Gold Rate Today: ಚಿನ್ನ-ಬೆಳ್ಳಿ ದರದಲ್ಲಿ ಇಂದು ಭರ್ಜರಿ ಇಳಿಕೆ: ನಿಮ್ಮೂರಲ್ಲಿ ಎಷ್ಟಿದೆ ದರ?
Gold Silver Price Today: ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರದ ಮೇಲೆ ಬೇರೆ ಬೇರೆ ದೇಶಗಳ ತೆರಿಗೆ ನೀತಿ, ಒಪ್ಪಂದಗಳು ಪರಿಣಾಮ ಬೀರುತ್ತಿವೆ. ಇದಕ್ಕೆ ಚಿನ್ನದ ಬೆಲೆ ಏರಿಕೆ ಹೊರತಾಗಿಲ್ಲ. ನಿರಂತರವಾಗಿ ಏರಿಕೆ ಆಗುತ್ತಿದ್ದ ಚಿನ್ನ ಬೆಲೆಗಳು ಕ್ರಮೇಣ ಕುಸಿಯುತ್ತಿದೆ. ಮಾರುಕಟ್ಟೆ ತಜ್ಞರು ಅಂದಾಜಿಸಿದಂತೆ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದ 24 ಕ್ಯಾರಟ್ ಮತ್ತು 22 ಕ್ಯಾರಟ್ ಚಿನ್ನ ದರದಲ್ಲಿ ಕುಸಿತವಾಗಿದೆ. ಇಂದು ಅಕ್ಟೋಬರ್ 30ರಂದು ಎಷ್ಟಿದೆ ದರ, ಇಲ್ಲಿದೆ ಮಾಹಿತಿ.
ದೇಶ ಹಾಗೂ ವಿದೇಶಗಳಲ್ಲಿ ಚಿನ್ನದ ಬೇಡಿಕೆ ಕೊಂಚ ಕಡಿಮೆ ಆಗಿದೆ ಎಂದು ವರದಿ ಆಗಿದೆ. ಚೀನಾ & ಯುಸ್ ಒಪ್ಪಂದಗಳು ಹಾಗೂ ಇತರ ಅಂತಾರಾಷ್ಟ್ರೀಯ ಬೆಳವಣಿಗೆ ಕಾರಣದಿಂದ ಮಾರುಕಟ್ಟೆಯಲ್ಲಿ ಚಿನ್ನದ ದರಗಳು ಕುಸಿತದ ಹಾದಿ ಹಿಡಿದವೆ. ಇಂದು ಗುರುವಾರ ಚಿನ್ನಾಭರಣಗಳ ಮೇಲೆ ಭರ್ಜರಿ ಇಳಿಕೆ ಆಗಿದೆ. ಆದರೆ ಇದೇ ರೀತಿ ನಿರಂತರ ಇಳಿಕೆ ಆಗುತ್ತದೆ ಎಂದು ಈಗಲೇ ಹೇಳಲಾಗದು.

24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯು ನೆನ್ನೆಯ 1,22,400 ರೂಪಾಯಿಯಿಂದ 1,20,490 ರೂಪಾಯಿಗೆ ಇಳಿಕೆ ಆಗಿದೆ. ಅಂದರೆ ಇವತ್ತು ಬರೋಬ್ಬರಿ 1,910 ರೂಪಾಯಿ ತಗ್ಗಿದೆ. ಇನ್ನೂ 22 ಕ್ಯಾರಟ್ ಚಿನ್ನದ ದರವು 1,12,200 ರೂಪಾಯಿಯಿಂದ ಇಂದು ಒಂದು ದಿನಕ್ಕೆ 1,10,450 ರೂಪಾಯಿಗೆ ಕುಸಿತ ಕಂಡಿದೆ. ಒಟ್ಟು 1,750 ನಷ್ಟು ಕಡಿಮೆ ಆಗಿದೆ. ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಆಗಿ, ಕೊಂಚ ಕಡಿಮೆ ಆಗುತ್ತಿದ್ದ ದರ ಇದೀಗ ದಿಢೀರ್ ಕುಸಿತವಾಗಿದೆ.
ಚಿನ್ನ ಮಾತ್ರವಲ್ಲದೇ ಇಂದು ಬೆಳ್ಳಿಯ ದರವು ಕುಸಿತ ಕಂಡಿದೆ. ಹತ್ತು ಗ್ರಾಂ ಚಿನ್ನದ ಬೆಲೆಯ 1,510 ರೂಪಾಯಿಗೆ ಕುಸಿದಿದೆ. 100 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿ ಇಳಿಕೆ ಆಗಿದ್ದು, ಇಂದು 15,100 ರೂಪಾಯಿ ಇದೆ. ಒಂದು ಕೆ.ಜಿ. 1,51,000 ರೂಪಾಯಿ ಇದೆ. ಮುಂದಿನ ದಿನಗಳಲ್ಲಿ ಚಿನ್ನ ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ ಆಗುವ ನಿರೀಕ್ಷೆ ಇದೆ ಎಂದು ಅಂದಾಜಿಸಲಾಗಿದೆ. ನಗರವಾರು 10 ಗ್ರಾಂ ಚಿನ್ನದ ಬೆಲೆ ಮಾಹಿತಿ ಇಲ್ಲಿದೆ.
22ಕ್ಯಾರಟ್ 10 ಗ್ರಾಂ ಚಿನ್ನದ ದರ, ನಗರವಾರು ಪಟ್ಟಿ
ಬೆಂಗಳೂರು: 1,13,538 ರಿಂದ 1,15,322 ರೂಪಾಯಿ
ಕೋಲ್ಕತ್ತಾ: 1,10,450 ರೂಪಾಯಿ
ಮುಂಬೈ: 1,11,945 ರೂಪಾಯಿ
ಮೊಹಾಲಿ 1,12,450 ರೂಪಾಯಿ
ದೆಹಲಿ: 1,12,201 ರೂಪಾಯಿ
ಜೈಪುರ: 1,12,350 ರೂಪಾಯಿ
ಲಖನೌ: 1,12,350 ರೂಪಾಯಿ
ಚೆನ್ನೈ: 1,14,000 ರಿಂದ 1,15,306 ರೂಪಾಯಿ
ಹೈದರಾಬಾದ್: 1,14,950 ರೂಪಾಯಿ
24 ಕ್ಯಾರಟ್ 10 ಗ್ರಾಂ ಚಿನ್ನದ ದರ, ನಗರವಾರು ಪಟ್ಟಿ
ಲಕ್ನೋ: 1,25,000 ರೂಪಾಯಿ
ಬೆಂಗಳೂರು: 1,23,859 ರೂಪಾಯಿ
ಕೋಲ್ಕತ್ತಾ: 1,23,840 ರೂಪಾಯಿ
ಹೈದರಾಬಾದ್: 1,22,460 ರೂಪಾಯಿ
ಚೆನ್ನೈ: 1,21,580 ರೂಪಾಯಿ
ಮುಂಬೈ: 1,22,490 ರೂಪಾಯಿ












Click it and Unblock the Notifications