ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ದಾಖಲೆಯತ್ತ ಸಾಗುತ್ತಿದೆ ಚಿನ್ನದ ಬೆಲೆ: 2011ರ ಬಳಿಕ ಭಾರೀ ಏರಿಕೆ

|
Google Oneindia Kannada News

ನವದೆಹಲಿ, ಜುಲೈ 25: ದಿನೇ ದಿನೇ ಹಳದಿ ಲೋಹದ ಬೆಲೆಯು ಗಗನಕ್ಕೇರುತ್ತಿದ್ದು, ಸ್ಪಾಟ್ ಚಿನ್ನ 2011ರಿಂದ ಮೊದಲ ಬಾರಿಗೆ ಔನ್ಸ್‌ಗೆ 1,900 ಡಾಲರ್ ತಲುಪಿ ಅಗ್ರಸ್ಥಾನದಲ್ಲಿದೆ.

Recommended Video

ಯೋಧನ ಪತ್ನಿಗೆ ಸರ್ಕಾರಿ ಕೆಲಸ, 5 ಕೋಟಿ ದುಡ್ಡು, ಸೈಟು | Oneindia Kannada

ಜಾಗತಿಕ ಆರ್ಥಿಕತೆ ಮಂದಗತಿ, ಕೊರೊನಾ ಸಾಂಕ್ರಾಮಿಕ ರೋಗ ಹಾಗೂ ಅಮೆರಿಕಾ-ಚೀನಾ ನಡುವಿನ ಕಿತ್ತಾಟವು ಹೂಡಿಕೆದಾರರನ್ನು ಚಿನ್ನದತ್ತ ಆಕರ್ಷಿಸುತ್ತಿದೆ. ಹೀಗಾಗಿ ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಸತತ ಏರಿಕೆ ಕಂಡ ಚಿನ್ನದ ಬೆಲೆ: ಜುಲೈ 24ರ ದರ ಇಲ್ಲಿದೆಸತತ ಏರಿಕೆ ಕಂಡ ಚಿನ್ನದ ಬೆಲೆ: ಜುಲೈ 24ರ ದರ ಇಲ್ಲಿದೆ

ದುರ್ಬಲ ಡಾಲರ್ ಮತ್ತು ಸರ್ಕಾರಿ ಬಾಂಡ್‌ಗಳ ಮೇಲಿನ ಇಳುವರಿ ಚಿನ್ನವನ್ನು ಹೊಂದುವ ಅವಕಾಶ ವೆಚ್ಚವನ್ನು ಕಡಿಮೆ ಮಾಡುತ್ತದೆ. ಚಿನ್ನವು ಏಳನೇ ಸಾಪ್ತಾಹಿಕ ಲಾಭದತ್ತ ಸಾಗುತ್ತಿದ್ದು, 2011 ರ ನಂತರ ಅತ್ಯಂತ ಎತ್ತರಕ್ಕೆ ತಲುಪಿದೆ. ಇತ್ತೀಚೆಗೆ ಬೆಳ್ಳಿ ಬೆಲಯು ಕೂಡ ನಾಲ್ಕು ದಶಕಗಳಲ್ಲಿ ಭಾರೀ ಏರಿಕೆ ದಾಖಲಿಸುತ್ತಿದೆ. ಮುಂದಿನ ವಾರದ ಆರಂಭದಲ್ಲಿ ಚಿನ್ನವು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಬಹುದು ಎಂದು ಚಿಕಾಗೋದ ಆರ್‌ಜೆಒ ಫ್ಯೂಚರ್ಸ್‌ನ ವ್ಯಾಪಾರಿ ಹೇಳಿದ್ದಾರೆ.

Gold Prices Record: $1,900 For First Time Since 2011

ಕೊರೊನಾವೈರಸ್‌ನ ಸಂದರ್ಭಗಳನ್ನು ಗಮನಿಸಿದರೆ ಚಿನ್ನವು ಸುರಕ್ಷಿತ ತಾಣವಾಗಿದೆ. ಹೀಗಾಗಿ ಜನರು ಹೂಡಿಕೆಯತ್ತ ಮುಖ ಮಾಡಿದ್ದಾರೆ. ಸ್ಪಾಟ್ ಚಿನ್ನವು ಔನ್ಸ್‌ಗೆ ಸೆಪ್ಟೆಂಬರ್ 2011 ರಲ್ಲಿ ತಲುಪಿದ 1,921.17 ಡಾಲರ್ ಸಮೀಪದಲ್ಲಿದೆ. ಚಿನ್ನದ ಭವಿಷ್ಯವು ಶೇ. 0.4ರಷ್ಟು ಏರಿಕೆಯಾಗಿ 1897.50 ಡಾಲರ್‌ಗೆ ತಲುಪಿದೆ

English summary
Spot gold topped $1,900 an ounce for the first time since 2011 and edged closer to an all-time high
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X