Gold Price December 6: ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ, 90,000 ರೂಪಾಯಿಗೆ ಕುಸಿತ ಸಾಧ್ಯತೆ...
ಚಿನ್ನ ಬೆಲೆ ವಿಪರೀತ ಏರಿಕೆ ಕಂಡ ನಂತರ ಒಂದಷ್ಟು ಕುಸಿದು ಬಿದ್ದಿದೆ, ಭಾರತದಲ್ಲಿ ಹಬ್ಬಗಳ ಸಮಯದಲ್ಲಿ ಚಿನ್ನ ಅಂದ್ರೆ ಬಂಗಾರಕ್ಕೆ ಭಾರಿ ಡಿಮ್ಯಾಂಡ್ ಇರುತ್ತದೆ. ಇದೇ ಕಾರಣಕ್ಕೆ ಚಿನ್ನದ ಬೆಲೆ ಕಳೆದ 5 ತಿಂಗಳಲ್ಲಿ ಭಾರಿ ಏರಿಕೆ ಕಂಡಿತ್ತು. ಇದರ ಜೊತೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯುದ್ಧ ಆರಂಭವಾಗಿದ್ದು, ಡಾಲರ್ ಏರುಪೇರು, ಅಮೆರಿಕದ ತೆರಿಗೆ ನೀತಿಗಳ ಪರಿಣಾಮ ಚಿನ್ನ ಬೆಲೆ ಆಕಾಶಕ್ಕೆ ತಲುಪಿತ್ತು. ಹೀಗಾಗಿಯೇ ಜನ ಕೂಡ ಚಿನ್ನ ಖರೀದಿ ಮಾಡಲು ಯೋಚನೆ ಮಾಡುವ ಪರಿಸ್ಥಿತಿ ಬಂದಿತ್ತು. ಇಂತಹ ಸಂದರ್ಭದಲ್ಲೇ, ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ, 90,000 ರೂಪಾಯಿಗೆ ಕುಸಿತ ಸಾಧ್ಯತೆ...
ಹೌದು, ಚಿನ್ನದ ಬೆಲೆ ಯಾವ ಮಟ್ಟಕ್ಕೆ ಏರಿಕೆ ಕಂಡಿತ್ತು ಅಂದ್ರೆ ಬಂಗಾರ ಇನ್ನು ಮುಂದೆ ಬಡ ಮತ್ತು ಮಧ್ಯಮ ವರ್ಗದ ಜನರ ಕೈಗೆ ಸಿಗೋದೆ ಇಲ್ಲವೇನೋ ಎಂಬ ಹಂತಕ್ಕೆ ಚಿನ್ನದ ಬೆಲೆಯು ಏರಿಕೆ ಕಂಡಿತ್ತು. ಚಿನ್ನದ ಬೆಲೆ ಏರಿಕೆ ಕಾರಣಕ್ಕೆ ಎಷ್ಟೋ ಮದುವೆಗಳು ಹಾಗೂ ಶುಭ ಸಮಾರಂಭ ಮುಂದೂಡುವ ಪರಿಸ್ಥಿತಿ ಎದುರಾಗಿತ್ತು. ಆದರೆ ಯಾವಾಗ ಹಬ್ಬಗಳು ಮುಗಿದು ಹೋದವೋ ಆಗ ಚಿನ್ನದ ಬೆಲೆ ಒಂದು ಮಟ್ಟಕ್ಕೆ ಇಳಿಕೆ ಕಂಡಿತ್ತು. ಹೀಗಿದ್ದಾಗಲೇ, ಚಿನ್ನದ ಬೆಲೆ ದಿಢೀರ್ ಭರ್ಜರಿ ಇಳಿಕೆ, 90,000 ರೂಪಾಯಿಗೆ ಕುಸಿತ ಸಾಧ್ಯತೆ...

ಚಿನ್ನದ ಬೆಲೆ 90,000 ರೂಪಾಯಿಗೆ...
ಅಂದಹಾಗೆ ಚಿನ್ನದ ಬೆಲೆ ಏರಿಕೆ ಹಾಗೂ ಇಳಿಕೆ ಮುಖ್ಯವಾಗಿ ಅಂತಾರಾಷ್ಟ್ರೀಯ ಘಟನೆಗಳನ್ನು ಅವಲಂಬಿಸಿರುತ್ತದೆ. ಇದರ ಜೊತೆಗೆ ಭಾರತದಲ್ಲಿ ಚಿನ್ನಕ್ಕೆ ಇರುವ ಡಿಮ್ಯಾಂಡ್ ಕೂಡ ಚಿನ್ನದ ಬೆಲೆ ನಿರ್ಧಾರ ಮಾಡುತ್ತದೆ. ಅದರಲ್ಲೂ ಜಗತ್ತಿನಲ್ಲಿ ದೊಡ್ಡ ದೊಡ್ಡ ಯುದ್ಧಗಳು ಆರಂಭವಾಗಿ ಗಲಾಟೆ ಜೋರಾದರೆ ಚಿನ್ನಕ್ಕೆ ಭಾರಿ ಡಿಮ್ಯಾಂಡ್ ಬರುತ್ತದೆ. ಆದರೆ ಈಗ ಜಗತ್ತು ಶಾಂತವಾಗುತ್ತಾ ಇದ್ದು, ದೊಡ್ಡ ದೊಡ್ಡ ಶ್ರೀಮಂತ ದೇಶಗಳೂ ತಮ್ಮ ಬಳಿ ಇರುವ ಚಿನ್ನ ಮಾರಾಟಕ್ಕೆ ಪ್ಲಾನ್ ಮಾಡುತ್ತಿವೆ. ಈ ಹಿನ್ನೆಲೆ, ಚಿನ್ನದ ಬೆಲೆ 90,000 ರೂಪಾಯಿಗೆ ಕುಸಿತ ಸಾಧ್ಯತೆ ಇದೆ ಎಂದು ಈಗ ಚಿನ್ನ ಮಾರುಕಟ್ಟೆ ತಜ್ಞರು ಅಂದಾಜು ಮಾಡುತ್ತಿದ್ದಾರೆ. ಹಾಗಾದರೆ ಇದೀಗ ಎಷ್ಟಿದೆ ಚಿನ್ನದ ಬೆಲೆ?
ಚಿನ್ನದ ಬೆಲೆಯಲ್ಲಿ ಭಾರಿ ಕುಸಿತ!
ಹೌದು, ಇಂದು ಒಂದೇ ದಿನ ಚಿನ್ನ ಅಥವಾ ಬಂಗಾರದ ಬೆಲೆ ಭಾರಿ ಭರ್ಜರಿ ಕುಸಿತ ಕಂಡಿದ್ದು, ಚಿನ್ನದ ಬೆಲೆ ದಿಢೀರ್ 5,400 ರೂಪಾಯಿ ಕುಸಿತ ಕಂಡಿದೆ. 24 ಕ್ಯಾರೆಟ್ ಶುದ್ಧ ಚಿನ್ನ ಬೆಲೆ ಪ್ರತಿ 100 ಗ್ರಾಂಗೆ 5,400 ರೂಪಾಯಿ ಕುಸಿತ ಕಂಡಿದ್ದು ದಿಢೀರ್ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 540 ರೂಪಾಯಿ ಕುಸಿತ ಕಂಡಿದೆ. ಹೀಗೆ 24 ಕ್ಯಾರೆಟ್ ಶುದ್ಧ ಚಿನ್ನ ಪ್ರತಿ 10 ಗ್ರಾಂಗೆ 1,30,150 ರೂಪಾಯಿ ಆಗಿದೆ. ಹಾಗೇ 22 ಕ್ಯಾರೆಟ್ ಆಭರಣ ಚಿನ್ನ ಪ್ರತಿ 100 ಗ್ರಾಂಗೆ 5,000 ರೂಪಾಯಿ ಕುಸಿತ ಕಂಡಿದ್ದು, 22 ಕ್ಯಾರೆಟ್ ಆಭರಣ ಚಿನ್ನ ಬೆಲೆ ಪ್ರತಿ 10 ಗ್ರಾಂಗೆ 500 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ 22 ಕ್ಯಾರೆಟ್ ಆಭರಣ ಚಿನ್ನದ ಬೆಲೆ ಇದೀಗ 1,19,300 ರೂಪಾಯಿಗೆ ತಲುಪಿದೆ. ಹಾಗೇ ಬೆಳ್ಳಿ ಬೆಲೆ ಪ್ರತಿ ಕೆಜಿಗೆ ಇದೀಗ 1,90,000 ರೂಪಾಯಿಗೆ ತಲುಪಿದೆ...
ಚಿನ್ನದ ಬೆಲೆ 90,000 ರೂಪಾಯಿಗೆ ಇಳಿಕೆ?
ಚಿನ್ನ ಬೆಲೆ ಒಂದೇ ದಿನ ಸಾವಿರ ಸಾವಿರ ಹೆಚ್ಚಾಗುತ್ತಾ 1,40,000 ರೂಪಾಯಿ ಗಡಿಗೆ ಬಂದು ನಿಂತು ಆತಂಕವನ್ನ ಹೆಚ್ಚು ಮಾಡಿತ್ತು. ಇಂತಹ ಭಯ ಸೃಷ್ಟಿಸುವ ಸನ್ನಿವೇಶದಲ್ಲಿ ದಿಢೀರ್ ಅಂತಾ ಖುಷಿ ನೀಡುವ ಸುದ್ದಿ ಹಬ್ಬಿದೆ. ಚಿನ್ನ ಬೆಲೆ ಇಷ್ಟೊಂದು ಜಾಸ್ತಿ ಆಗುತ್ತಿದೆ ಅಂತಾ ಯೋಚನೆ ಮಾಡುವಾಗ ಚಿನ್ನದ ಬೆಲೆ 90,000 ರೂಪಾಯಿ ಆಸುಪಾಸಿಗೆ ದಿಢೀರ್ ಕುಸಿತ ಕಾಣುವ ಸಾಧ್ಯತೆ ಇದೆ ಎಂಬ ಚರ್ಚೆ ಶುರುವಾಗಿದೆ. ಆದ್ರೆ ಚಿನ್ನದ ಬೆಲೆ ಕುಸಿತ ಕಾಣಲು ಮೊದಲು ರಷ್ಯಾ & ಉಕ್ರೇನ್ ಯುದ್ಧ ನಿಲ್ಲಬೇಕಿದೆ ಅಂತಾರೆ ತಜ್ಞರು. ಯಾಕಂದ್ರೆ ಯುದ್ಧಗಳು ಶುರುವಾದಾಗ ಚಿನ್ನಕ್ಕೆ ಹೆಚ್ಚಿನ ಬೆಲೆ ಬರುತ್ತದೆ, ಆದರೆ ಯುದ್ಧ ನಿಂತು ಹೋದರೆ ಚಿನ್ನದ ಬೆಲೆ ಕುಸಿತ ಗ್ಯಾರಂಟಿ ಅನ್ನೋ ವಾದ ಮಂಡಿಸುತ್ತಿದ್ದಾರೆ ತಜ್ಞರು.












Click it and Unblock the Notifications