ಹೊಸ ಆಭರಣಗಳನ್ನಾ ಖರೀದಿಸಲು ಯೋಚಿಸುತ್ತಿದ್ದೀರಾ? ಹಾಗಾದ್ರೆ ನಿಮ್ಮ ನಗರದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ನೋಡಿ

ಹೊಸ ಆಭರಣಗಳನ್ನು ಖರೀದಿಸಲು ಅಥವಾ ಹೂಡಿಕೆ ಮಾಡಲು ಯೋಜನೆ ರೂಪಿಸುತ್ತಿರುವಿರಾ? ಹಬ್ಬ-ಹರಿದಿನಗಳು ಹತ್ತಿರವಾಗುತ್ತಿದ್ದಂತೆ ಪ್ರತಿಯೊಬ್ಬರ ಮನಸ್ಸು ಚಿನ್ನ ಕಡೆ ಒಲುವುದು ಸಹಜ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳು ಹಾಗೂ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ವಹಿವಾಟಿನ ಪ್ರಭಾವದಿಂದಾಗಿ ಬೆಲೆಗಳು ಆಗಾಗ ಬದಲಾಗುತ್ತಿರುತ್ತವೆ.

ಇಂದು ಸೆಪ್ಟೆಂಬರ್ 13, 2026ರ ಭಾನುವಾರ ಮಾರುಕಟ್ಟೆಯಲ್ಲಿ ಹಳದಿ ಲೋಹ ಹಾಗೂ ಬೆಳ್ಳಿಯ ವಹಿವಾಟು ಸ್ಥಿರವಾಗಿದ್ದು, ಗ್ರಾಹಕರಿಗೆ ನಿರಾಳತೆ ತಂದಿದೆ. ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಎಷ್ಟಿದೆ ಮತ್ತು ಇತರ ಪ್ರಮುಖ ನಗರಗಳ ಇಂದಿನ ದರಗಳೇನು ಎಂಬ ಸಂಪೂರ್ಣ ವಿವರ ಇಲ್ಲಿದೆ.

Gold and Silver Rate Today on MCX Check 22K amp amp 24K Gold and Silver Prices in Bengaluru on 13 September

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ಮಹತ್ವದ ಬದಲಾವಣೆಗಳಾಗದೆ ಸ್ಥಿರತೆಯನ್ನ ಕಾಯ್ದುಕೊಂಡಿದೆ. ಪ್ರಸ್ತುತ ಸಿಲಿಕಾನ್ ಸಿಟಿಯಲ್ಲಿ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 14,170 ರೂಪಾಯಿಯಷ್ಟಿದೆ. 10 ಗ್ರಾಂಗೆ 1,41,700 ರೂಪಾಯಿಯಾಗಿದೆ.

ಇನ್ನು ಅಪ್ಪಟ 24 ಕ್ಯಾರಟ್ ಅಪರಂಜಿ ಚಿನ್ನದ ದರ ಪ್ರತಿ 1 ಗ್ರಾಂಗೆ 15,458 ರೂಪಾಯಿ ಹಾಗೂ 10 ಗ್ರಾಂಗೆ 1,54,580 ರೂಪಾಯಿಯಷ್ಟಿದೆ. 18 ಕ್ಯಾರಟ್ ಚಿನ್ನದ ಬೆಲೆ ಪ್ರತಿ 1 ಗ್ರಾಂಗೆ 11,594 ರೂಪಾಯಿ ಆಗಿದೆ. ಅದೇ ರೀತಿ ಬೆಳ್ಳಿಯ ದರವನ್ನು ಪರಿಶೀಲಿಸಿದರೆ, ಬೆಂಗಳೂರು ಮಾರುಕಟ್ಟೆಯಲ್ಲಿ 1 ಗ್ರಾಂ ಬೆಳ್ಳಿ ಬೆಲೆ 245 ರೂಪಾಯಿಯಿದ್ದು, 1 ಕೆಜಿ ಬೆಳ್ಳಿಯ ದರ 2,45,000 ರೂಪಾಯಿಯಷ್ಟಿದೆ.

ಶನಿವಾರಕ್ಕೆ (ಸೆಪ್ಟೆಂಬರ್ 12) ಹೋಲಿಸಿದರೆ ಭಾನುವಾರ ಚಿನ್ನ ಮತ್ತು ಬೆಳ್ಳಿ ಎರಡರ ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ. ನಿನ್ನೆ 22 ಕ್ಯಾರಟ್ ಚಿನ್ನದ ಬೆಲೆ ₹15 ಮತ್ತು 24 ಕ್ಯಾರಟ್ ಚಿನ್ನ ₹16 ರಷ್ಟು ಅಲ್ಪ ಏರಿಕೆ ದಾಖಲಿಸಿತ್ತು. ಆದರೆ ಇಂದು ಆ ಏರಿಕೆಯ ಮಟ್ಟದಲ್ಲೇ ದರಗಳು ಸ್ಥಿರವಾಗಿ ಮುಂದುವರಿದಿವೆ.

ಅತ್ತ ಬೆಳ್ಳಿ ದರದಲ್ಲೂ ನಿನ್ನೆ ಯಾವುದೇ ಬದಲಾವಣೆ ಇರಲಿಲ್ಲ, ಇಂದೂ ಕೂಡ ಪ್ರತಿ ಕೆಜಿಗೆ ₹2,45,000 ಮಟ್ಟದಲ್ಲೇ ಮುಂದುವರಿದು ಮಾರುಕಟ್ಟೆಯಲ್ಲಿ ಸಮತೋಲನ ಕಾಯ್ದುಕೊಂಡಿದೆ.

ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಇಂದಿನ ಬೆಲೆ ಪಟ್ಟಿ

ದೇಶದ ಪ್ರಮುಖ ಮಹಾನಗರಗಳಲ್ಲಿ ಇಂದಿನ 22 ಕ್ಯಾರಟ್ ಚಿನ್ನದ (1 ಗ್ರಾಂ) ದರಗಳು ಈ ಕೆಳಗಿನಂತಿವೆ:

* ಬೆಂಗಳೂರು: ₹14,170

* ದೆಹಲಿ: ₹14,185

* ಚೆನ್ನೈ: ₹14,170

* ಮುಂಬೈ: ₹14,170

* ಹೈದರಾಬಾದ್: ₹14,170

* ಅಹಮದಾಬಾದ್: ₹14,175

* ಪುಣೆ: ₹14,170

* ಕೋಲ್ಕತ್ತಾ: ₹14,170

ಭಾನುವಾರ ಸೆಪ್ಟೆಂಬರ್ 13ರಂದು ಮಾರುಕಟ್ಟೆಯಲ್ಲಿ ಬೆಲೆಗಳು ಏರಿಕೆಯಾಗದೆ ಸ್ಥಿರವಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್ ಚಿನ್ನ ₹14,170 (ಪ್ರತಿ ಗ್ರಾಂ) ಮತ್ತು 24 ಕ್ಯಾರಟ್ ಚಿನ್ನ ₹15,458 ರಷ್ಟಿದ್ದರೆ, ಬೆಳ್ಳಿ ಬೆಲೆ ಕೆಜಿಗೆ ₹2,45,000 ರಷ್ಟಿದೆ.

ಗಮನಿಸಿ: ಇಲ್ಲಿ ನೀಡಿರುವ ದರಗಳು ಜಿಎಸ್‌ಟಿ, ಮೇಕಿಂಗ್ ಚಾರ್ಜ್ ಹಾಗೂ ಸ್ಥಳೀಯ ತೆರಿಗೆಗಳನ್ನು ಒಳಗೊಂಡಿರುವುದಿಲ್ಲ. ಆಭರಣ ಮಳಿಗೆಗಳಲ್ಲಿ ಇವುಗಳ ಸೇರ್ಪಡೆಯಿಂದ ಅಂತಿಮ ಬಿಲ್ ವ್ಯತ್ಯಾಸವಾಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+