Gold Price: ಸತತ ಎರಡನೇ ದಿನವೂ ಕುಸಿದ ಚಿನ್ನ; ಬುಧವಾರ ಕೂಡ ಕುಸಿಯುವ ಸಾಧ್ಯತೆ
ಚಿನ್ನ ಖರೀದಿ ಮಾಡುವವರಿಗೆ ಕಳೆದ ಎರಡು ದಿನಗಳಿಂದ ಬೆಲೆ ಕಡಿಮೆಯಾಗುತ್ತಿರುವುದು ಖುಷಿ ತಂದಿದೆ. ಸತತ ಎರಡು ದಿನ ಚಿನ್ನದ ಬೆಲೆ ಕುಸಿತವಾಗಿದೆ. ಬುಧವಾರ ಕೂಡ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಸೋಮವಾರ 100 ಗ್ರಾಂ ಚಿನ್ನದ ಬೆಲೆ 2000 ರೂಪಾಯಿ ಕುಸಿತ ಕಂಡಿದ್ದರೆ, ಮಂಗಳವಾರ 1000 ರೂಪಾಯಿ ಕುಸಿತವಾಗಿದೆ. ಸೋಮವಾರ 6,740 ರೂಪಾಯಿ ಇದ್ದ ಒಂದು ಗ್ರಾಂ 22 ಕ್ಯಾರೆಟ್ (ಆಭರಣ) ಚಿನ್ನದ ಬೆಲೆ ಮಂಗಳವಾರ, 6,730 ರೂಪಾಯಿಗೆ ಕುಸಿದಿದೆ.

ಮಂಗಳವಾರ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ 70670 ರೂಪಾಯಿಗೆ ಮಾರಾಟವಾಗುತ್ತಿದೆ. ಸತತ ಎರಡು ದಿನಗಳ ಕಾಲ ಚಿನ್ನದ ಬೆಲೆ ಕುಸಿತವಾಗಿದ್ದು ಬುಧವಾರ ಕೂಡ ಚಿನ್ನದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಬೆಳ್ಳಿ ಬೆಲೆ ಹೆಚ್ಚಳ
ಚಿನ್ನದ ಬೆಲೆ ಇಳಿಕೆಯಾದರೆ, ಬೆಳ್ಳಿಯ ಬೆಲೆಯಲ್ಲಿ ಅಲ್ಪ ಏರಿಕೆಯಾಗಿದೆ. ಬುಧವಾರ 1 ಕೆಜಿ ಬೆಳ್ಳಿ ದರ 500 ರೂಪಾಯಿ ಏರಿಕೆ ಕಂಡಿದೆ. ಸೋಮವಾರ 91,000 ರೂಪಾಯಿ ಇದ್ದ ಬೆಳ್ಳಿ ಬೆಲೆ, ಬುಧವಾರ 91,500 ರೂಪಾಯಿಗೆ ಹೆಚ್ಚಾಗಿದೆ.
ಬುಧವಾರ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಅಥವಾ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ಚಿನ್ನದ ಬೆಲೆ ಕುಸಿಯುತ್ತಾ?
ಮಾರುಕಟ್ಟೆಯಲ್ಲಿ ಚಿನ್ನ, ಬೆಳ್ಳಿ ಬೆಲೆ ಏರಿಳಿತ ಮುಂದುವರೆಯುತ್ತಿದೆ. ಚಿನ್ನದ ಬೆಲೆಯಲ್ಲಿ ಸತತವಾಗಿ ಏರಿಕೆ ಕಂಡು ಆಭರಣ ಪ್ರಿಯರ ನಿದ್ದೆಗೆಡಿಸಿತ್ತು. ಇನ್ನೇನು ಆಭರಣ ಚಿನ್ನ 10 ಗ್ರಾಂಗೆ 70 ಸಾವಿರ ದಾಟುತ್ತದೆ ಎನ್ನುವಾಗಲೇ ಬೆಲೆ ಕುಸಿತ ಕಂಡಿತು.
ಜಾಗತಿಕವಾಗಿ ಹಲವು ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಚೀನಾದ ಸೆಂಟ್ರಲ್ ಬ್ಯಾಂಕ್ ಮೀಸಲಿಗಾಗಿ ಚಿನ್ನ ಖರೀದಿ ನಿಲ್ಲಿಸಿದ್ದರಿಂದ ಚಿನ್ನದ ಬೆಲೆ ಏರಿಕೆಗೆ ಕಡಿವಾಣ ಬೀಳಲು ಪ್ರಮುಖ ಕಾರಣವಾಗಿತ್ತು. ಚೀನಾದ ಸೆಂಟ್ರಲ್ ಬ್ಯಾಂಕ್ ಮತ್ತೆ ಚಿನ್ನದ ಖರೀದಿ ಆರಂಭಿಸಿದರೆ ಚಿನ್ನದ ದರ ಏರಿಕೆಯಾಗುವ ಸಾಧ್ಯತೆ ಇದೆ.












Click it and Unblock the Notifications