Gold Rate Today: ಚಿನ್ನ ಖರೀದಿಗೆ ಇದೇ ಒಳ್ಳೆಯ ಸಮಯ, ಬೆಲೆ ಮತ್ತೆ ಇಳಿಕೆ, ಎಷ್ಟಿದೆ ಇಂದಿನ ದರ?
ಚಿನ್ನ ಖರೀದಿದಾರರಿಗೆ ನಿಜಕ್ಕೂ ಇದು ಖುಷಿಯ ವಿಚಾರ. ದಸರಾಗೂ ಮುನ್ನ ಚಿನ್ನಾಭರಣ ಖರೀದಿಸುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ಕಳೆದ ವಾರ ಭಾರೀ ಏರಿಕೆ ಕಂಡಿದ್ದ ಚಿನ್ನದ ದರವು ಈ ವಾರ ನಿರಂತರವಾಗಿ ಕಡಿಮೆಯಾಗುತ್ತಿದೆ. ನಿನ್ನೆಯೂ ಚಿನ್ನದ ದರದಲ್ಲಿ ಇಳಿಕೆ ಕಂಡಿತ್ತು. ಇಂದು ಕೂಡ ದರ ಮತ್ತೆ ಕಡಿಮೆಯಾಗಿದೆ. ಹಾಗಾಗಿ ಚಿನ್ನ ಖರೀದಿಗೆ ಇದೇ ಒಳ್ಳೆಯ ಸಮಯ ಎಂದು ಹೇಳಲಾಗುತ್ತಿದೆ. ಹಬ್ಬಕ್ಕೂ ಮುನ್ನ ಚಿನ್ನದ ದರ ಕಡಿಮೆಯಾಗಿರುವುದರಿಂದ ಖರೀದಿದಾರರಲ್ಲಿ ಸಂತಸ ಮನೆಮಾಡಿದೆ. ಮಹಾಲಯ ಅಮಾವಾಸ್ಯೆ ಹಾಗೂ ಪಿತೃಪಕ್ಷ ಇರುವುದರಿಂದ ಬೆಲೆ ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಇಂದಿನ ಚಿನ್ನ ಹಾಗೂ ಬೆಳ್ಳಿಯ ದರ ಎಷ್ಟಿದೆ? ಎಂಬ ವಿವರ ಇಲ್ಲಿ ತಿಳಿಯಿರಿ.
ಸದ್ಯ ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್, 22 ಕ್ಯಾರೆಟ್ ಹಾಗೂ 18 ಕ್ಯಾರೆಟ್ ಚಿನ್ನದ ದರ ವಿವರ ತಿಳಿಯುವುದಾದರೆ, ಬೆಂಗಳೂರಿನಲ್ಲಿ ಇಂದಿನ ಚಿನ್ನದ ಬೆಲೆ 24 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹11,105, 22 ಕ್ಯಾರೆಟ್ ಚಿನ್ನಕ್ಕೆ ₹10,179 ಮತ್ತು 999 ಚಿನ್ನ ಎಂದೂ ಕರೆಯುವ 18 ಕ್ಯಾರೆಟ್ ಚಿನ್ನಕ್ಕೆ ಪ್ರತಿ ಗ್ರಾಂಗೆ ₹8,328 ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ ಇಂದಿನ 24 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹11,105, 8 ಗ್ರಾಂ ಚಿನ್ನದ ದರ ₹88,840, 10 ಗ್ರಾಂ ಚಿನ್ನದ ದರ ₹1,11,050, 100 ಗ್ರಾಂ ಚಿನ್ನದ ದರ ₹11,10,500 ಇದ್ದು, ಬರೋಬ್ಬರಿ 100 ರೂಪಾಯಿ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂ ಚಿನ್ನದ ದರವು ₹10,179, 8 ಗ್ರಾಂ ಚಿನ್ನದ ದರ ₹81,432, 10 ಗ್ರಾಂ ಚಿನ್ನದ ದರ ₹1,01,790, 100 ಗ್ರಾಂ ಚಿನ್ನದ ದರ ₹10,17,900ಗೆ ಇಳಿದಿದೆ. 18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ ₹8,328, 8 ಗ್ರಾಂ ಚಿನ್ನದ ದರ ₹66,624, 10 ಗ್ರಾಂ ಚಿನ್ನದ ದರ ₹83,280, 100 ಗ್ರಾಂ ಚಿನ್ನದ ದರ ₹8,32,800ಗೆ ಇಳಿಕೆ ಕಂಡಿದ್ದು, ಬರೋಬ್ಬರಿ ₹100 ಕಡಿಮೆಯಾಗಿದೆ.
ಬೆಂಗಳೂರಿನಲ್ಲಿ ಕಳೆದ 10 ದಿನಗಳ ಚಿನ್ನದ ದರಪಟ್ಟಿ (ಗ್ರಾಂ.ಗೆ)
ದಿನಾಂಕ: 24 ಕ್ಯಾರೆಟ್ ಚಿನ್ನ; 22 ಕ್ಯಾರೆಟ್ ಚಿನ್ನ
ಸೆಪ್ಟಂಬರ್ 16, ₹11,105 ; ₹10,179
ಸೆಪ್ಟಂಬರ್ 15, ₹11,106 ; ₹10,180
ಸೆಪ್ಟಂಬರ್ 14, ₹11,117 ; ₹11,117
ಸೆಪ್ಟಂಬರ್ 13, ₹11,117 ; ₹10,190
ಸೆಪ್ಟಂಬರ್ 12, ₹11,128 ; ₹10,200
ಸೆಪ್ಟೆಂಬರ್ 11, ₹11,051 ; ₹10,130
ಸೆಪ್ಟಂಬರ್ 10, ₹11,051 ; ₹10,130
ಸೆಪ್ಟೆಂಬರ್ 09, ₹11,029 ; ₹10,110
ಸೆಪ್ಟೆಂಬರ್ 08, ₹10,893 ; ₹9,985

ಬೆಂಗಳೂರಿನಲ್ಲಿ ಇಂದು ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ ₹132.90 ಮತ್ತು ಪ್ರತಿ ಕಿಲೋಗ್ರಾಂಗೆ ₹1,32,900 ಆಗಿದೆ. ಸೆಪ್ಟೆಂಬರ್ ಆರಂಭದಿಂದಲೂ ಬೆಳ್ಳಿ ದರ ಏರಿಳಿತ ಕಾಣುತ್ತಿದೆ. ಬೆಂಗಳೂರಿನಲ್ಲಿ ಇಂದು ಪ್ಲಾಟಿನಂ ಬೆಲೆ ಪ್ರತಿ ಗ್ರಾಂಗೆ ₹ 3,978 ಮತ್ತು 10 ಗ್ರಾಂಗೆ ₹ 39,780 ಆಗಿದ್ದು, ಭಾರೀ ಏರಿಕೆ ಕಂಡಿದೆ. ಹಾಗಾಗಿ ಚಿನ್ನ ಖರೀದಿದಾರರಿಗೆ ಇದೇ ಒಳ್ಳೆಯ ಸಮಯ ಎನ್ನಲಾಗಿದೆ.












Click it and Unblock the Notifications