ಹಬ್ಬದ ದಿನದಂದು ಸ್ಥಿರತೆ ಕಂಡುಕೊಂಡ ಚಿನ್ನ, ಬೆಳ್ಳಿ ದರ

ಬೆಂಗಳೂರು, ನವೆಂಬರ್ 06: ದೀಪಾವಳಿ ಹಬ್ಬಕ್ಕೂ ಮುನ್ನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಶುರುವಾಗಿತ್ತು. ಆದರೆ, ನರಕ ಚತುದರ್ಶಿ ದಿನದಂದು ತಕ್ಕಮಟ್ಟಿನ ಸ್ಥಿರತೆ ಕಂಡುಕೊಂಡಿದೆ.

ದೀಪಾವಳಿ ವಿಶೇಷ ಪುರವಣಿ

ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆ ಮೇಲ್ಮುಖವಾಗಿ ಚಲಿಸುತ್ತಿತ್ತು, ಆದರೆ, ಕಳೆದ ಶುಕ್ರವಾರವಂದು ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಇನ್ನೆರಡು ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಚಿನಿವಾರ ಪೇಟೆ ತಜ್ಞರು ಹೇಳಿದ್ದರು. ಆದರೆ, ಮಂಗಳವಾರ (ನವೆಂಬರ್ 06) ಬೆಳಗ್ಗೆ ವಹಿವಾಟಿನಲ್ಲಿ ಕೊಂಚ ಏರಿಕೆ ಕಂಡರೂ ನಿರೀಕ್ಷಿತ ಮಟ್ಟದಲ್ಲೇ ಸಾಗಿದೆ.

ಆಭರಣಗಾರರು, ರೀಟೈಲ್, ಹೂಡಿಕೆದಾರರು, ಕೈಗಾರಿಕಾ ವಲಯದಿಂದ ಹಳದಿ ಲೋಹಕ್ಕಾಗಿ ಬೇಡಿಕೆ ಹೆಚ್ಚಿದ್ದರಿಂದ ಮಂಗಳವಾರ ಎಂಸಿಎಕ್ಸ್ ನಲ್ಲಿ ಶೇ0.04ಏರಿಕೆ ಕಂಡು 10ಗ್ರಾಂಗೆ 31,175ರು ನಷ್ಟಿತ್ತು. ಬೆಳ್ಳಿ ಶೇ0.03ರಷ್ಟು ಏರಿಕೆ ಕಂಡು 1 ಕೆಜಿಗೆ 38,730ರು ನಂತೆ ವಹಿವಾಟು ನಡೆಸಿದೆ.

Gold Rate Today: Gold, silver flat in morning trade

ಧನ್ ತೇರಸ್ ಮುಗಿದ ಕಾರಣ ಬಂಗಾರಕ್ಕೆ ಬೇಡಿಕೆ ಕಡಿಮೆಯಾಗಿದೆ. ಸೋಮವಾರ ಬೆಲೆಯಲ್ಲಿ 40 ರೂಪಾಯಿ ಏರಿಕೆ ಕಂಡು ಬಂದಿತ್ತು. ದಕ್ಷಿಣ ಭಾರತದಲ್ಲಿ ಅಮಾವಾಸ್ಯೆದಿನ ಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಬುಧವಾರದಂದು ಬಂಗಾರ ಖರೀದಿದಾರರ ಬೇಡಿಕೆ ಹೆಚ್ಚಾಗಲಿದ್ದು, ಬೆಲೆ ಏರಿಕೆ ನಿರೀಕ್ಷಿಸಬಹುದು.

ರಾಷ್ಟ್ರ ರಾಜಧಾನಿಯಲ್ಲಿ ಚಿನ್ನದ ಬೆಲೆ 80 ರೂಪಾಯಿ ಇಳಿಕೆ ಕಂಡು 32610 ರೂಪಾಯಿ ಪ್ರತಿ 10 ಗ್ರಾಂ ಆಗಿದೆ.

ಬೆಳ್ಳಿ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಳ್ಳಿ ಮಂಗಳವಾರ 240 ರೂಪಾಯಿ ಇಳಿಕೆ ಕಂಡು 39,300 ರೂಪಾಯಿ ಪ್ರತಿ ಕೆ.ಜಿ. ಯಾಗಿದೆ. ಸಿಂಗಾಪುರದಲ್ಲಿ ಬಂಗಾರದ ಬೆಲೆ ಶೇಕಡಾ 0.15 ರಷ್ಟು ಇಳಿಕೆ ಕಂಡು 1229.30 ಡಾಲರ್ ಪ್ರತಿ ಔನ್ಸ್ ಆಗಿದೆ.

ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ ಗೆ 31,250ರು ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 29,750ರು ನಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+