Get Updates
Get notified of breaking news, exclusive insights, and must-see stories!

Gold Price Today: ಚಿನ್ನದ ದರದಲ್ಲಿ ಭಾರೀ ಕುಸಿತ, ಇಂದು ನಿಮ್ಮ ನಗರದಲ್ಲಿ ಎಷ್ಟಿದೆ ಬೆಲೆ?

Gold Price on December 09: ಭಾರತದಲ್ಲಿ ಚಿನ್ನ-ಬೆಳ್ಳಿಯ ದರಗಳು ಅಂತಾರಾಷ್ಟ್ರೀಯ ಚಿನ್ನದ ದರಗಳು, US ಡಾಲರ್ ಮೇಲಿನ ಏರಿಳಿತಗಳು ಹಾಗೂ ಬಂಗಾರದ ಮೇಲಿನ ಆಮದು ಸುಂಕಗಳ ಮೇಲೆ ಹೆಚ್ಚು ಪ್ರಭಾವಿತಗೊಂಡಿದೆ. ಸತತವಾಗಿ ಒಂದು ವಾರಕ್ಕೂ ಹೆಚ್ಚು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಮಂಗಳವಾರ ಡಿಸೆಂಬರ್ 09ರಂದು ಭರ್ಜರಿ ಇಳಿಕೆ ಆಗಿದೆ.

ಇಂದು ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಬೆಳ್ಳಿ ದರದಲ್ಲಿ ಹೆಚ್ಚಳವಾಗಿದೆ. ನೆನ್ನೆ ಚಿನ್ನ ಹೆಚ್ಚಾಗಿ, ಬೆಳ್ಳಿ ದರ ಇಳಿಕೆ ಆಗಿತ್ತು. ಇಂದು 24 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ ₹130,090 ಹೆಚ್ಚಾಗಿದೆ. ಒಂದೇ ದಿನಕ್ಕೆ 330 ರೂಪಾಯಿ ಏರಿಕೆ ಆಗಿದೆ. ನೆನ್ನೆ 270 ರೂಪಾಯಿ ಏರಿಕೆ ಆಗಿತ್ತು.

Gold Rate Decreased on December 09th Silver Price Spike Check Today Rate Updates

ಅದೇ ರೀತಿ 22 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂಗೆ 1,19,250 ರೂಪಾಯಿ ಇದ್ದು, ಇದರ ದರ ಒಂದೇ ದಿನಕ್ಕೆ 300 ರೂಪಾಯಿ ಕುಸಿತವಾಗಿದೆ. ನೆನ್ನೆ ಸೋಮವಾರ ಇದರ ಬೆಲೆಯು 250 ರೂ. ಹೆಚ್ಚಾಗಿತ್ತು. ಬೆಳ್ಳಿಯ 100 ಗ್ರಾಂ ದರವು ಇಂದು 1000 ರೂಪಾಯಿಗೆ ಏರಿದರೆ, ಒಂದು ಕೆಜಿ ಬೆಳ್ಳಿದ ಬೆಲೆಯು 1000 ರೂಪಾಯಿ ಏರಿದೆ. ಮುಂದಿನ ದಿನಗಳಲ್ಲಿ ಬೆಳ್ಳಿ ದರ ಮತ್ತಷ್ಟು ಹೆಚ್ಚಾಗುವ ಮುನ್ಸೂಚನೆ ಇದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.

ಭಾರತದಲ್ಲಿ ಚಿನ್ನದ ಬೆಲೆಗಳು ದುಬೈಗಿಂತ ಅಧಿಕವಾಗಿವೆ. ದುಬೈನಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನಕ್ಕೆ 112,816 ರೂಪಾಯಿ ಇದೆ. ಅಂದರೆ ಅಲ್ಲಿಗೂ ಭಾರತಕ್ಕೂ ಬರೋಬ್ಬರಿ 16,964 ರೂಪಾಯಿ (ಶೇಕಡಾ15.04) ವ್ಯತ್ಯಾಸ ಇದೆ. ಇನ್ನೂ 18 ಕ್ಯಾರಟ್ ಚಿನ್ನದ ಬೆಲೆಗಳು ದುಬೈಗಿಂತ ಭಾರತದಲ್ಲಿ ದುಬಾರಿಯಾಗಿವೆ. ಇದಕ್ಕೆ ಅಧಿಕ ಶುಲ್ಕಗಳು, ಸುಂಕಗಳು ಮತ್ತು ತೆರಿಗೆಗಳು ಹೆಚ್ಚಿರುವುದು ಕಾರಣವಾಗಿದೆ. ನಗರವಾರು ಚಿನ್ನದ ದರಪಟ್ಟಿ ಇಲ್ಲಿದೆ.

22 ಕ್ಯಾರಟ್ ಚಿನ್ನದ 10 ಗ್ರಾಂ ದರ

ಬೆಂಗಳೂರು : 1,19,250 ರೂಪಾಯಿ

ಚೆನ್ನೈ : 1,21,676 ರೂಪಾಯಿ

ಕೋಲ್ಕತ್ತಾ : 1,19,410 ರೂಪಾಯಿ

ದೆಹಲಿ : 1,19,840 ರೂಪಾಯಿ

ಮುಂಬೈ : 1,20,795 ರೂಪಾಯಿ

ಹೈದರಾಬಾದ್ : 1,20,994 ರೂಪಾಯಿ

ಕೊಚ್ಚಿ :1,19,420 ರೂಪಾಯಿ

ಪುಣೆ : 1,19,430 ರೂಪಾಯಿ

ಜೈಪುರ : 1,19,480 ರೂಪಾಯಿ

24 ಕ್ಯಾರಟ್ ಚಿನ್ನದ 10 ಗ್ರಾಂ ದರಪಟ್ಟಿ

ಬೆಂಗಳೂರು: 1,30,090 ರೂಪಾಯಿ

ಚೆನ್ನೈ: 1,30,160 ರೂಪಾಯಿ

ಹೈದರಾಬಾದ್: 1,29,990 ರೂಪಾಯಿ

ಕೋಲ್ಕತ್ತಾ: 1,29,610 ರೂಪಾಯಿ

ದೆಹಲಿ: 1,29,560 ರೂಪಾಯಿ

ಅಹಮದಾಬಾದ್: 1,29,950 ರೂಪಾಯಿ

ಮುಂಬೈ: 1,29,780 ರೂಪಾಯಿ

ಜೈಪುರ: 1,30,080 ರೂಪಾಯಿ

ಪುಣೆ: 1,29,820 ರೂಪಾಯಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+