• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರಾವಣ ಸೋಮವಾರ ಚಿನ್ನ ಬೆಳ್ಳಿ ದರ ದಿಢೀರ್ ಏರಿಕೆ

|

ನವದೆಹಲಿ, ಆಗಸ್ಟ್ 05: ಶ್ರಾವಣ ಮಾಸದ ಹಬ್ಬಗಳ ಆರಂಭಕ್ಕೆ ನಾಗರ ಪಂಚಮಿ ನಾಂದಿ ಹಾಡಿದೆ, ಶ್ರಾವಣ ಸಂಭ್ರಮದಲ್ಲಿ ಚಿನಿವಾರ ಪೇಟೆಯಲ್ಲಿ ಗ್ರಾಹಕರಿಗೆ ಆಘಾತವಾಗಿದೆ. ಸೋಮವಾರದಂದು ಚಿನ್ನ, ಬೆಳ್ಳಿ ದಿಢೀರ್ ಏರಿಕೆ ಕಂಡಿದೆ.

ಅಮೇರಿಕ ಹಾಗೂ ಚೀನಾ ನಡುವಿನ ಬಿಕ್ಕಟ್ಟು, ಕಾಶ್ಮೀರ ವಿಧೇಯಕಕ್ಕೆ ಹೊಂದಿಕೆಯಾಗುವಂತೆ ಡಾಲರ್ ಎದುರು ರೂಪಾಯಿ ಬೆಲೆ ಕುಸಿತ, ಸ್ಥಳೀಯ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಕೆ ಕಂಡಿದೆ.

ಸೋಮವಾರದಂದು ದೆಹಲಿಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 800 ರೂಪಾಯಿಗಳ ಏರಿಕೆಯಾಗಿದ್ದು, 10 ಗ್ರಾಂಗೆ 36,970 ರೂಪಾಯಿ ತಲುಪಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದ್ದು, 1 ಕೆಜಿಗೆ 43,100 ರೂಪಾಯಿನಂತೆ ವಹಿವಾಟು ಮಾಡಿದೆ.

ಡಾಲರ್ ಎದುರು ರುಪಾಯಿ ಕುಸಿದಿದ್ದು 70.50 ಪ್ರತಿ ಡಾಲರ್ ನಂತೆ ಇಂದು ವಹಿವಾಟು ನಡೆಸಿದೆ.

ಜಾಗತಿಕವಾಗಿ ನ್ಯೂಯಾರ್ಕಿನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,459ಯುಎಸ್ ಡಾಲರ್ ನಂತೆ ಹಾಗೂ ಬೆಳ್ಳಿ ಬೆಲೆ ಪ್ರತಿ ಔನ್ಸಿಗೆ 16.40 ಯುಎಸ್ ಡಾಲರ್ ನಂತೆ ವ್ಯವಹಾರ ಕಂಡಿದೆ.

ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿಯಂತೆ, ಶೇ 99.9 ಪರಿಶುದ್ಧ ಚಿನ್ನ ಹಾಗೂ ಶೇ 99.5 ಪರಿಶುದ್ಧ ಚಿನ್ನದ ಕ್ರಮವಾಗಿ 36,970 ಪ್ರತಿ 10 ಗ್ರಾಂ ಹಾಗೂ 36,800 ರುನಷ್ಟಾಗಿದೆ. ಬೆಳ್ಳಿ ಬೆಲೆ 1000 ರು ಏರಿಕೆ ಕಂಡು ಪ್ರತಿ 1 ಕೆಜಿಗೆ 43,100 ರುಗೇರಿದೆ. ಆದರೆ, ಬೆಳ್ಳಿ ನಾಣ್ಯಗಳಿಗೆ ಬೇಡಿಕೆ ಕಂಡು ಬಂದಿದ್ದು 100 ಕ್ಕೆ 84,000 ರು ಖರೀದಿಗೆ ಹಾಗೂ 85,000ರು ಮಾರಾಟದ ಬೆಲೆ ಪಡೆದುಕೊಂಡಿದೆ.

English summary
Gold prices rose ₹800 to hit an all-time high of ₹36,970 per 10 gram at the bullion market. Tracking gold, silver prices also soared ₹1,000 to 43,100 per kg.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X