Gold Price: ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಸಾಧ್ಯತೆ! ಕಾರಣವೇನು?
ಜಾಗತಿಕ ಮಾರುಕಟ್ಟೆಯಲ್ಲಿ ಹೂಡಿಕೆ ಎಂದಾಗ ಚಿನ್ನದಷ್ಟು ಭದ್ರತೆ ಬೇರೆ ಯಾವ ಹೂಡಿಕೆ ನೀಡುವುದಿಲ್ಲ. ಅದಕ್ಕೆ ಎಲ್ಲಾ ದೇಶಗಳು ಮೀಸಲು ಚಿನ್ನದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುತ್ತಿವೆ. ಚಿನ್ನ ಎಂದರೆ ಆಪತ್‌ಕಾಲದ ನೆಂಟ ಎನ್ನುವ ಮಾತಿದೆ. ಭಾರತೀಯರಿಗೆ ಚಿನ್ನದ ಜೊತೆ ಅವಿನಾಭಾವ ನಂಟಿದೆ. ಯಾವುದೇ ಶುಭಕಾರ್ಯ ಎಂದರೆ ಅಲ್ಲಿ ಚಿನ್ನದ ಖರೀದಿ ಇದ್ದೇ ಇರುತ್ತದೆ.
ಚಿನ್ನದ ಬೆಲೆ ಇತ್ತೀಚಿನ ದಿನಗಳಲ್ಲಿ ಏರಿಳಿಕೆ ಕಾಣುತ್ತಿದೆ. 100 ಗ್ರಾಂ ಚಿನ್ನದ ಬೆಲೆ ಒಂದೇ ದಿನ 20 ಸಾವಿರ ಕುಸಿತ ಕಂಡ ನಂತರ, ಬಳಿಕ ಸೋಮವಾರ 1500 ರೂಪಾಯಿಗಳ ಅಲ್ಪ ಏರಿಕೆ ಕಂಡಿದೆ.

ಚಿನ್ನದ ಬೆಲೆ ಮುಂದಿನ ದಿನಗಳಲ್ಲಿ ಕುಸಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಜಾಗತಿಕವಾಗಿ ಕೆಲವು ಬೆಳವಣಿಗೆಗಳನ್ನು ಗಮನಿಸಿದಾಗ ಚಿನ್ನದ ಬೆಲೆ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಚಿನ್ನ ಖರೀದಿ ನಿಲ್ಲಿಸಿದ ಚೀನಾ
ಚಿನ್ನದ ಬೆಲೆ ಗಗನಕ್ಕೇರುತ್ತಿದ್ದಂತೆ ಕಳೆದ ಶುಕ್ರವಾರವೇ ಚೀನಾದ ಸೆಂಟ್ರಲ್ ಬ್ಯಾಂಕ್ ಚಿನ್ನದ ಖರೀದಿಯನ್ನು ನಿಲ್ಲಿಸಿತು. ಪೀಪಲ್ಸ್ ಬ್ಯಾಂಕ್ ಆಫ್ ಚೀನಾ ಕೂಡ ಚಿನ್ನ ಖರೀದಿಗೆ ಬ್ರೇಕ್ ಹಾಕಿದ್ದು ಚಿನ್ನದ ಬೆಲೆ ಕುಸಿತಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಯುಎಸ್ ಡಾಲರ್ ದರ ಏರಿಕೆ ಕೂಡ ಚಿನ್ನದ ದರದ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶವಾಗಿದೆ.
ಬುಧವಾರ ಮತ್ತಷ್ಟು ಕುಸಿತ?
ಮಂಗಳವಾರ ಆಭರಣ (22 ಕ್ಯಾರೆಟ್) ಚಿನ್ನದ ಬೆಲೆ ಗ್ರಾಂಗೆ 15 ರೂಪಾಯಿ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 17 ರೂಪಾಯಿ ಏರಿಕೆಯಾಗಿದೆ. ಬುಧವಾರ ಚಿನ್ನದ ಬೆಲೆ ಮತ್ತೆ ಕುಸಿತದ ಹಾದಿಗೆ ಬರುತ್ತಾ ಎನ್ನುವ ನಿರೀಕ್ಷೆ ಆಭರಣ ಪ್ರಿಯರದ್ದಾಗಿದೆ.
ಮಂಗಳವಾರ ಚಿನ್ನದ ಬೆಲೆ ಕೆಜಿಗೆ 150 ರೂಪಾಯಿಗಳ ಅಲ್ಪ ಕುಸಿತ ದಾಖಲಿಸಿದೆ. ಸದ್ಯ ಒಂದು ಕೆಜಿ ಚಿನ್ನದ ಬೆಲೆ ₹ 90,250 ಆಗಿದೆ. ಬುಧವಾರ ಚಿನ್ನದ ಬೆಲೆ 90 ಸಾವಿರದ ಒಳಗೆ ಬರುವ ನಿರೀಕ್ಷೆ ಇದೆ.












Click it and Unblock the Notifications