Gold Price Aug 2: ಚಿನ್ನ - ಬೆಳ್ಳಿ ಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್, ವಾರಾಂತ್ಯವೂ ಭರ್ಜರಿ ಇಳಿಕೆ!

Gold Price Aug 2: ಚಿನ್ನದ ಬೆಲೆಯಲ್ಲಿ ಆಗಸ್ಟ್‌ ಮೊದಲ ವಾರದಲ್ಲೇ ಕಡಿಮೆಯಾಗಿದ್ದು, ಚಿನ್ನ ಪ್ರಿಯರಿಗೆ ಸಂತೋಷನ್ನುಂಟು ಮಾಡಿದೆ. ಕಳೆದ 10 ದಿನಗಳಿಂದಲೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಆಗಸ್ಟ್‌ 2ರ ಭಾನುವಾರ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ. ಇದು ಚಿನ್ನ ಪ್ರಿಯರಿಗೆ ಸಂತೋಷನ್ನುಂಟು ಮಾಡಿದೆ. ವಾರಾಂತ್ಯದಲ್ಲಿ ಬೆಳ್ಳಿ ಬೆಲೆಯು ಸಹ ಯಥಾಸ್ಥಿತಿಯಲ್ಲಿದೆ. ವಿಶ್ವದಾದ್ಯಂತ ಆರ್ಥಿಕ ಸಂಕಷ್ಟ - ಇರಾನ್ Vs ಅಮೆರಿಕಾ, ಇಸ್ರೇಲ್‌ನ ನಡುವೆ ನಡೆಯುತ್ತಿರುವ ಸಂಘರ್ಷ ಮುಂದುವರಿಯುವುದರ ನಡುವೆಯೂ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗದೆ ಇರುವುದು ಚಿನ್ನ ಪ್ರಿಯರಲ್ಲಿ ಸಣ್ಣ ಸಮಾಧಾನ ಮೂಡಿಸಿದೆ. ಆಗಸ್ಟ್‌ 2ರ ಚಿನ್ನ ಮತ್ತು ಬೆಳ್ಳಿ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.

18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂಗೆ 10,816 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,08,160 ರೂ. ಆಗಸ್ಟ್‌ 2ಕ್ಕೆ ಹೋಲಿಕೆ ಮಾಡಿದರೆ, 18 ಕ್ಯಾರೆಟ್ ಚಿನ್ನದ ಬೆಲೆಯು 1 ಗ್ರಾಂ ಹಾಗೂ 10 ಗ್ರಾಂನಲ್ಲಿ ಯಾವುದೇ ದೊಡ್ಡ ವ್ಯತ್ಯಾಸ ಆಗಿಲ್ಲ. ಚಿನ್ನದ ಬೆಲೆಯು ಯಥಾಸ್ಥಿತಿ ಮುಂದುವರಿದಿದೆ.

Gold Price Aug 2

22 ಕ್ಯಾರೆಟ್ ಚಿನ್ನದ ಬೆಲೆ: ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯೂ ಸಹ ಯಥಾಸ್ಥಿತಿ ಮುಂದುವರಿದಿದೆ. 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 13,220 ರೂಪಾಯಿ ಆಗಿದೆ. ಇನ್ನು 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 1,32,200 ರೂಪಾಯಿ ಆಗಿದೆ. ಶನಿವಾರಕ್ಕೆ ಹೋಲಿಕೆ ಮಾಡಿದರೆ 22 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ.

24 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್ ಹಾಗೂ 22 ಕ್ಯಾರೆಟ್ ಚಿನ್ನದ ಬೆಲೆಯಂತೆಯೇ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಯಾವುದೇ ದೊಡ್ಡ ಬದಲಾವಣೆ ಆಗಿಲ್ಲ. 24 ಕ್ಯಾರೆಟ್ ಚಿನ್ನದ ಒಂದು ಗ್ರಾಂಗೆ 14,422 ರೂಪಾಯಿ ಆಗಿದೆ. 10 ಗ್ರಾಂ ಚಿನ್ನದ ಬೆಲೆಯು 1,44,220 ರೂಪಾಯಿ ಆಗಿದೆ.

Gold Price Aug 2: ಬೆಳ್ಳಿ ಬೆಲೆ ಹೇಗಿದೆ ?

ಚಿನ್ನದಂತೆ ಬೆಳ್ಳಿ ಪ್ರಿಯರಿಗೂ ಸಂತೋಷದ ವಿಷಯ ಸಿಕ್ಕಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 235 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 2,35,000 ರೂಪಾಯಿ ಆಗಿದೆ. ವಾರಾಂತ್ಯದಲ್ಲಿ ಚಿನ್ನದಂತೆಯೇ ಬೆಳ್ಳಿ ಬೆಲೆಯೂ ಸಹ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.

Gold Price Aug 2: ಚಿನ್ನ ಖರೀದಿ ಅಲ್ಪ ಪ್ರಮಾಣ ಇಳಿಕೆ

ಇನ್ನು ಕಳೆದ ಮೂರು ನಾಲ್ಕು ತಿಂಗಳುಗಳಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಅಲ್ಪ ಇಳಿಕೆಯಾಗಿದೆ. ಮುಂದಿನ ಒಂದು ವರ್ಷದ ಅವಧಿಗೆ ಚಿನ್ನ ಖರೀದಿ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿರುವುದನ್ನು ಹಲವರು ಅನುಸರಿಸುತ್ತಿರುವುದು ಸಹ ಇದಕ್ಕೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+