Gold Price: ಚಿನ್ನದ ಬೆಲೆ 11,400 ರೂಪಾಯಿ ಭಾರಿ ಏರಿಕೆ, ಈಗ ಎಷ್ಟಿದೆ ಬೆಲೆ?

ಚಿನ್ನದ ಬೆಲೆ ಕುಸಿದು ಬೀಳುತ್ತೆ... ಚಿನ್ನದ ಬೆಲೆ ಕುಸಿದು ಬೀಳುತ್ತೆ... ಅಂತಾ ಕಾಯುತ್ತಿದ್ದ ಜನರಿಗೆ ಈಗ ಚಿನ್ನದ ಬೆಲೆ ಭಾರಿ ದೊಡ್ಡ ಮಟ್ಟದಲ್ಲಿ ಏರಿಕೆ ಕಂಡಿರುವುದು ಆಘಾತ ನೀಡಿದೆ. ಯಲ್ಲೋ ಮೆಟಲ್ ಅಂತಾ ಕೂಡ ಕರೆಯಲಾಗುವ ಬಂಗಾರದ ಬೆಲೆ ಈ ಮಟ್ಟಿಗೆ ಏರಿಕೆ ಕಾಣ್ತಾ ಇರೋದು ಭಾರಿ ಆಘಾತವನ್ನೇ ಈಗ ನೀಡುತ್ತಿದೆ. ಹೀಗಿದ್ದಾಗಲೇ, ಚಿನ್ನದ ಬೆಲೆ 11,400 ರೂಪಾಯಿ ಭಾರಿ ಏರಿಕೆ, ಈಗ ಎಷ್ಟಿದೆ ಬೆಲೆ?

ಆಧುನಿಕ ಕಾಲಘಟ್ಟದಲ್ಲಿ ಚಿನ್ನ ಎಷ್ಟು ಮುಖ್ಯ ಎಂದರೆ, ಚಿನ್ನವು ಇಲ್ಲದೆ ಏನೂ ನಡೆಯಲ್ಲ ಎನ್ನಬಹುದು. ಯಾಕಂದ್ರೆ ಚಿನ್ನ ಆಭರಣವಾಗಿ ಮಾತ್ರವಲ್ಲ ಹಲವು ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಕೂಡ ಬಳಕೆ ಮಾಡಲಾಗುತ್ತೆ. ಮೊಬೈಲ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಗೆ ಕೂಡ ಚಿನ್ನ ಬೇಕೆ ಬೇಕಾಗುತ್ತೆ. ಹೀಗಾಗಿಯೇ, ಚಿನ್ನ ಈಗ ಆಧುನಿಕ ಕಾಲದಲ್ಲಿ ಅತ್ಯವಶ್ಯಕ ವಸ್ತು ಎನಿಸಿಕೊಂಡಿದೆ. ಹೀಗೆಯೇ ಎಲ್ಲಾ ಕಡೆಯಿಂದ ಕೂಡ ಚಿನ್ನಕ್ಕೆ ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಬೆಲೆಯಲ್ಲಿ ಭಾರಿ ಏರಿಕೆ ಕೂಡ ಆಗುತ್ತಿದೆ ಅಂತಾ ತಜ್ಞರು ಹೇಳುತ್ತಿದ್ದಾರೆ. ಇಂತಹ ಸಮಯದಲ್ಲೇ, ಒಂದೇ ದಿನ 11,400 ರೂಪಾಯಿ ಭಾರಿ ಏರಿಕೆ ಕಂಡಿದೆ ಚಿನ್ನ!

Gold Price Is Increased To 98 000 Rupees Suddenly And Explore The Present Rate

ಚಿನ್ನ ಬೆಲೆ 11,400 ರೂಪಾಯಿ ಏರಿಕೆ!

ಭಾರತೀಯರಿಗೆ ಸಾಮಾನ್ಯವಾಗಿ ಚಿನ್ನ ಅಂದ್ರೆ ಪ್ರಾಣ ಅದ್ರಲ್ಲೂ ಆಭರಣ ಮೈಮೇಲೆ ಹಾಕಲು ಭಾರತೀಯರು ತುಂಬಾ ಇಷ್ಟಪಡ್ತಾರೆ. ಹೀಗೆ ಭಾರತೀಯರಲ್ಲಿ ಚಿನ್ನದ ಬಗ್ಗೆ ತುಂಬಾ ಕುತೂಹಲ ಇದೆ. ಇದೆಲ್ಲವನ್ನ ಮೀರಿ ಚಿನ್ನ ಅನ್ನೋದು ಕಷ್ಟದ ಸಮಯ ಬಂದಾಗ ಸಹಾಯಕ್ಕೆ ಬರುವ ಬಂಧು ಅಥವಾ ಸ್ನೇಹಿತ ಇದ್ದಂತೆ ಅಂತಾ ಹೇಳಬಹುದು. ಎಲ್ಲೂ ಹಣ ಹೊಂದಿಸಲು ಆಗದ ಸ್ಥಿತಿ ಬಂದಾಗ, ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡ ಇಟ್ಟು ಅಥವಾ ಚಿನ್ನ ಮಾರಿ ಹಣ ಪಡೆಯಬಹುದು. ಆದರೆ ಇದೇ ಚಿನ್ನದ ಬೆಲೆ ಇದೀಗ ಮುಗಿಲು ಮುಟ್ಟಿ ಬಡವರು & ಮಧ್ಯಮ ವರ್ಗದ ಜನರಲ್ಲಿ ಆತಂಕ ಮೂಡಿಸುತ್ತಿದೆ... ಹಾಗಾದ್ರೆ ಇಂದು ಎಷ್ಟಿದೆ ಚಿನ್ನದ ಬೆಲೆ? ಮುಂದೆ ಓದಿ.

ಬೆಂಗಳೂರಲ್ಲಿ ಇದೀಗ ಚಿನ್ನದ ಬೆಲೆ ಏರಿಕೆ ಕಂಡ ನಂತರ ಬೆಲೆ ಹೀಗಿದೆ... 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನ ಬೆಲೆ ಇದೀಗ ಪ್ರತಿ 100 ಗ್ರಾಂಗೆ 11,400 ರೂಪಾಯಿ ಏರಿಕೆ ಕಾಣುವ ಮೂಲಕ, ಬರೋಬ್ಬರಿ 9,84,000 ರೂಪಾಯಿಗೆ ತಲುಪಿದೆ. ಹಾಗೇ 10 ಗ್ರಾಂ 24 ಕ್ಯಾರೆಟ್ ಶುದ್ಧ ಚಿನ್ನದ ಬೆಲೆ ಬರೋಬ್ಬರಿ 1,140 ರೂಪಾಯಿ ಏರಿಕೆ ಕಾಣುವ ಮೂಲಕ 98,400 ರೂಪಾಯಿ ಪ್ರತಿ 10 ಗ್ರಾಂ ಆಗಿದೆ 24 ಕ್ಯಾರೆಟ್ ಶುದ್ಧ ಚಿನ್ನ. ಅರೆರೆ ಹಾಗಾದ್ರೆ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ & ಬೆಳ್ಳಿ ಬೆಲೆ ಇದೀಗ ಬೆಂಗಳೂರಿನಲ್ಲಿ ಎಷ್ಟಿದೆ...? ಪೂರ್ತಿ ಮಾಹಿತಿ ಇಲ್ಲಿದೆ ಮುಂದೆ ಓದಿ.

ಆಭರಣ ಚಿನ್ನದ ಬೆಲೆ ಈಗ ಇಷ್ಟಿದೆ!

ಬೆಲೆ ಏರಿಕೆ ನಂತರ ಬೆಂಗಳೂರಲ್ಲಿ ಈಗ ಪ್ರತಿ 10 ಗ್ರಾಂ 22 ಕ್ಯಾರಟ್ ಆಭರಣ ಚಿನ್ನ ಬೆಲೆ 90,200 ರೂಪಾಯಿ ಆಗಿದೆ. ಈ ಮೂಲಕ ಆಭರಣ ಚಿನ್ನ ಬೆಲೆ ಕೂಡ ಇನ್ನೇನು 1,00,000 ರೂಪಾಯಿ ತಲುಪುವುದು ಗ್ಯಾರಂಟಿ ಆಗಿದೆ. ಈ ನಡುವೆ ಚಿನ್ನದ ಬೆಲೆಯು ಇಳಿಕೆ ಕಾಣಬಹುದು, ಆಷಾಢ ಮಾಸ ಹಿನ್ನೆಲೆ ಚಿನ್ನ ಖರೀದಿಗೆ ಪ್ಲಾನ್ ಮಾಡಬಹುದು ಅಂತಾ ಆಲೋಚನೆ ಇಟ್ಟುಕೊಂಡಿದ್ದ ಚಿನ್ನ ಪ್ರಿಯರಿಗೆ ಇದೀಗ ಮತ್ತೊಂದು ಶಾಕ್ ಸಿಕ್ಕಂತೆ ಆಗಿದೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯು ಒಂದೇ ದಿನ ಪ್ರತಿ 1 ಕೆಜಿ 2,300 ರೂಪಾಯಿ ಏರಿಕೆ ಕಾಣುವ ಮೂಲಕ 1,10,000 ರೂಪಾಯಿಗೆ ತಲುಪಿದೆ. ಈ ಮೂಲಕ ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯೂ ಭಾರಿ ಏರಿಕೆ ಕಾಣುತ್ತಿದ್ದು, ಯಾವಾಗ ಬೆಲೆ ಇಳಿಕೆ ಕಾಣುತ್ತೆ ಅಂತಾ ಕಾಯಬೇಕಿದೆ...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+