುವ ನಿರೀಕ್ಷೆ ಇದೆ.












Click it and Unblock the Notifications