Gold Price November 9: ಚಿನ್ನದ ಬೆಲೆ ಭರ್ಜರಿ ಕುಸಿತ, ನವೆಂಬರ್ 9 ಎಷ್ಟಿದೆ ಬೆಲೆ...
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ ಮುಂದುವರಿದಿದೆ, ಚಿನ್ನ ಮತ್ತು ಬೆಳ್ಳಿ ಬೆಲೆ ಕಳೆದ ಕೆಲವು ತಿಂಗಳ ಕಾಲ ನಿರಂತರವಾಗಿ ಏರಿಕೆ ಕಂಡಿತ್ತು. ಅದರಲ್ಲೂ ಚಿನ್ನದ ಬೆಲೆ ಏರಿಕೆ ಕಂಡು ಜನರಿಗೆ ಸುಸ್ತಾಗಿತ್ತು. ಬಂಗಾರದ ಬೆಲೆ ಯಾವಾಗ ಕಡಿಮೆ ಆಗುತ್ತೆ? ಎಂಬ ಚಿಂತೆ ಕೂಡ ಕಾಡುತ್ತಾ ಇತ್ತು. ಆದರೆ ಇದೀಗ ಎಲ್ಲದಕ್ಕೂ ಉತ್ತರ ಸಿಕ್ಕಿದ್ದು, ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ ಆಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಚಿನ್ನದ ಬೆಲೆ ಕುಸಿದು ಬೀಳುತ್ತಿದೆ. ಹಾಗಾದ್ರೆ ನವೆಂಬರ್ 9 ಭಾನುವಾರ ಎಷ್ಟಿದೆ ಚಿನ್ನದ ಬೆಲೆ, ಬಂಗಾರ ಬೆಲೆ ಎಷ್ಟು ಕಡಿಮೆ ಆಗಿದೆ?
ಚಿನ್ನ.. ಚಿನ್ನ.. ಚಿನ್ನ.. ಅಂತಾ ಕನಸಲ್ಲೂ ಚಿನ್ನದ ನೆನಪನ್ನು ಮಾಡಿಕೊಳ್ಳುವ ಆಭರಣ ಪ್ರಿಯ ಮಹಿಳೆಯರಿಗೆ ಚಿನ್ನ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡು ಆಘಾತ ನೀಡುತ್ತಿದೆ. ಅದ್ರಲ್ಲೂ ಚಿನ್ನದ ಬೆಲೆ 1 ಲಕ್ಷ ರೂಪಾಯಿ ಗಡಿ ದಾಟಿ ಹೋದ ನಂತರ ಭಾರಿ ಆತಂಕ ಮನೆಮಾಡಿತ್ತು. ಇದನ್ನು ನೋಡಿ ಆಭರಣ ಪ್ರಿಯ ಮಹಿಳೆಯರೂ ಸೇರಿ ಚಿನ್ನ ಖರೀದಿ ಮಾಡಲು ಕಾಯುತ್ತಿದ್ದ ಜನರು ಕಂಗಾಲಾಗಿದ್ದರು. ಆದರೆ ಇಂತಹ ಕಷ್ಟದ ಸಮಯದಲ್ಲಿ ಚಿನ್ನದ ಬೆಲೆ ದಿಢೀರ್ ಕುಸಿತ ಕಂಡಿದೆ. ಹಾಗಾದ್ರೆ ನವೆಂಬರ್ 9 ಭಾನುವಾರ ಎಷ್ಟಿದೆ ಚಿನ್ನದ ಬೆಲೆ, ಬಂಗಾರ ಬೆಲೆ ಎಷ್ಟು ಕಡಿಮೆ ಆಗಿದೆ? ಮುಂದೆ ಓದಿ...

ಚಿನ್ನದ ಬೆಲೆ ಭಾರಿ ಕುಸಿತ!
ಅಷ್ಟಕ್ಕೂ ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಬಂಗಾರ ಬೆಲೆ ಏರಿಕೆಯ ಪರಿಣಾಮ ದೊಡ್ಡ ಚಿಂತೆ ಶುರುವಾಗಿತ್ತು. ಚಿನ್ನ ಬೆಲೆ ಈ ರೀತಿ ಏರಿಕೆ ಕಾಣುತ್ತಾ ಹೋದರೆ ಮುಂದೆ ಏನಪ್ಪಾ? ಎಂಬ ಚಿಂತೆ ಕೂಡ ಆಭರಣ ಪ್ರಿಯರಲ್ಲಿ ಕಾಡುತ್ತಿತ್ತು. ಆದರೆ ಹಿಂಗೆಲ್ಲಾ ಚಿಂತೆ ಮಾಡುತ್ತಿದ್ದ ಚಿನ್ನ ಅಥವಾ ಆಭರಣ ಪ್ರಿಯರಿಗೆ ಈಗ ಭರ್ಜರಿ ಸುದ್ದಿ ಸಿಕ್ಕಿದೆ. ಅಂದಹಾಗೆ, ಸಿಕ್ಕಾಪಟ್ಟೆ ಏರಿಕೆ ಕಾಣುತ್ತಿದ್ದ ಚಿನ್ನದ ಬೆಲೆಗೆ ಈಗ ದಿಢೀರ್ ಕುಸಿತ ಕಾಣುತ್ತಿದೆ. ಬಂಗಾರ ಬೆಲೆ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಇಲ್ಲಿದೆ ಮುಂದೆ ಓದಿ...
ಚಿನ್ನದ ಬೆಲೆ ಇಂದು ಎಷ್ಟಿದೆ?
ಹೌದು, ಚಿನ್ನದ ಬೆಲೆ ದಿಢೀರ್ 5,000 ರೂಪಾಯಿ ಮಹಾ ಕುಸಿತ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 100 ಗ್ರಾಂಗೆ 5,400 ರೂಪಾಯಿ ಮಹಾ ಕುಸಿತ ಕಂಡಿದ್ದು, 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 540 ರೂಪಾಯಿ ಕುಸಿತವಾಗಿದೆ. ಈ ಮೂಲಕ ಇದೀಗ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,22,950 ರೂಪಾಯಿ ಆಗಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 100 ಗ್ರಾಂಗೆ 5,000 ರೂಪಾಯಿ ಕುಸಿತವನ್ನ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 500 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇದೀಗ 1,12,700 ರೂಪಾಯಿಗೆ ತಲುಪಿದೆ. ಹಾಗೇ ಬೆಳ್ಳಿ ಬೆಲೆ ಪ್ರತಿ ಗ್ರಾಂಗೆ 165 ಇದ್ದು, ಚಿನ್ನದ ಬೆಲೆ ಇನ್ನಷ್ಟು ಇಳಿಕೆ ಕಾಣುವ ನಿರೀಕ್ಷೆ ಇದೆ.
ಚಿನ್ನ ಕಡಿಮೆ ಬೆಲೆಗೆ ಸಿಗುವ ದೇಶಗಳು
ಭಾರತದಲ್ಲಿ ಹೋಲಿಕೆ ಮಾಡಿದರೆ ಸ್ವಿಜರ್ಲೆಂಡ್ ದೇಶದಲ್ಲಿ ಚಿನ್ನದ ಬೆಲೆ ಕಡಿಮೆ ಇದ್ದು, ಭಾರತದಲ್ಲಿ ಇರುವ ಬೆಲೆಗಿಂತ ಪ್ರತಿ ಒಂದು ಗ್ರಾಂಗೆ ಸುಮಾರು 800 ರೂಪಾಯಿಗಿಂತ ಕಡಿಮೆ ಬೆಲೆಗೆ ಇಲ್ಲಿ ಚಿನ್ನ ಸಿಗುತ್ತದೆ. ಇಂಡೋನೇಷ್ಯಾ ಕೂಡ ಕಡಿಮೆ ಬೆಲೆಗೆ ಚಿನ್ನ ಕೊಡುತ್ತದೆ, ಸ್ವಿಜರ್ಲೆಂಡ್ ದೇಶಕ್ಕಿಂತ ಸ್ವಲ್ಪ ಕಡಿಮೆ ಬೆಲೆ ಇಲ್ಲಿ ಇರುತ್ತದೆ, ನ್ಯೂಜಿಲೆಂಡ್ ದೇಶದಲ್ಲಿ ಕೂಡ ಚಿನ್ನದ ಬೆಲೆ ಕಡಿಮೆಗೆ ಸಿಗುತ್ತದೆ, ಈ ದೇಶದಲ್ಲಿ ಭಾರತದಲ್ಲಿನ ಬೆಲೆಗೆ ಹೋಲಿಕೆ ಮಾಡಿದರೆ ಸುಮಾರು 900 ರೂಪಾಯಿ ಪ್ರತಿ ಗ್ರಾಂ ಚಿನ್ನದ ಮೇಲೆ ಬೆಲೆ ಕಡಿಮೆ ಆಗಬಹುದು. ರಷ್ಯಾ, ಯುರೋಪ್ & ಇಂಗ್ಲೆಂಡ್ ಸೇರಿದಂತೆ ಜಪಾನ್ ದೇಶದಲ್ಲೂ ಭಾರತಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಸಿಗುತ್ತದೆ.
-
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ












Click it and Unblock the Notifications