Gold Rate: ಭಾರೀ ಇಳಿಕೆ ಕಂಡ ಚಿನ್ನದ ದರ: ಅಕ್ಷಯ ತೃತೀಯಕ್ಕೆ ಚಿನ್ನ ಖರೀದಿಸುವವರಿಗೆ ಸಿಹಿ ಸುದ್ದಿ
ಬೆಂಗಳೂರಿನಲ್ಲಿ ಇಂದು ಚಿನ್ನದ ದರದಲ್ಲಿ ಸಲ್ಪ ಇಳಿಕೆ ಕಂಡುಬಂದಿದ್ದು, ಅಕ್ಷಯ ತೃತೀಯದ ಖರೀದಿಗೆ ಸಿದ್ಧತೆ ನಡೆಸುತ್ತಿರುವ ಗ್ರಾಹಕರಿಗೆ ಇದು ತುಸು ನೆಮ್ಮದಿ ತಂದಿದೆ. ಏಪ್ರಿಲ್ 20ರ ಇಂದಿನ ಮಾರುಕಟ್ಟೆ ದರದ ಪ್ರಕಾರ, 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 49 ರೂಪಾಯಿ ಇಳಿಕೆಯಾಗಿ 15,529 ರೂಪಾಯಿ ತಲುಪಿದೆ. ಆಭರಣದ ಹಬ್ಬದ ಹೊತ್ತಲ್ಲೇ ಆಭರಣ ಪ್ರಿಯರಿಗೆ ಚಿನ್ನದ ಬೆಲೆ ಇಳಿಕೆಯ ಶುಭ ಸಮಾಚಾರ ಲಭಿಸಿದೆ.
ಸಾಮಾನ್ಯವಾಗಿ ಅಕ್ಷಯ ತೃತೀಯದ ಸಂದರ್ಭದಲ್ಲಿ ಚಿನ್ನದ ಬೇಡಿಕೆ ಹೆಚ್ಚಾಗುವುದರಿಂದ ಬೆಲೆಯೂ ಏರಿಕೆಯಾಗುವ ಸಾಧ್ಯತೆ ಇರುತ್ತದೆ. ಆದರೆ, ಈ ಬಾರಿ ಹಬ್ಬಕ್ಕೆ ಮುನ್ನವೇ ದರದಲ್ಲಿ ಅಲ್ಪ ಇಳಿಕೆ ಕಂಡುಬಂದಿರುವುದು ಆಭರಣ ಪ್ರಿಯರಿಗೆ ಮತ್ತು ಹೂಡಿಕೆದಾರರಿಗೆ ವರದಾನವಾಗಿ ಪರಿಣಮಿಸಿದೆ. ಜಾಗತಿಕ ಆರ್ಥಿಕ ಬದಲಾವಣೆಗಳು ಮತ್ತು ಸ್ಥಳೀಯ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಈ ಬೆಲೆ ಇಳಿಕೆಯಾಗಿದ್ದು, ನಗರದ ಪ್ರಮುಖ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರ ಸಂದಣಿ ಹೆಚ್ಚಾಗುವ ನಿರೀಕ್ಷೆಯಿದೆ.

ಅಕ್ಷಯ ತೃತೀಯದಂದು ಹೊಸ ಆರಂಭ ಮತ್ತು ಸಮೃದ್ಧಿಯ ಸಂಕೇತವಾಗಿ ಚಿನ್ನ ಖರೀದಿಸುವ ಸಂಪ್ರದಾಯ ಇರುವುದರಿಂದ, ಈ ಇಳಿಕೆಯು ವಹಿವಾಟಿಗೆ ಮತ್ತಷ್ಟು ಪುಷ್ಟಿ ನೀಡಲಿದೆ. ಬೆಲೆ ಇಳಿಕೆಯ ಈ ಹಂತದಲ್ಲಿ ಗ್ರಾಹಕರು ಮುಂಗಡ ಬುಕಿಂಗ್ ಸೌಲಭ್ಯವನ್ನು ಬಳಸಿಕೊಳ್ಳಲು ಜ್ಯುವೆಲ್ಲರಿ ಮಳಿಗೆಗಳು ಆಫರ್‌ಗಳನ್ನು ನೀಡುತ್ತಿವೆ. ಈ ಮೂಲಕ ಹಬ್ಬದ ದಿನದಂದು ಉಂಟಾಗುವ ಜನದಟ್ಟಣೆ ಮತ್ತು ಸಂಭಾವ್ಯ ಬೆಲೆ ಏರಿಕೆಯ ಅಪಾಯದಿಂದ ತಪ್ಪಿಸಿಕೊಳ್ಳಲು ಗ್ರಾಹಕರಿಗೆ ಅವಕಾಶ ಕಲ್ಪಿಸಲಾಗಿದೆ.
ಇಂದಿನ ದರ ವಿವರ
ಏಪ್ರಿಲ್ 20ರ ಇಂದಿನ ಮಾರುಕಟ್ಟೆ ದರದ ಪ್ರಕಾರ, 24 ಕ್ಯಾರೆಟ್‌ನ ಒಂದು ಗ್ರಾಂ ಚಿನ್ನದ ಬೆಲೆ 49 ರೂಪಾಯಿ ಇಳಿಕೆಯಾಗಿ 15,529 ರೂಪಾಯಿ ತಲುಪಿದೆ. ಅದೇ ರೀತಿ, ಆಭರಣ ತಯಾರಿಕೆಯಲ್ಲಿ ಹೆಚ್ಚಾಗಿ ಬಳಕೆಯಾಗುವ 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ 45 ರೂಪಾಯಿ ಇಳಿಕೆಯಾಗಿದ್ದು, ಇಂದು 14,235 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಇನ್ನು 18 ಕ್ಯಾರೆಟ್ ಚಿನ್ನದ ದರವು 37 ರೂಪಾಯಿ ಇಳಿಕೆಯೊಂದಿಗೆ 11,647 ರೂಪಾಯಿ ದಾಖಲಾಗಿದೆ.
24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 490 ರೂಪಾಯಿ ಇಳಿಕೆಯಾಗಿ 1,55,290 ರೂಪಾಯಿ ಆಗಿದೆ. ಹಾಗೆಯೇ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 1,42,350 ರೂಪಾಯಿ ಹಾಗೂ 18 ಕ್ಯಾರೆಟ್‌ನ 10 ಗ್ರಾಂಗೆ 1,16,470 ರೂಪಾಯಿ ನಿಗದಿಯಾಗಿದೆ. ಕಳೆದ ಕೆಲವು ದಿನಗಳಿಂದ ಏರಿಕೆ ಕಾಣುತ್ತಿದ್ದ ಹಳದಿ ಲೋಹದ ಬೆಲೆ ಹಬ್ಬದ ಹೊಸ್ತಿಲಲ್ಲೇ ಇಳಿಕೆಯ ಹಾದಿ ಹಿಡಿದಿರುವುದು ಮಧ್ಯಮ ವರ್ಗದ ಗ್ರಾಹಕರಲ್ಲಿ ಸಂತಸ ಮೂಡಿಸಿದೆ.
ಪ್ಲಾಟಿನಂ ಹಾಗೂ ಬೆಳ್ಳಿ ದರ
ನ್ನದ ಬೆಲೆಯ ಬೆನ್ನಲ್ಲೇ ಪ್ಲಾಟಿನಂ ದರದಲ್ಲೂ ಇಳಿಕೆ ಕಂಡುಬಂದಿದ್ದು, ಆಧುನಿಕ ಶೈಲಿಯ ಆಭರಣಗಳನ್ನು ಇಷ್ಟಪಡುವವರಿಗೆ ಇದು ಉತ್ತಮ ಅವಕಾಶವಾಗಿದೆ. ಇಂದು ನಗರದಲ್ಲಿ ಪ್ಲಾಟಿನಂ ಬೆಲೆಯು ಪ್ರತಿ ಗ್ರಾಂಗೆ 28 ರೂಪಾಯಿ ಇಳಿಕೆಯಾಗಿದ್ದು, 6,224 ರೂಪಾಯಿಗಳಿಗೆ ಮಾರಾಟವಾಗುತ್ತಿದೆ. ಹೂಡಿಕೆ ಅಥವಾ ಹೆಚ್ಚಿನ ಪ್ರಮಾಣದ ಆಭರಣ ಖರೀದಿಸುವವರಿಗೆ ಅನುಕೂಲವಾಗುವಂತೆ 10 ಗ್ರಾಂ ಪ್ಲಾಟಿನಂ ದರವು 280 ರೂಪಾಯಿಗಳಷ್ಟು ತಗ್ಗಿ, ಇಂದು 62,240 ರೂಪಾಯಿ ತಲುಪಿದೆ.
ಬೆಳ್ಳಿಯ ದರವು ಇಂದಿನ ಮಾರುಕಟ್ಟೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಏಪ್ರಿಲ್ 20ರ ಇಂದಿನ ದರದಂತೆ, ನಗರದಲ್ಲಿ ಪ್ರತಿ ಗ್ರಾಂ ಬೆಳ್ಳಿಯ ಬೆಲೆ 275 ರೂಪಾಯಿ ದಾಖಲಾಗಿದೆ. ಇನ್ನು ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಖರೀದಿಸುವವರಿಗೆ ಅಥವಾ ಕೈಗಾರಿಕಾ ಉದ್ದೇಶದ ಬಳಕೆದಾರರಿಗೆ ಅನುಕೂಲವಾಗುವಂತೆ ಪ್ರತಿ ಕೆಜಿ ಬೆಳ್ಳಿಯ ದರವು 2,75,000 ರೂಪಾಯಿಗಳಾಗಿವೆ.












Click it and Unblock the Notifications