Gold Price: ದಿಢೀರ್ ಹೆಚ್ಚಾದ ಚಿನ್ನದ ಬೆಲೆ! ಶುಕ್ರವಾರ ಮತ್ತಷ್ಟು ಏರಿಕೆ ಸಾಧ್ಯತೆ
ಜೂನ್ 16ರಿಂದ ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಚಿನ್ನದ ಬೆಲೆ ಗುರುವಾರ (ಜೂನ್ 20) ದಿಢೀರ್ ಏರಿಕೆ ಕಂಡಿದೆ. 4 ದಿನಗಳಲ್ಲಿ 100 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 3300 ರೂಪಾಯಿ ಕುಸಿತ ಕಂಡಿದ್ದರೆ, ಗುರುವಾರ ಒಂದೇ ದಿನ 2200 ರೂಪಾಯಿ ಏರಿಕೆಯಾಗಿದೆ.
ಚಿನ್ನದ ಬೆಲೆ ಮತ್ತಷ್ಟು ಕುಸಿಯಬಹುದು ಎಂದು ನಿರೀಕ್ಷೆ ಮಾಡುತ್ತಿದ್ದ ಆಭರಣ ಪ್ರಿಯರಿಗೆ ನಿರಾಸೆಯಾಗಿದೆ. ಬುಧವಾರ 6,62,000 ರೂಪಾಯಿ ಇದ್ದ 22 ಕ್ಯಾರೆಟ್ (ಆಭರಣ) ಚಿನ್ನದ ಬೆಲೆ ಗುರುವಾರ 2000 ರೂಪಾಯಿ ಏರಿಕೆ ಕಂಡು 6,64,000 ರೂಪಾಯಿಗೆ ಮಾರಾಟವಾಗಿದೆ. 10 ಗ್ರಾಂ ಆಭರಣ ಚಿನ್ನದ ಬೆಲೆ 200 ರೂಪಾಯಿ ಏರಿಕೆಯಾಗಿದೆ.

24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ 2,200 ರೂಪಾಯಿ ಹೆಚ್ಚಾಗಿದೆ. ಬುಧವಾರ 7,22,200 ರೂಪಾಯಿದ್ದ 24 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆ ಗುರುವಾರ 7,24,400 ರೂಪಾಯಿಗೆ ಹೆಚ್ಚಳವಾಗಿದೆ. 10 ಗ್ರಾಂ ಶುದ್ಧ ಚಿನ್ನದ ಬೆಲೆ 2200 ರೂಪಾಯಿ ಹೆಚ್ಚಾಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ ಕೂಡ 1700 (100 ಗ್ರಾಂ) ರೂಪಾಯಿ ಹೆಚ್ಚಳವಾಗಿದೆ. ಬುಧವಾರ 5,41,600 ರೂಪಾಯಿ ಇದ್ದ 18 ಕ್ಯಾರೆಟ್ ಚಿನ್ನದ ಬೆಲೆ ಗುರುವಾರ 5,43,300 ರೂಪಾಯಿಗೆ ಹೆಚ್ಚಾಗಿದೆ.
ಬೆಳ್ಳಿ ಧಾರಣೆ ಹೇಗಿದೆ?
ಚಿನ್ನದ ಜೊತೆ ಬೆಳ್ಳಿ ಬೆಲೆ ಕೂಡ ಹೆಚ್ಚಳವಾಗಿದೆ. ಬುಧವಾರಕ್ಕೆ ಹೋಲಿಕೆ ಮಾಡಿದರೆ ಗುರುವಾರ ಬೆಳ್ಳಿ ಧಾರಣೆ ಒಂದು ಕೆಜಿಗೆ 1750 ರೂಪಾಯಿ ಹೆಚ್ಚಳವಾಗಿದೆ. ಬುಧವಾರ 91,000 ರೂಪಾಯಿ ಇದ್ದ ಒಂದು ಕೆಜಿ ಬೆಳ್ಳಿ ಬೆಲೆ ಗುರುವಾರ 92,750 ರೂಪಾಯಿಗೆ ಹೆಚ್ಚಳವಾಗಿದೆ.
ಶುಕ್ರವಾರ ಬಂಗಾರ ಮತ್ತಷ್ಟು ಭಾರ?
ಕಳೆದ ನಾಲ್ಕೈದು ದಿನಗಳಿಂದ ಅಲ್ಪ ಕುಸಿತ ಕಂಡಿದ್ದ ಚಿನ್ನದ ಬೆಲೆ ಗುರುವಾರ ಏರಿಕೆ ಕಂಡಿದೆ. ಶುಕ್ರವಾರ ಬಂಗಾರ ಆಭರಣ ಪ್ರಿಯರಿಗೆ ಮತ್ತಷ್ಟು ಭಾರವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬೇಡಿಕೆಯ ಹೆಚ್ಚಳ ಮತ್ತು ಹಣದುಬ್ಬರ ಕಾರಣ ಚಿನ್ನದ ಬೆಲೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಕುಸಿಯುವ ಮುನ್ಸೂಚನೆ ಇದೆ ಎಂದು ಹೇಳಲಾಗಿದೆ.












Click it and Unblock the Notifications