Gold Collection: ಅಮೆರಿಕದ ಬಳಿ ಇದೆ 8000 ಟನ್ ಚಿನ್ನ: ಇದು ವಿಶ್ವದ ಅತಿಹೆಚ್ಚು ಸಂಗ್ರಹ, ಭಾರತದ ಬಳಿ ಎಷ್ಟಿದೆ
ಚಿನ್ನದ ಬೆಲೆಯು ಈಗ ಗಗನಮುಖಿಯಾಗಿದೆ. ಈ ರೀತಿ ಇರುವಾಗಲೇ ವಿಶ್ವದ ದೊಡ್ಡಣ್ಣ, ಸೂಪರ್ ನೇಷನ್ ಎನ್ನುವ ಅಮೆರಿಕದ ಬಳಿ ಎಷ್ಟಿದೆ ಹಾಗೂ ಭಾರತ ಸೇರಿದಂತೆ ವಿವಿಧ ದೇಶಗಳ ಬಳಿ ಎಷ್ಟಿದೆ ಎನ್ನುವ ವಿಚಾರದ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ವಿವಿಧ ದೇಶಗಳು ತಮ್ಮ ಖಜಾನೆಯಲ್ಲಿ ಟನ್‌ಗಟ್ಟಲೆ ಚಿನ್ನವನ್ನು ಖರೀದಿ ಮಾಡಿಕೊಂಡು ಇರಿಸಿಕೊಂಡಿವೆ. ಸಂಕಷ್ಟದ ಕಾಲದಲ್ಲಿ ನಾವೆಲ್ಲರೂ ಹೇಗೆ ಚಿನ್ನವನ್ನು ಅಡಮಾನ ಇರಿಸುವುದು ಅಥವಾ ಮಾರಾಟ ಮಾಡುತ್ತೇವೋ ಅದೇ ರೀತಿ ದೇಶಗಳು ಸಹ ಆಪತ್ತಿನ ಕಾಲಕ್ಕೆಂದು ಚಿನ್ನವನ್ನು ಖರೀದಿ ಮಾಡಿ ಇರಿಸುತ್ತಿವೆ. ಹಾಗಾದರೆ ಯಾವ ದೇಶದ ಬಳಿ ಎಷ್ಟು ಚಿನ್ನವಿದೆ, ಇಷ್ಟೊಂದು ಚಿನ್ನ ಖರೀದಿ ಮಾಡಿ ಇರಿಸಿಕೊಂಡಿರುವುದಕ್ಕೆ ಕಾರಣವೇನು ಎನ್ನುವುದು ಸೇರಿದಂತೆ ಭಾರತದ ಬಳಿ ಎಷ್ಟು ಚಿನ್ನವಿದೆ ಎನ್ನುವ ವಿವರ ಇಲ್ಲಿದೆ.
ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಒಂದಾಗಿರುವ ಅಮೆರಿಕ ಚಿನ್ನ ಸಂಗ್ರಹದಲ್ಲೂ ಮುಂಚೂಣಿಯಲ್ಲಿದೆ. ಯಾವುದೇ ದೇಶದ ಆರ್ಥಿಕ ಪರಿಸ್ಥಿತಿ ಬಲಿಷ್ಠವಾಗಿದ್ದರೆ ಅದನ್ನು ಶಕ್ತಿಶಾಲಿ ಎಂದು ಪರಿಗಣಿಸಲಾಗುತ್ತದೆ ಮತ್ತು ಇದರಲ್ಲಿ ಚಿನ್ನದ ನಿಕ್ಷೇಪಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ಅಮೆರಿಕವು ವಿಶ್ವದಲ್ಲೇ ಅತಿ ದೊಡ್ಡ ಚಿನ್ನದ ನಿಕ್ಷೇಪವನ್ನು ಹೊಂದಿದೆ. ಈ ನಿಕ್ಷೇಪವು ಕೇವಲ 10 ಅಥವಾ 20 ವರ್ಷಗಳಲ್ಲಿ ನಿರ್ಮಾಣವಾಗಿಲ್ಲ. ಅಮೆರಿಕಾದಲ್ಲಿ ಬರೋಬ್ಬರಿ 8 ಸಾವಿರ ಟನ್‌ಗಳಿಗೂ ಮೀರಿದ ಚಿನ್ನ ಸಂಗ್ರಹವಿದೆ. ಅಪಾರವಾದ ಚಿನ್ನದ ನಿಕ್ಷೇಪಗಳೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಇದರೊಂದಿಗೆ ಅಮೆರಿಕ ನೆರೆಯ ದೇಶಗಳಲ್ಲಿನ ಖನಿಜ ಸಂಪತ್ತು ಹಾಗೂ ಚಿನ್ನದ ನಿಕ್ಷೇಪಗಳ ಮೇಲೂ ಕಣ್ಣಿರಿಸಿದೆ.

ಅಮೆರಿಕಾದ ಬಳಿ ವಿಶ್ವದ ಯಾವುದೇ ರಾಷ್ಟ್ರಗಳ ಬಳಿ ಇಲ್ಲದಷ್ಟು ಚಿನ್ನವಿದೆ. ಪ್ರಸ್ತುತ ಅಮೆರಿಕದ ಬಳಿ ಸರಿಸುಮಾರು 8,100 ಟನ್‌ಗಳಿಗಿಂತ ಹೆಚ್ಚು ಚಿನ್ನ ಸಂಗ್ರಹವಾಗಿದೆ. ಸುಮಾರು 100 ವರ್ಷಗಳಲ್ಲಿ ವಿವಿಧ ಹಂತಗಳಲ್ಲಿ ಈ ಚಿನ್ನವನ್ನು ಸಂಗ್ರಹ ಮಾಡಲಾಗಿದೆ. ಈ ಮೊತ್ತವು ಲಕ್ಷಾಂತರ ಕೋಟಿಗೆ ಸಮಾನವಾಗಿದೆ. 19ನೇ ಶತಮಾನದಲ್ಲಿ ಕ್ಯಾಲಿಫೋರ್ನಿಯಾ ಗೋಲ್ಡ್ ರಶ್ (1848) ನಂತಹ (ಚಿನ್ನಕ್ಕಾಗಿ ಭಾರೀ ಪರಿಶೋಧನೆ)ಗಳು ಅಮೆರಿಕದಲ್ಲಿ ನಡೆದಿವೆ. ಅಮೆರಿಕದ ವಿವಿಧ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಚಿನ್ನವನ್ನು ಹೊರತೆಗೆಯಲಾಯಿತು ಮತ್ತು ಕ್ರಮೇಣ ಸರ್ಕಾರದ ಮೀಸಲು ಪ್ರದೇಶಗಳಿಗೆ ಸೇರಿಸಲಾಯಿತು.
ಇನ್ನು ಎರಡು ಮಹಾಯುದ್ಧಗಳ ಸಮಯದಲ್ಲಿ, ಯುರೋಪ್ ಮತ್ತು ಇತರ ದೇಶಗಳು ಭದ್ರತೆ ಮತ್ತು ಪಾವತಿಗಾಗಿ ಅಮೆರಿಕಕ್ಕೆ ಚಿನ್ನವನ್ನು ಕಳುಹಿಸಿದವು. ಯುದ್ಧದ ಸಮಯದಲ್ಲಿ ದೇಶಗಳಿಗೆ ಶಸ್ತ್ರಾಸ್ತ್ರಗಳು, ಆಹಾರ, ತೈಲ ಮತ್ತು ಇತರ ಅಗತ್ಯ ವಸ್ತುಗಳ ಅಗತ್ಯವಿತ್ತು. ಅನೇಕ ದೇಶಗಳು ಡಾಲರ್ ಅಥವಾ ಚಿನ್ನದಲ್ಲಿ ಪಾವತಿಸಿದವು. ಅಮೆರಿಕ ಈ ವಿಚಾರಗಳಲ್ಲಿ ಸುರಕ್ಷಿತವಾಗಿತ್ತು. ಹೀಗಾಗಿ ಅನೇಕ ದೇಶಗಳು ತಮ್ಮ ಚಿನ್ನದ ನಿಕ್ಷೇಪಗಳನ್ನು ಅಮೆರಿಕದ ಖಜಾನೆಗಳಿಗೆ ವರ್ಗಾಯಿಸಬೇಕಾಯಿತು.
ಭಾರತದ ಬಳಿ ಎಷ್ಟಿದೆ ಚಿನ್ನ ?
ಇನ್ನು ಅಮೆರಿಕ ಅಪಾರ ಚಿನ್ನವನ್ನು ಸಂಗ್ರಹಿಸಿದೆ ನಿಜ. ಆದರೆ, ಈ ವಿಚಾರದಲ್ಲಿ ಭಾರತವೂ ಸಹ ಹಿಂದುಳಿದಿಲ್ಲ. ಭಾರತದ ಬಳಿ ಅಂದಾಜು 880 ಟನ್ ಚಿನ್ನಇದೆ. ವಿಶ್ವದ 8ನೇ ಅತಿ ಹೆಚ್ಚು ಚಿನ್ನ ಹೊಂದಿರುವ ದೇಶ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಿದೆ. ಭಾರತದ ಒಟ್ಟು ವಿದೇಶಿ ವಿನಿಮಯ ಮೀಸಲು (ಡಾಲರ್‌ಗಳು, ಯುರೋಗಳು, ಬಾಂಡ್‌ಗಳು, ಚಿನ್ನ) ಅಂದಾಜು ಶೇ 78 ರಷ್ಟು ಚಿನ್ನವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶಗಳು ಕಾಲಾನಂತರದಲ್ಲಿ ಸ್ವಲ್ಪ ಏರಿಳಿತವಾಗುವ ಸಾಧ್ಯತೆ ಇದೆ.
ಯಾವ ದೇಶದ ಬಳಿ ಎಷ್ಟು ಚಿನ್ನವಿದೆ ?
ದೇಶ | ಚಿನ್ನದ ಪ್ರಮಾಣ ಟನ್‌ಗಳಲ್ಲಿ
ಅಮೆರಿಕ 8,133
ಜರ್ಮನಿ 3,350
ಐಎಂಎಫ್ 2,814
ಇಟಲಿ 2,451
ಫ್ರಾನ್ಸ್ 2,437
ರಷ್ಯಾ 2,326
ಚೀನಾ 2,305
ಸ್ವಿಟ್ಜರ್ಲೆಂಡ್ 1,039
ಭಾರತ 880
ಜಪಾನ್ 846
-
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
ಅಮೆರಿಕ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ ನಾವು ಮುಂಬೈ, ದೆಹಲಿ ಮೇಲೆ ಬಾಂಬ್ ಹಾಕ್ತೀವಿ: ಪಾಕ್ ಮಾಜಿ ರಾಯಭಾರಿ ವಿವಾದಾತ್ಮಕ ಹೇಳಿಕೆ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications