Gold Price Today Oct 5: ದಸರಾ - ದೀಪವಾಳಿಗೂ ಮುಂಚೆ ಚಿನ್ನದ ಬೆಲೆ ಭರ್ಜರಿ ಇಳಿಕೆ; 3,500 ರೂ.ಕಡಿತ, ಬೆಳ್ಳಿಯೂ ಕುಸಿತ!

Gold Price Today Oct 5: ಚಿನ್ನದ ಬೆಲೆಯು ಅಕ್ಟೋಬರ್ 5ರ ಸೋಮವಾರ ಭರ್ಜರಿ ಇಳಿಕೆಯಾಗಿದೆ. ಕಳೆದ ಮೂರು ದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ನಿತರಂತರ ಇಳಿಕೆಯಾಗಿದೆ. ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಭರ್ಜರಿ ಇಳಿಕೆಯಾಗಿದೆ. ಪಿತೃಪಕ್ಷ ಮುಗಿಯುತ್ತಿದ್ದಂತೆಯೇ ದಸರಾ ಹಾಗೂ ದೀಪಾವಳಿ ಸೇರಿದಂತೆ ದೊಡ್ಡ ದೊಡ್ಡ ಹಬ್ಬಗಳು ಇವೆ. ಹಬ್ಬಗಳು ಇರುವುದರ ಬೆನ್ನಲ್ಲೇ ಚಿನ್ನದ ಬೆಲೆಯು ಭರ್ಜರಿ ಇಳಿಕೆಯಾಗಿದೆ.

ವಿಶೇಷ ಕಾರ್ಯಕ್ರಮಗಳು ಇಲ್ಲದೆ ಇರುವುದರಿಂದ ಚಿನ್ನಾಭರಣ ಖರೀದಿ ಸಹ ಈಗ ಅಲ್ಪ ಇಳಿಕೆಯಾಗಿದೆ. 22 ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 3,500 ರೂಪಾಯಿ ಕಡಿಮೆಯಾಗಿದ್ದರೆ, 22 ಕ್ಯಾರೆಟ್ ಆಭರಣ ಚಿನ್ನದ ಬೆಲೆಯು 3,200 ರೂಪಾಯಿ ಕಡಿಮೆಯಾಗಿದೆ. ಬೆಳ್ಳಿ ಬೆಲೆಯೂ ಸಹ ಲೋಹ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ.

Gold Price Today Oct 5 Gold Rates Plunge Ahead of Dasara amp amp Diwali 3 500 Cut Silver Prices Also Fall

ಚಿನ್ನ ಮತ್ತು ಬೆಳ್ಳಿ ಬೆಲೆಯು ನಿರಂತರವಾಗಿ ಇಳಿಕೆಯಾಗುತ್ತಿದ್ದು, ಬಂಗಾರ ಪ್ರಿಯರಿಗೆ ಸಂತೋಷವನ್ನುಂಟು ಮಾಡಿದೆ. ಬೆಳ್ಳಿ ಬೆಲೆ ನಿರಂತರವಾಗಿ ಯಥಾಸ್ಥಿತಿ ಮುಂದುವರಿದಿದೆ. ಯುಎಸ್ ಫೆಡರಲ್ ರಿಸರ್ವ್‌ನ ಮುಂಬರುವ ಹಣಕಾಸು ನೀತಿ ಸಭೆಯು ಮಹತ್ವ ಪಡೆದು ಕೊಂಡಿದೆ. ಇದರ ಬೆನ್ನಲ್ಲೇ ಚಿನ್ನ ಮತ್ತು ಬೆಳ್ಳಿಯು ಇಳಿಕೆಯಾಗುತ್ತಿದೆ. ಹಣಕಾಸು ಮಾರುಕಟ್ಟೆಯಲ್ಲಿ ಬಡ್ಡಿ ದರಗಳ ಸುತ್ತಲಿನ ಅನಿಶ್ಚಿತ ತೆಯಿಂದಾಗಿ ದೊಡ್ಡ ಸಾಂಸ್ಥಿಕ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆ ಇರಿಸಿದ್ದಾರೆ. ಚಿನ್ನದ ಲಾಭ-ಬುಕಿಂಗ್‌ಗೆ ಇದು ದಾರಿ ಮಾಡಿಕೊಟ್ಟಿದೆ. ಸಹಜವಾಗಿಯೇ ಚಿನ್ನ ಮತ್ತು ಬೆಳ್ಳಿ ಬೆಲೆ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲು ಕಾರಣವಾಗಿದೆ.

ಬಂಗಾರ ಪ್ರಿಯರು ಸಂತೋಷಪಡುವಂತಹ ಸುದ್ದಿ ಸಿಕ್ಕಿದೆ. ಅಕ್ಟೋಬರ್ 5ರ ಸೋಮವಾರ ಭಾರತದಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 1,50,570 ರೂ.ಗಳಷ್ಟಿದ್ದರೆ, ಬೆಳ್ಳಿ ಪ್ರತಿ ಕೆಜಿಗೆ 2,26,630 ರೂ. ಆಗಿದೆ. 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ 10 ಗ್ರಾಂಗೆ 1,38,023 ರೂಪಾಯಿ ಹಾಗೂ 925 ಶುದ್ಧ ಬೆಳ್ಳಿ ಪ್ರತಿ ಕೆಜಿಗೆ 2,09,633 ರೂ.ಗಳಷ್ಟಿತ್ತು ಎಂದು Bullion.co.in ವರದಿ ಮಾಡಿದೆ.

ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಅಕ್ಟೋಬರ್ 5ರ ಚಿನ್ನದ ಬೆಲೆ

ಪ್ರಮುಖ ನಗರಗಳಲ್ಲಿ 24 ಸಾವಿರ ಚಿನ್ನದ ಬೆಲೆ ವಿವರ ಇಲ್ಲಿದೆ

ಹೈದರಾಬಾದ್: 10 ಗ್ರಾಂಗೆ 1,50,540 ರೂ.

ಬೆಂಗಳೂರು: 10 ಗ್ರಾಂಗೆ 1,50,420 ರೂ.

ಮುಂಬೈ: 10 ಗ್ರಾಂಗೆ 1,50,300 ರೂ.

ದೆಹಲಿ: 10 ಗ್ರಾಂಗೆ 1,50,040 ರೂ.

ಚೆನ್ನೈ: 10 ಗ್ರಾಂಗೆ 1,50,740 ರೂ.

ಕೋಲ್ಕತ್ತಾ: 10 ಗ್ರಾಂಗೆ 1,50,100 ರೂ.

ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ

ಬೆಂಗಳೂರು: ಪ್ರತಿ ಕೆಜಿಗೆ 2,26,390 ರೂ.

ಮುಂಬೈ: ಪ್ರತಿ ಕೆಜಿಗೆ 2,26,220 ರೂ.

ದೆಹಲಿ: ಪ್ರತಿ ಕೆಜಿಗೆ 2,25,830 ರೂ.

ಚೆನ್ನೈ: ಪ್ರತಿ ಕೆಜಿಗೆ 2,26,870 ರೂ.

ಕೋಲ್ಕತ್ತಾ: ಪ್ರತಿ ಕೆಜಿಗೆ 2,25,920 ರೂ.

ಹೈದರಾಬಾದ್: ಪ್ರತಿ ಕೆಜಿಗೆ 2,26,570 ರೂ.

ಚಿನ್ನ - ಬೆಳ್ಳಿ ಬೆಲೆ ಮುಖ್ಯಾಂಶಗಳು

ಅಕ್ಟೋಬರ್ 1ರಂದು MCXನಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆಯಾಗಿ 1,50,390 ರೂ. ಕ್ಕೆ ತಲುಪಿತು. ಬೆಳ್ಳಿ 2,23,706 ರೂ. ಕ್ಕೆ ವಹಿವಾಟು ನಡೆಸಿತು.

ಅಮೆರಿಕದ ಉದ್ಯೋಗದ ಅಂಕಿ- ಅಂಶಗಳಿಂದ ಫೆಡ್ ಬಡ್ಡಿದರ ಕಡಿತದ ನಿರೀಕ್ಷೆ ಕಡಿಮೆಯಾದ ಪರಿಣಾಮ ಚಿನ್ನದ ಬೆಲೆ ಮೇಲೆ ಒತ್ತಡ ಉಂಟಾಗಿದೆ.

ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇನ್ನಷ್ಟು ಏರಿಳಿತವಾಗುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+