Gold Rate Jan 5 ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ
Gold Rate Jan 5: ಚಿನ್ನ ಪ್ರಿಯರಿಗೆ ಸೋಮವಾರ ಜನವರಿ 05ರ ಬೆಲೆಯು ಭಾರೀ ಶಾಕ್ ನೀಡಿದೆ. ಅಮೆರಿಕಾ ಹಾಗೂ ವೆನೆಜುವೆಲಾದ ಸಂಘರ್ಷದ ಬೆನ್ನಲ್ಲೇ ಚಿನ್ನದ ಬೆಲೆಯು ಭಾರೀ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೊದಲೇ ನಿರೀಕ್ಷೆ ಮಾಡಲಾಗಿತ್ತು. ಅದರಂತೆಯೇ ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಯು ಭಾರೀ ಏರಿಕೆ ಕಂಡಿದೆ. ಜನವರಿ 5ರ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ. ಚಿನ್ನದ ಬೆಲೆ ದಿಢೀರ್ ಏರಿಕೆಗೆ ಕಾರಣವೇನು ಹಾಗೂ ಇನ್ನೂ ಚಿನ್ನದ ಬೆಲೆ ಹೆಚ್ಚಾಗಲಿದೆಯೇ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
24 ಕ್ಯಾರೆಟ್ ಚಿನ್ನದ ಬೆಲೆ: ಜನವರಿ 5ರಂದು 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 13,740 ರೂಪಾಯಿ ಆಗಿದೆ. ಜನವರಿ ಮೊದಲ ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 24 ಕ್ಯಾರೆಟ್‌ನ ಚಿನ್ನದ ಬೆಲೆಯು ಒಂದು ಗ್ರಾಂಗೆ 158 ರೂಪಾಯಿ ಹೆಚ್ಚಳವಾಗಿದೆ. ಇನ್ನು 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,37,400 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 10 ಗ್ರಾಂ ಚಿನ್ನದ ಬೆಲೆ ಬರೋಬ್ಬರಿ 1,580 ರೂಪಾಯಿ ಹೆಚ್ಚಳವಾಗಿದೆ.

22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆಯು 12,595 ರೂಪಾಯಿ ಆಗಿದೆ. ಭಾನುವಾರಕ್ಕೆ ಹೋಲಿಕೆ ಮಾಡಿದರೆ 145 ರೂಪಾಯಿ ಹೆಚ್ಚಳವಾಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,25,950 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,450 ರೂಪಾಯಿ ಹೆಚ್ಚಳವಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 18 ಕ್ಯಾರೆಟ್‌ನ ಚಿನ್ನದ ಬೆಲೆಯು ಒಂದು ಗ್ರಾಂಗೆ 10,305 ರೂಪಾಯಿ ಆಗಿದ್ದು. ನೆನ್ನೆಗೆ ಹೋಲಿಕೆ ಮಾಡಿದರೆ 118 ರೂಪಾಯಿ ಹೆಚ್ಚಳವಾಗಿದೆ. 18 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆಯು 1,03,050 ರೂಪಾಯಿ ಆಗಿದೆ. ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 10 ಗ್ರಾಂನ ಚಿನ್ನದ ಬೆಲೆಯು 1,180 ರೂಪಾಯಿ ಹೆಚ್ಚಳವಾಗಿದೆ.
ಬೆಳ್ಳಿಯ ಬೆಲೆ ಹೇಗಿದೆ ?
ಇನ್ನು ಬೆಳ್ಳಿಯೊಂದಿಗೆ ಚಿನ್ನದ ಬೆಲೆಯಲ್ಲೂ ಭರ್ಜರಿ ಹೆಚ್ಚಳವಾಗಿದೆ. ಬೆಳ್ಳಿಯ ಬೆಲೆಯು ಪ್ರತಿ ಗ್ರಾಂಗೆ 247 ರೂಪಾಯಿ ಆಗಿದ್ದು. ಬೆಳ್ಳಿ ಬೆಲೆಯು ವಾರಾಂತ್ಯಕ್ಕೆ ಹೋಲಿಕೆ ಮಾಡಿದರೆ 6 ರೂಪಾಯಿ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,47,000 ಸಾವಿರ ರೂಪಾಯಿ ಆಗಿದೆ. ಭಾನುವಾರಕ್ಕೆ ಹೋಲಿಕೆ ಮಾಡಿದರೆ ಒಂದು ಕೆ.ಜಿ ಬೆಳ್ಳಿ ಬೆಲೆಯು ಬರೋಬ್ಬರಿ 6,000 ಸಾವಿರ ರೂಪಾಯಿ ಹೆಚ್ಚಳವಾಗಿದೆ.
ಶುಕ್ರವಾರ ತಡರಾತ್ರಿಯಿಂದ ವಿಶ್ವದಲ್ಲಿ ಮಹತ್ವದ ಬೆಳವಣಿಗೆಗಳು ನಡೆದಿವೆ. ವಿಶ್ವದ ಸೂಪರ್ ನೇಷನ್ ಎಂದೇ ಖ್ಯಾತಿ ಗಳಿಸಿರುವ ಅಮೆರಿಕಾ - ವೆನೆಜುವೆಲಾದ ಮೇಲೆ ಮುಗಿಬಿದ್ದಿದೆ. ಈ ದೇಶವು ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲವನ್ನು ಹೊಂದಿರುವ ಮೂರನೇ ರಾಷ್ಟ್ರ ಎನ್ನುವ ಕಾರಣಕ್ಕೆ ಪ್ರಸಿದ್ಧಿಗಳಿಸಿದೆ. ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುಎಸ್ ಸೇನೆ ವೆನೆಜುವೆಲಾದ ಮೇಲೆ ದಾಳಿ ಮಾಡಿದೆ ಹಾಗೂ ಅಲ್ಲಿನ ಅಧ್ಯಕ್ಷರನ್ನು ಬಂಧಿಸಿದ್ದೇವೆ ಎಂದು ಹೇಳುತ್ತಿದ್ದಂತೆಯೇ ಆರ್ಥಿಕ ವಲಯದಲ್ಲಿ ಭಾರೀ ಬದಲಾವಣೆಗಳು ಆಗಿವೆ. ಅಲ್ಲದೇ ಷೇರುಮಾರುಕಟ್ಟೆ ಏರುಪೇರು ಜೊತೆಗೆ ಚಿನ್ನದ ಬೆಲೆಯಲ್ಲೂ ಭಾರೀ ಏರಿಕೆ ಆಗಿದೆ. ಮುಂದಿನ ದಿನಗಳಲ್ಲೂ ಚಿನ್ನದ ಬೆಲೆ ಹೆಚ್ಚಾಗುವ ನಿರೀಕ್ಷೆ ಇದೆ.












Click it and Unblock the Notifications