Gold Price Today: ಕೈಗೆಟುಕುವ ಬೆಲೆಗೆ ಚಿನ್ನ? ಇಂದು ಮತ್ತೆ ಚಿನ್ನದ ಬೆಲೆ ಕುಸಿತ-ಬೆಳ್ಳಿ ಏರಿಕೆ, ದರಪಟ್ಟಿ

ಬೆಂಗಳೂರು, ಜೂನ್ 10: ಚಿನ್ನಾಭರಣ ಪ್ರಿಯರಿಗೆ ಮಂಗಳವಾರವು ಖಷಿ ಸುದ್ದಿ ಸಿಕ್ಕಿದೆ. ಇಂದಿನ ಶುಭದಿನದಂದು ಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಆಗಿದೆ. ಒಂದು ಲಕ್ಷ ರೂಪಾಯಿ ತಲುಪಿದ ಚಿನ್ನ ದರದಲ್ಲಿ ಸರಣಿ ಇಳಿಕೆ ಮುಂದುವರಿದಿದೆ. ನೆನ್ನೆಯಷ್ಟೇ 2500 ರೂಪಾಯಿ ಇಳಿಕೆ ಆಗಿದ್ದ ಚಿನ್ನ ಇಂದು ಒಂದೇ ದಿನಕ್ಕೆ ಮತ್ತೆ 1100 ರೂಪಾಯಿ ಇಳಿಕೆ ಆಗಿದೆ. ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಕೈಗೆಟುಕುವ ದರಕ್ಕೆ ಚಿನ್ನ ಸಿಗುವ ನಿರೀಕ್ಷೆಗಳು ಇವೆ. ಆದರೆ ಯಾವುದನ್ನು ಈಗಲೇ ಹೇಳುವ ಸ್ಥಿತಿಯಲ್ಲಿ ಇಲ್ಲ ಎಂದು ಈಗಾಗಲೇ ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ.

ಚಿನ್ನ ಬೆಳ್ಳಿ ದರ ನಿರಂತರವಾಗಿ ಇಳಿಕೆ ಆಗಿದೆ. ಮದುವೆ ಸಮಾರಂಭಗಳು ಕೊಂಚ ಕಡಿಮೆ ಆಗಿವೆ. ಅಕ್ಷಯ ತೃತೀಯ ವೇಳೆ ಕೊಂಚ ಹೆಚ್ಚಾಗಿದ್ದ ಚಿನ್ನದ ಸದ್ಯ ಯಾವುದೇ ಧಾರ್ಮಿಕ ಹಬ್ಬಗಳು ಇಲ್ಲ. ಈ ವೇಳೆ ನಿರಂತರವಾಗಿ ಚಿನ್ನದ ದರದಲ್ಲಿ ಕುಸಿಯುತ್ತಿದೆ. ಬೆಳ್ಳಿ ದರ 100 ಗ್ರಾಂಗೆ 100 ರೂಪಾಯಿ ಏರಿಕೆ ಕಂಡಿದೆ. ಇಂದು ಜೂನ್ 10 ರಂದು 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರದ ಅಪ್ಡೇಟ್ ಮಾಹಿತಿ ಇಲ್ಲಿದೆ.

Gold Price on June 10th Gold Rate Rs 1100 Downfall in Single Day Silver Price Jump Today

24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನೆನ್ನೆ 97,690 ರೂಪಾಯಿ ಇದ್ದದ್ದು, ಇಂದಿಗೆ 97,580 ರೂಪಾಯಿಗೆ ಕುಸಿದಿದ್ದು, ಇಂದು ಮತ್ತೆ 110 ರೂಪಾಯಿ ಇಳಿಕೆ ಅದಂತಾಗಿದೆ. ಇದೇ ಚಿನ್ನದ 100 ಗ್ರಾಂಗೆ 9,76,900 ರೂಪಾಯಿಯಿಂದ ಇಂದು 9,75,800 ರೂಪಾಯಿಗೆ ಇಳಿಕೆ ಆಗಿದೆ. ಇದರಿಂದ ಒಂದೇ ದಿನಕ್ಕೆ 1,100 ರೂಪಾಯಿ ಇಳಿಕೆ ಕಂಡಿದೆ.

22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ ನೆನ್ನ 89,550 ರೂಪಾಯಿಯಿಂದ ಒಂದೇ ದಿನಕ್ಕೆ 89,450 ರೂಪಾಯಿಗೆ ಇಳಿಕೆ ಆಗಿದ್ದು 100 ರೂ.ನಷ್ಟು ಕುಸಿದಿದೆ. ಇದೇ ಚಿನ್ನದ 100 ಗ್ರಾಂಗೆ 8,95,500 ರೂಪಾಯಿ ಇತ್ತು. ಇಂದು ಅದು 8,94,500 ಗೆ ಕುಸಿತವಾಗಿದ್ದು, ಒಟ್ಟು 1,000 ರೂ. ದರ ತಗ್ಗಿದೆ. ಇದು ಚಿನ್ನ ಖರೀದಿದಾರರಿಗೆ ಕೊಂಚ ರಿಲೀಫ್ ನೀಡಿದಂತಾಗಿದೆ.

ಬೆಂಗಳೂರಿನಲ್ಲಿ ಚಿನ್ನ ಬೆಲೆ ನೋಡುವುದಾದರೆ, 10 ಗ್ರಾಂ ಚಿನ್ನಕ್ಕೆ 89,450 ರೂಪಾಯಿ ಇದೆ. 24 ಕ್ಯಾರಟ್ ಚಿನ್ನದ ದರ 97,580 ರೂಪಾಯಿ ಇದೆ. ಬೆಳ್ಳಿ ದರ 10 ಗ್ರಾಂಗೆ 1070 ರೂಪಾಯಿಯಷ್ಟಿದೆ. ನೆನ್ನೆಯವರೆಗೆ ಸ್ಥಿರವಾಗಿದ್ದ ಚಿನ್ನದ ದರವು ಇಂದು ಒಂದು ಕೆ.ಜಿ 1000 ರೂಪಾಯಿ ಹೆಚ್ಚಾಗಿದೆ.

ಚಿನ್ನದ ದರವು ನಿರಂತರವಾಗಿ ಇಳಿಕೆ ಆದರೆ ಕೈಗೆಟುಕುವ ದರದಲ್ಲಿ ಸಿಗಲಿದೆ. ಮುಂದಿನ ದಿನಗಳಲ್ಲಿ 80,000ಕ್ಕೂ ಇಳಿಕೆ ಆದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ. ಅಮೆರಿಕಾ ಸುಂಕ ನೀತಿ ಹಾಗೂ ಇತರ ಕಾರಣಗಳಿಂದಾಗಿ ಚಿನ್ನದ ಬೆಲೆ ಹೆಚ್ಚಾಗಿತ್ತು. ಈಗೀಗ ಕೊಂಚ ಇಳಿಕೆ ಆಗಿದೆ.

ನಗರವಾರು 22 ಕ್ಯಾರಟ್ ಚಿನ್ನದ 10 ಗ್ರಾಂ ದರಪಟ್ಟಿ

ದೆಹಲಿ: 89,600 ರೂಪಾಯಿ

ಮುಂಬೈ: 89,450 ರೂಪಾಯಿ

ಚೆನ್ನೈ: 89,450 ರೂಪಾಯಿ

ಅಹ್ಮದಾಬಾದ್: 89,500 ರೂಪಾಯಿ

ಜೈಪುರ್: 89,600 ರೂಪಾಯಿ

ಪಾಟ್ನಾ: 88,777 ರೂಪಾಯಿ

ನಾಸಿಕ್ : 88,426 ರೂಪಾಯಿ

ಲಕ್ನೋ: 89,600 ರೂಪಾಯಿ

ಭುವನೇಶ್ವರ್: 89,450 ರೂಪಾಯಿ

ಕೋಲ್ಕತಾ: 89,450 ರೂಪಾಯಿ

ಕೇರಳ: 89,450 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+