ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿನ್ನ, ಬೆಳ್ಳಿ ಬೆಲೆ ದಿಢೀರ್ ಏರಿಕೆ, ಹೂಡಿಕೆದಾರರಿಗೆ ಸಂತಸ

|
Google Oneindia Kannada News

ನವದೆಹಲಿ, ಸೆ. 16: "ಚಿನ್ನದ ಬೆಲೆ ಏರಿಳಿತವಿದ್ದರೂ ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಸಕಾಲ" ಎಂದು ಮಾರುಕಟ್ಟೆ ತಜ್ಞರು ನೀಡಿದ ಮುನ್ಸೂಚನೆಗೆ ಅನುಗುಣವಾಗಿ ಹಳದಿ ಲೋಹದ ಮೇಲೆ ಹೂಡಿಕೆದಾರರು ಹೆಚ್ಚಿನ ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಏರಿಕೆ ಕಂಡಿದೆ.

ಡಾಲರ್ ಎದುರು ರುಪಾಯಿ ಮೌಲ್ಯ ಸ್ಥಿರತೆ ಕಂಡು ಬಂದಿದೆ. ಸ್ಥಳೀಯರಿಂದ ಬೇಡಿಕೆ ತಗ್ಗಿರುವುದು ಚಿನ್ನದ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಿದೆ

ಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆಚಿನ್ನದ ಮೇಲೆ ಹೂಡಿಕೆ ಮಾಡಿ, 42 ಸಾವಿರ ರು ಗಡಿ ದಾಟಲಿದೆ

ಚಿನ್ನದ ಬೆಲೆ 10 ಗ್ರಾಂಗೆ 40,000 ರು ದಾಟಿದ್ದನ್ನು ಇಲ್ಲಿ ಸ್ಮರಿಸಬಹುದು. ಲಕ್ನೋ, ಆಗ್ರಾ ಹಾಗೂ ಉತ್ತರ ಭಾರತದ ಚಿನಿವಾರ ಪೇಟೆಗಳಲ್ಲಿನ ಟ್ರೆಂಡ್ ನಂತೆ ಚಿನ್ನದ ಬೆಲೆ ಮತ್ತೆ ಏರಿಕೆಯಾಗಲಿದೆ.

Gold prices surge today, silver prices jump over ₹1,300 in a day

"ದಿಢೀರ್ ಏರಿಳಿತದ ನಡುವೆಯೂ ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗಲಿದ್ದು, 2020ರ ವೇಳೆಗೆ 10 ಗ್ರಾಂ ಚಿನ್ನದ ಬೆಲೆ 42,000 ರುಗೇರುವ ಮುನ್ಸೂಚನೆ ಸಿಕ್ಕಿದೆ" ಎಂದು ಏಂಜೆಲ್ ಬ್ರೋಕಿಂಗ್ ನ ಉಪಾಧ್ಯಕ್ಷ ಅನುಜ್ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.

ಕಲಂ 370 ರದ್ದು, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದರೆ ಬೆಚ್ಚುತ್ತೀರಿ!ಕಲಂ 370 ರದ್ದು, ಪಾಕಿಸ್ತಾನದಲ್ಲಿ ಚಿನ್ನದ ಬೆಲೆ ಕೇಳಿದರೆ ಬೆಚ್ಚುತ್ತೀರಿ!

ಎಂಸಿಎಕ್ಸ್ ನಲ್ಲಿ ಫ್ಯೂಚರ್ ಚಿನ್ನ ಶೇ 1.7ರಷ್ಟು ಏರಿಕೆ ಕಂಡು 10ಗ್ರಾಂಗೆ 38,163ರು ನಷ್ಟಿದೆ. ಶುಕ್ರವಾರದಂದು 37,503ರುನಂತೆ ವಹಿವಾಟು ಅಂತ್ಯಗೊಂಡಿತ್ತು. ಬೆಳ್ಳಿ ಬೆಲೆ ಶೇ3ರಷ್ಟು ಏರಿಕೆ ಕಂಡು 1,326ರು ಏರಿಕೆಯಾಗಿ 1 ಕೆ.ಜಿಗೆ 47,087ರು ನಷ್ಟಾಗಿದೆ.

ಸೌದಿ ಅರೇಬಿಯಾದ ಅತಿದೊಡ್ಡ ತೈಲ ಸಂಸ್ಕರಣಾ ಘಟಕದ ಮೇಲೆ ಡ್ರೋನ್ ದಾಳಿ ಬಳಿಕ ಜಾಗತಿಕ ತೈಲ ಬೆಲೆ ನಿರೀಕ್ಷಿತವಾಗಿ ಏರಿಕೆ ಕಂಡಿದೆ. ಈ ದಾಳಿಗೆ ಇರಾನ್ ಕಾರಣ ಎಂದು ಯುಎಸ್ ಪ್ರತಿಪಾದಿಸಿದೆ. ಅತಿ ಹೆಚ್ಚು ಇಂಧನ ಹಾಗೂ ಚಿನ್ನ ಆಮದು ಮಾಡಿಕೊಳ್ಳುವ ಭಾರತಕ್ಕೆ ಇದರಿಂದ ಭಾರಿ ಪರಿಣಾಮ ಬೀರಲಿದೆ. ಡಾಲರ್ ಎದುರು ರುಪಾಯಿ ಬೆಲೆ 71.42ರು ನಷ್ಟಿದ್ದು, ಚಿನ್ನದ ಬೆಲೆ ಏರಿಕೆ ಇನ್ನಷ್ಟು ಪುಷ್ಟಿ ನೀಡಿದೆ.

ದೆಹಲಿಯಲ್ಲಿ ಸೋಮವಾರದಂದು 24 ಕ್ಯಾರೆಟ್ ಚಿನ್ನದ ಬೆಲೆ 460ರು ಏರಿಕೆ ಕಂಡು 10 ಗ್ರಾಂಗೆ 38,860ರು ನಷ್ಟಿದ್ದರೆ, ಬೆಳ್ಳಿ ಬೆಲೆ 1,096 ರು ಏರಿಕೆ ಕಂಡು 1 ಕೆಜಿಗೆ 47,957 ರು ನಷ್ಟಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಜಾಗತಿಕವಾಗಿ ಶೇ1.6ರಷ್ಟು ಏರಿಕೆ ಕಂಡು ಸಿಂಗಪುರದಲ್ಲಿ ಪ್ರತಿ ಔನ್ಸಿಗೆ 1,512 ಡಾಲರ್ ನಷ್ಟಿದ್ದರೆ, ಬೆಳ್ಳಿ ಬೆಲೆ 3.2% ಏರಿಕೆ ಕಂಡು ಪ್ರತಿ ಔನ್ಸಿಗೆ 17.99 ಡಾಲರ್ ನಷ್ಟಿತ್ತು.

English summary
Gold and silver prices in India jumped sharply tracking higher global rates and a softer rupee. On MCX, October gold futures prices today shot up by 1.7% to ₹38,163 per 10 grams as compared to Friday's close of ₹37,503
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X