ಐದು ದಿನ ಕುಸಿದಿದ್ದ ಚಿನ್ನದ ಬೆಲೆ ಏರಿಕೆ: ತಿಂಗಳಲ್ಲಿ ಗರಿಷ್ಠ ಮಟ್ಟಕ್ಕಿಂತ ಇನ್ನೂ 5,000 ರೂ. ಕಡಿಮೆ

ನವದೆಹಲಿ, ಆಗಸ್ಟ್‌ 26: ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ಐದು ವಹಿವಾಟುಗಳಲ್ಲಿ ಇಳಿಕೆ ಕಂಡ ಬಳಿಕ ಚಿನ್ನದ ಬೆಲೆ ಬುಧವಾರ ಹೆಚ್ಚಾಗಿದೆ. ಎಂಸಿಎಕ್ಸ್‌ನಲ್ಲಿ ಅಕ್ಟೋಬರ್ ಚಿನ್ನದ ಭವಿಷ್ಯವು ಪ್ರತಿ ಗ್ರಾಂಗೆ ಶೇಕಡಾ 0.4ರಷ್ಟು ಏರಿಕೆ ಕಂಡು, 51,139 ಕ್ಕೆ ತಲುಪಿದ್ದರೆ, ಬೆಳ್ಳಿ ಭವಿಷ್ಯವು ಪ್ರತಿ ಕೆಜಿಗೆ ಶೇಕಡಾ 0.6ರಷ್ಟು ಏರಿಕೆ ದಾಖಲಿಸಿ 64,379 ರೂಪಾಯಿಗೆ ತಲುಪಿದೆ.

Recommended Video

      ಕೊನೆಗೂ Africa , Polioದಿಂದ ಮುಕ್ತ | Oneindia Kannada

      ಕಳೆದ ವಹಿವಾಟಿನಲ್ಲಿ, ಚಿನ್ನದ ಭವಿಷ್ಯವು ಶೇಕಡಾ 0.5 ಮತ್ತು ಬೆಳ್ಳಿ ಶೇಕಡಾ 2ರಷ್ಟು ಕುಸಿದಿದೆ. ಆಗಸ್ಟ್ 7 ರಿಂದ ಗರಿಷ್ಠ, 56,200 ರೂಪಾಯಿಗೆ ತಲುಪಿದೆ. ಆದರೆ ಇಲ್ಲಿಯವರೆಗೆ ಭಾರತದಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಸುಮಾರು 5,000 ರುಪಾಯಿವರೆಗೆ ಇಳಿಕೆಗೊಂಡಿದೆ.

      ಜಾಗತಿಕ ಮಾರುಕಟ್ಟೆಗಳಲ್ಲಿ, ಚಿನ್ನವು ಔನ್ಸ್‌ಗೆಗ 1,927.26 ಡಾಲರ್‌ ದರದಲ್ಲಿ ಸ್ಥಿರವಾಗಿವೆ. ಜಾಗತಿಕ ಆರ್ಥಿಕ ಚೇತರಿಕೆಯ ಕುರಿತಾದ ಆತಂಕಗಳು ಅಮೆರಿಕಾ-ಚೀನಾ ವ್ಯಾಪಾರ ಮಾತುಕತೆಗಳಲ್ಲಿನ ಪ್ರಗತಿಯ ಚಿಹ್ನೆಗಳಿಂದ ಉಂಟಾಗುವ ಅಪಾಯದ ಮನೋಭಾವವನ್ನು ಹೆಚ್ಚಿಸುತ್ತದೆ. ಪ್ರಮುಖ ಕರೆನ್ಸಿಗಳ ವಿರುದ್ಧ ಡಾಲರ್ ಸೂಚ್ಯಂಕವು 93.108ಕ್ಕೆ ಸ್ಥಿರವಾಗಿದೆ.

      Gold Price Up After Five Days Fall

      ಇತರ ಅಮೂಲ್ಯ ಲೋಹಗಳ ಪೈಕಿ, ಬೆಳ್ಳಿಯ ದರವು ಔನ್ಸ್‌ಗೆ 26.43 ಡಾಲರ್‌ರಷ್ಟಿದ್ದರೆ, ಪ್ಲಾಟಿನಂ ಶೇಕಡಾ 0.1ರಷ್ಟು ಏರಿಕೆಯಾಗಿ 928.12 ಡಾಲರ್‌ಗೆ ತಲುಪಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+