Gold Price: ಚಿನ್ನದ ರೇಟ್ ದಿಢೀರ್ ಏರಿಕೆ, ಈಗ ಎಷ್ಟಿದೆ ಬಂಗಾರದ ಬೆಲೆ?
ಬಂಗಾರದ ಬೆಲೆ ಕಳೆದ ಹಲವು ದಿನಗಳಿಂದ ಸತತ ಕುಸಿತ ಕಾಣುತ್ತಾ ಸಾಗಿತ್ತು. ಹೀಗಾಗಿಯೇ ಜನ ಕೂಡ ಚಿನ್ನ ಮತ್ತಷ್ಟು ಕುಸಿತ ಕಾಣಲಿದೆ ಅಂತಾ ಕಾಯುತ್ತಿದ್ದರು. ಅದರಲ್ಲೂ ಮದುವೆ ಕಾರ್ಯಗಳು ಇನ್ನೇನು ಆರಂಭ ಆಗಲಿರುವ ಕಾರಣಕ್ಕೆ, ಸಕಲ ಸಿದ್ಧತೆ ನಡೆಸಿದ್ದರು ಕೆಲವರು. ಆದರೆ ಹೀಗೆ ಸತತವಾಗಿ ಕುಸಿದು ಬೀಳುತ್ತಿದ್ದ ಚಿನ್ನ ಇಂದು ದಿಢೀರ್ ಏರಿಕೆ ಕಂಡುಬಿಟ್ಟಿದೆ. ಹಾಗಾದ್ರೆ ಚಿನ್ನದ ಬೆಲೆ ಇದೀಗ ಎಷ್ಟಿದೆ?
ಜಾಗತಿಕ ಮಟ್ಟದಲ್ಲಿ ಚಿನ್ನ ಬಳಕೆಯ ವಿಚಾರದಲ್ಲಿ ಭಾರತೀಯರೆ ಮುಂದೆ ಇದ್ದಾರೆ. ಈ ಹೆಮ್ಮೆ ಇಂದು ಅಥವಾ ನಿನ್ನೆಯದ್ದಲ್ಲ ಸಾವಿರಾರು ವರ್ಷದಿಂದ ಕೂಡ ಭಾರತದಲ್ಲಿ ಹೀಗೆ ಚಿನ್ನವನ್ನು ಬಳಕೆ ಮಾಡಲಾಗುತ್ತಿದೆ. ಅದ್ರಲ್ಲೂ ಚಿನ್ನವನ್ನ ವ್ಯಾಪಾರದ ಉದ್ದೇಶಕ್ಕಾಗಿ, ಭಾರತದಲ್ಲಿ ಈ ಹಿಂದಿನಿಂದ ಕೂಡ ಬಳಕೆ ಮಾಡಿಕೊಂಡು ಬರಲಾಗುತ್ತಿತ್ತು. ಆಗಿನ ಕರೆನ್ಸಿ ಅಂದರೆ ನಾಣ್ಯಗಳ ಮುದ್ರಣಕ್ಕೆ ಕೂಡ ಚಿನ್ನವನ್ನು ಬಳಕೆ ಮಾಡಲಾಗುತ್ತಿತ್ತು ಹೀಗೆ ನಮ್ಮ ನೆಲದ ಜೊತೆಗೆ ಚಿನ್ನವು ಕೂಡ ಬೆರೆತು ಹೋಗಿದೆ. ಹೀಗಿದ್ದಾಗಲೇ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಭಾರಿ ಏರಿಕೆ ಕಂಡು ಗಮನ ಸೆಳೆಯುತ್ತಿದೆ. ಇಂದು ಕೂಡ ಚಿನ್ನ ಏರಿಕೆ ಕಂಡಿದ್ದು, ಹಾಗಾದರೆ ಇಂದು ಎಷ್ಟಿದೆ ಚಿನ್ನದ ಬೆಲೆ?

ಚಿನ್ನದ ಬೆಲೆ ಎಲ್ಲಿ ಎಷ್ಟಿದೆ?
ಶುದ್ಧ ಚಿನ್ನ ಅಥವಾ 24 ಕ್ಯಾರೆಟ್ ಚಿನ್ನದ ಬೆಲೆ ಏರಿಕೆ ಆಗಿದ್ದು ಈಗ 24 ಕ್ಯಾರೆಟ್ ಚಿನ್ನದ ಬೆಲೆ 100 ಗ್ರಾಂಗೆ 2,200 ರೂಪಾಯಿ ಏರಿಕೆ ಕಂಡಿದೆ. ಹೀಗಾಗಿ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 7,24,400 ರೂಪಾಯಿ ಆಗಿದೆ. ಇದರ ಜೊತೆ ಶುದ್ಧ ಚಿನ್ನ ಬೆಲೆ 10 ಗ್ರಾಂಗೆ 72,440 ರೂಪಾಯಿ ಆಗಿದೆ. ಆಭರಣ ಚಿನ್ನ ಅಂದ್ರೆ 22 ಕ್ಯಾರೆಟ್ ಚಿನ್ನದ ಬೆಲೆ ಈಗ ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡಿದೆ ಪ್ರತಿ 100 ಗ್ರಾಂ ಆಭರಣ ಚಿನ್ನದ ಬೆಲೆ ಈಗ 2200 ರೂಪಾಯಿ ಏರಿಕೆಯ ಕಂಡಿದೆ. ಈ ಮೂಲಕ ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ಈಗ 220 ರೂಪಾಯಿ ಏರಿಕೆ ಆಗಿದ್ದು. ಆಭರಣ ಚಿನ್ನದ ಬೆಲೆ ಏರಿಕೆ ನಂತರ ಇದೀಗ ಪ್ರತಿ 10 ಗ್ರಾಂಗೆ 66,400 ರೂಪಾಯಿಗೆ ಮಾರಾಟ ಆಗುತ್ತಿದೆ.
ಕಷ್ಟದಲ್ಲಿ ಚಿನ್ನವೇ ಆಸರೆ ಆಗುತ್ತೆ!
ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ತುಂಬಾ ಇಷ್ಟ, ಅದ್ರಲ್ಲೂ ಆಭರಣವನ್ನ ತಮ್ಮ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇರುತ್ತದೆ. ಇದೆಲ್ಲವನ್ನೂ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ. ಎಲ್ಲೂ ಹಣ ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನ ಅಡ ಇಟ್ಟು ಅಥವಾ ಚಿನ್ನ ಮಾರಿ ದುಡ್ಡು ಪಡೆಯಬಹುದು. ಹೀಗೆ ತುರ್ತು ಸಮಯದಲ್ಲೂ ಜೀವ ಉಳಿಸೋದಕ್ಕೆ ಚಿನ್ನ ಸಹಾಯಕ.
ಚಿನ್ನ ಇಲ್ಲದೆ ಏನೂ ನಡೆಯಲ್ಲ!
ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಅದೆಷ್ಟು ಮುಖ್ಯ ಎಂದರೆ, ಚಿನ್ನವು ಇಲ್ಲದೆ ಏನೂ ನಡೆಯಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ, ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿದಂತೆ, ಹಲವು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಕೂಡ ಚಿನ್ನ ಬೇಕೆ ಬೇಕಾಗುತ್ತೆ. ಹೀಗಾಗಿಯೇ ಚಿನ್ನ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿದೆ. ಹೀಗೆಯೇ, ಎಲ್ಲಾ ಕಡೆಯಿಂದ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ, ಬೆಲೆಯಲ್ಲಿ ಏರಿಳಿತ ಉಂಟಾಗುತ್ತಿದ್ದು. ಮುಂದೆ ಇನ್ನಷ್ಟು ಏರಿಳಿತ ಕಾಣಬಹುದು ಅಂತಾರೆ ತಜ್ಞರು.
ಹೂಡಿಕೆ ಮಾಡಿದ್ದವರಿಗೆ ಟೆನ್ಷನ್!
ಚಿನ್ನ ಮಾರುಕಟ್ಟೆಯಲ್ಲಿ ಸತತವಾಗಿ ಕುಸಿತ ಕಾಣುತ್ತಿದ್ದು, ಇದರಿಂದ ಹೂಡಿಕೆದಾರರಿಗೆ ಹೊಸ ಆತಂಕ ಶುರುವಾಗಿದೆ. ಯಾಕಂದ್ರೆ ಚಿನ್ನ ಕೂಡ ಆರ್ಥಿಕತೆಯ ಒಂದು ಭಾಗವೇ ಆಗಿದೆ. ಹೀಗಿದ್ದಾಗ ಚಿನ್ನದ ಬೆಲೆಯಲ್ಲಿ ಸತತವಾಗಿ ಕುಸಿತ ದಾಖಲಾಗುತ್ತಿದೆ ಎಂಬುದು ಚಿಂತೆಗೆ ದೂಡಿದೆ. ಅದರಲ್ಲೂ ಕಳೆದ ಒಂದೆರಡು ವಾರದಿಂದ ನಿರಂತರವಾಗಿ ಚಿನ್ನವು ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ಹೀಗಿದ್ದಾಗ ಮೊನ್ನೆ ಬಂಪರ್ ಆಫರ್ ಸಿಕ್ಕಿತ್ತು. ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಆಗಿತ್ತು. ಹೀಗಿದ್ದಾಗಲೇ ಮತ್ತೊಮ್ಮೆ ಚಿನ್ನದ ಬೆಲೆ ಈಗ ಮತ್ತೆ ಹಿನ್ನಡೆ ಕಂಡಿದೆ. ಹಾಗಿದ್ರೆ ಚಿನ್ನದ ಬೆಲೆ ಮತ್ತೆ ಕುಸಿತ ಕಾಣುತ್ತಾ? ಮುಂದೆ ಓದಿ.
ದೇಶದ ಆರ್ಥಿಕತೆ ನಿರ್ಧರಿಸುತ್ತದೆ!
ಚಿನ್ನ ಕೇವಲ ಒಂದು ಲೋಹವಲ್ಲ, ಚಿನ್ನ ಎಂಬುದು ಒಂದು ಅಪರೂಪದ ವಸ್ತು ಕೂಡ. ಚಿನ್ನ ಆಭರಣಕ್ಕೆ ಮಾತ್ರವಲ್ಲ, ಹಲವು ವಿಚಾರದಲ್ಲೂ ಬಳಕೆ ಆಗುತ್ತದೆ. ಈ ಅಮೂಲ್ಯ & ಅಪರೂಪದ ಲೋಹವನ್ನು ಪ್ರತಿಯೊಂದು ದೇಶವೂ ರಕ್ಷಣೆ ಮಾಡುತ್ತದೆ. ಅದ್ರಲ್ಲೂ ಚಿನ್ನ ಖರೀದಿ ಮಾಡಿ ಸಂಗ್ರಹ ಮಾಡುವುದು ಕೂಡ ಪ್ರತಿಯೊಂದು ದೇಶದ ಆರ್ಥಿಕತೆ ರಕ್ಷಿಸುವಲ್ಲಿ ಪ್ರಮುಖ ಪಾತ್ರ ಬೀರುತ್ತದೆ. ಶ್ರೀಮಂತ ದೇಶಗಳು ಚಿನ್ನ ಖರೀದಿ ಮಾಡಿ ಅದನ್ನ ರಕ್ಷಿಸುತ್ತವೆ.












Click it and Unblock the Notifications