Gold Rate Today: ಅಕ್ಟೋಬರ್ 1ರಂದು ಚಿನ್ನದ ಬೆಲೆ ಇಳಿಕೆ: ಇಲ್ಲಿದೆ ದರ ಪಟ್ಟಿ
ಬೆಂಗಳೂರು: ಚಿನ್ನ ಖರೀದಿಸಲು ಯೋಚಿಸುತ್ತಿರುವವರಿಗೆ ಇಂದು ಕೊಂಚ ನೆಮ್ಮದಿಯ ಸುದ್ದಿ ಸಿಕ್ಕಿದೆ. ಸತತ ಏರಿಳಿತ ಕಾಣುತ್ತಿರುವ ಚಿನ್ನದ ಬೆಲೆ ಗುರುವಾರ ಮತ್ತೆ ಇಳಿಕೆಯಾಗಿದೆ. ನಿನ್ನೆ ₹70ರಷ್ಟು ಏರಿಕೆಯಾಗಿದ್ದ ಚಿನ್ನದ ದರ ಇಂದು ₹30ರಷ್ಟು ಕಡಿಮೆಯಾಗಿದೆ. ಬೆಳ್ಳಿ ಬೆಲೆಯಲ್ಲೂ ಇಳಿಕೆ ಕಂಡುಬಂದಿದ್ದು, ಸದ್ಯ ದೇಶದಲ್ಲಿ ಒಂದು ಗ್ರಾಂ ಬೆಳ್ಳಿ ದರ ₹235 ರಷ್ಟಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳಲ್ಲಿ ಸಣ್ಣ ಪ್ರಮಾಣದ ಏರಿಳಿತ ಕಂಡುಬಂದಿದೆ. ಜಾಗತಿಕ ಸ್ಪಾಟ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಕೊಂಚ ಏರಿಕೆ ಕಂಡಿದ್ದರೂ, ದೇಶೀಯ ಮಾರುಕಟ್ಟೆಯಲ್ಲಿ ಇಂದು ಚಿನ್ನದ ದರ ಇಳಿಕೆಯಾಗಿದೆ.

22 ಕ್ಯಾರಟ್ ಚಿನ್ನದ ಬೆಲೆ ಎಷ್ಟು?
ಅಕ್ಟೋಬರ್ 1ರ ಮಾಹಿತಿಯ ಪ್ರಕಾರ ಭಾರತದಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ₹1,36,800 ರಷ್ಟಿದೆ. ಅಂದರೆ ಒಂದು ಗ್ರಾಂ 22 ಕ್ಯಾರಟ್ ಚಿನ್ನಕ್ಕೆ ₹13,680 ಪಾವತಿಸಬೇಕಾಗಿದೆ. ಇನ್ನು 24 ಕ್ಯಾರಟ್ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ ₹1,49,240 ಇದ್ದು, ಒಂದು ಗ್ರಾಂಗೆ ₹14,924ರಷ್ಟಾಗಿದೆ. 18 ಕ್ಯಾರಟ್ ಚಿನ್ನದ ಒಂದು ಗ್ರಾಂ ದರ ₹11,193 ರಷ್ಟಿದೆ.
Gold Rate Today: ಬೆಳ್ಳಿ ಬೆಲೆ ಎಷ್ಟಿದೆ?
ಬೆಳ್ಳಿ ಬೆಲೆಯಲ್ಲೂ ಇಂದು ಇಳಿಕೆ ದಾಖಲಾಗಿದೆ. ಪ್ರಸ್ತುತ ದೇಶದಲ್ಲಿ ಒಂದು ಗ್ರಾಂ ಬೆಳ್ಳಿ ₹235 ರಷ್ಟಿದೆ. ಹೀಗಾಗಿ 10 ಗ್ರಾಂ ಬೆಳ್ಳಿ ₹2,350 ಹಾಗೂ 100 ಗ್ರಾಂ ಬೆಳ್ಳಿ ₹23,500ರಷ್ಟಾಗುತ್ತದೆ. ಕಳೆದ ದಿನಕ್ಕೆ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲೂ ₹5ರಷ್ಟು ಇಳಿಕೆ ಕಂಡುಬಂದಿದೆ.
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ
ಬೆಂಗಳೂರಿನಲ್ಲೂ ಚಿನ್ನದ ದರ ದೇಶದ ಪ್ರಮುಖ ನಗರಗಳಲ್ಲಿರುವ ದರಕ್ಕೆ ಸಮೀಪದಲ್ಲಿದೆ.
* 22 ಕ್ಯಾರಟ್ ಚಿನ್ನ: ₹13,680/ಗ್ರಾಂ
* 10 ಗ್ರಾಂ 22 ಕ್ಯಾರಟ್: ₹1,36,800
* 24 ಕ್ಯಾರಟ್ ಚಿನ್ನ: ₹14,924/ಗ್ರಾಂ
* 10 ಗ್ರಾಂ 24 ಕ್ಯಾರಟ್: ₹1,49,240
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ದರ
* ಬೆಂಗಳೂರು: ₹13,680
* ಚೆನ್ನೈ: ₹13,680
* ಮುಂಬೈ: ₹13,680
* ದೆಹಲಿ: ₹13,695
* ಕೋಲ್ಕತಾ: ₹13,680
* ಕೇರಳ: ₹13,680
* ಅಹ್ಮದಾಬಾದ್: ₹13,685
* ಜೈಪುರ: ₹13,695
* ಲಖನೌ: ₹13,695
* ಭುವನೇಶ್ವರ: ₹13,680
ಒಂದು ಗ್ರಾಂ ಬೆಳ್ಳಿ ದರ ಎಷ್ಟಿದೆ?
* ಬೆಂಗಳೂರು: ₹235
* ಚೆನ್ನೈ: ₹245
* ಮುಂಬೈ: ₹235
* ದೆಹಲಿ: ₹235
* ಕೋಲ್ಕತಾ: ₹235
* ಕೇರಳ: ₹245
* ಅಹ್ಮದಾಬಾದ್: ₹235
* ಜೈಪುರ: ₹235
* ಲಖನೌ: ₹235
* ಭುವನೇಶ್ವರ: ₹245
* ಪುಣೆ: ₹235


Click it and Unblock the Notifications
