ಸತತ 5ನೇ ದಿನ ಚಿನ್ನದ ಬೆಲೆ ಕುಸಿತ: ಎಷ್ಟು ಇಳಿಕೆಯಾಗಿದೆ?
ನವದೆಹಲಿ, ನವೆಂಬರ್ 20: ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ತನ್ನ ಕುಸಿತವನ್ನು ಮುಂದುವರಿಸಿದೆ. ಕೊರೊನಾವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಉಲ್ಬಣದ ಜೊತೆಗೆ ಲಸಿಕೆ ಲಭ್ಯವಾಗುವ ಆಶಾವಾದವು ಮಾರುಕಟ್ಟೆಯ ಮೇಲೆ ಪ್ರಭಾವ ಬೀರುತ್ತಿದೆ.
Recommended Video
ದುರ್ಬಲ ಜಾಗತಿಕ ಸೂಚನೆಗಳ ಮಧ್ಯೆ ಚಿನ್ನದ ಬೆಲೆಗಳು ಸತತ ಐದನೇ ದಿನವೂ ಭಾರತೀಯ ಮಾರುಕಟ್ಟೆಗಳಲ್ಲಿ ಇಳಿಮುಖ ಸಾಧಿಸಿವೆ. ಹಿಂದಿನ ನಾಲ್ಕು ಸೆಷನ್‌ಗಳಲ್ಲಿ ನಷ್ಟ ಅನುಭವಿಸಿದ ನಂತರ ಎಂಸಿಎಕ್ಸ್‌ನಲ್ಲಿ ಚಿನ್ನವು 10 ಗ್ರಾಂಗೆ ಶೇ. 0.11 ರಷ್ಟು ಇಳಿದು, 50,029 ರೂಪಾಯಿಗೆ ತಲುಪಿದೆ.
ಬೆಳ್ಳಿ ಭವಿಷ್ಯವು ಶೇ. 0.3ರಷ್ಟು ಏರಿಕೆ ಕಂಡು 61,616 ಕ್ಕೆ ತಲುಪಿದೆ. ಹಿಂದಿನ ಅಧಿವೇಶನದಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ ಶೇ. 0.7ರಷ್ಟು ಅಥವಾ 350 ರೂಪಾಯಿ ಕುಸಿದಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 1,000 ರೂ. ಅಥವಾ ಶೇ. 1.63ರಷ್ಟು ಇಳಿಕೆಯಾಗಿತ್ತು.

ಜಾಗತಿಕ ಮಾರುಕಟ್ಟೆಗಳಲ್ಲಿ, ಅಮೆರಿಕಾದ ಹೆಚ್ಚಿನ ಪ್ರಚೋದಕ ಕ್ರಮಗಳ ಬಗ್ಗೆ ಅನಿಶ್ಚಿತತೆಯ ನಡುವೆ ಚಿನ್ನದ ಬೆಲೆಗಳು ಇಂದು ಕಡಿಮೆಯಾಗಿದೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಶೇ. 0.2 ಕುಸಿದು 1,863.21 ಡಾಲರ್‌ಗೆ ತಲುಪಿದೆ. ಇತರ ಅಮೂಲ್ಯ ಲೋಹಗಳ ಪೈಕಿ ಬೆಳ್ಳಿ ಔನ್ಸ್‌ಗೆ ಶೇ. 0.1ರಷ್ಟು ಕುಸಿದು 24.06 ಡಾಲರ್‌ಗೆ ತಲುಪಿದ್ದರೆ, ಪ್ಲಾಟಿನಂ ಶೇ. 0.2ರಷ್ಟು ಇಳಿಕೆಯಾಗಿ ಔನ್ಸ್‌ಗೆ 949.88 ಡಾಲರ್ ಮುಟ್ಟಿದೆ.
ಕೋವಿಡ್ ಲಸಿಕೆ ಪ್ರಗತಿಯ ಬಗ್ಗೆ ಹೂಡಿಕೆದಾರರ ಆಶಾವಾದವು ಈ ವಾರದ ಆರಂಭದಲ್ಲಿ ಜಾಗತಿಕ ಇಕ್ವಿಟಿ ಮಾರುಕಟ್ಟೆಗಳನ್ನು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಸಿತು. ಆದರೆ ವೈರಸ್ ಪ್ರಕರಣಗಳ ಉಲ್ಬಣ ಮತ್ತು ಪ್ರಚೋದಕ ಕ್ರಮಗಳ ಬಗ್ಗೆ ಅಮೆರಿಕಾವು ಮುಂದಾಗದಿರುವುದರಿಂದ ಹೂಡಿಕೆದಾರರಲ್ಲಿ ಅನಿಶ್ಚಿತತೆ ಕಾಡುತ್ತಿದೆ.












Click it and Unblock the Notifications