ವರಮಹಾಲಕ್ಷ್ಮಿ ಹಬ್ಬದಂದೇ ಆಭರಣ ಪ್ರಿಯರಿಗೆ ಶಾಕ್: ಮಾರುಕಟ್ಟೆಯಲ್ಲಿ ಭಾರಿ ಏರಿಕೆ ಕಂಡ ಚಿನ್ನ, ಬೆಳ್ಳಿ ಬೆಲೆ
ಹಬ್ಬಗಳ ಸೀಸನ್ ಬಂತೆಂದರೆ ಸಾಕು, ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಖರೀದಿ ಭರದಿಂದ ಸಾಗುತ್ತದೆ. ವಿಶೇಷವಾಗಿ ವರಮಹಾಲಕ್ಷ್ಮೀ ದಿನವಾದ ಇಂದು ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಲು ಹೆಣ್ಣುಮಕ್ಕಳು ಕಾತರದಿಂದ ಕಾಯುತ್ತಿರುತ್ತಾರೆ. ಶುಭ ಸಂದರ್ಭಗಳಲ್ಲಿ ಬಂಗಾರ ಖರೀದಿಸುವುದು ತುಂಬ ಒಳ್ಳೆಯದು ಎಂಬ ನಂಬಿಕೆ ನಮ್ಮಲ್ಲಿದೆ.
ಆದರೆ, ಈ ಬಾರಿ ಹಬ್ಬದ ಸಂಭ್ರಮದಲ್ಲಿರುವ ಗ್ರಾಹಕರಿಗೆ ಮಾರುಕಟ್ಟೆಯ ಬೆಲೆ ಕೊಂಚ ಬಿಸಿ ಮುಟ್ಟಿಸಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಹಾಗೂ ಎಂಸಿಎಕ್ಸ್ ವಹಿವಾಟಿನಲ್ಲಿ ಕಂಡುಬಂದಿರುವ ಸಕಾರಾತ್ಮಕ ಟ್ರೆಂಡ್‌ನಿಂದಾಗಿ ಇಂದು ಹಳದಿ ಲೋಹದ ಬೆಲೆಯಲ್ಲಿ ಗಣನೀಯ ಏರಿಕೆ ದಾಖಲಾಗಿದೆ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿದೆ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಇಂದು ಮಾರುಕಟ್ಟೆಯಲ್ಲಿ ಹೊಸ ಮೈಲಿಗಲ್ಲು ತಲುಪಿದೆ. ಹೌದು,ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಆಭರಣ ಚಿನ್ನದ ಬೆಲೆ 1 ಗ್ರಾಂಗೆ 14,710 ರೂಪಾಯಿ ಇದೆ. ಅದೇ ರೀತಿ, ಶುದ್ಧ ಚಿನ್ನ ಅಥವಾ 24 ಕ್ಯಾರಟ್ ಚಿನ್ನದ ಬೆಲೆ 1 ಗ್ರಾಂಗೆ 16,048 ರೂಪಾಯಿಗೆ ಏರಿಕೆಯಾಗಿದೆ.
ಬೆಳ್ಳಿಯ ಬೆಲೆಯೂ ಹಿಂದೆ ಬಿದ್ದಿಲ್ಲ ನೋಡಿ, 1 ಗ್ರಾಂ ಬೆಳ್ಳಿಯ ಬೆಲೆ 255 ರೂಪಾಯಿ ಇದ್ದು, ಒಂದು ಕೆಜಿ ಬೆಳ್ಳಿಯ ಬೆಲೆ 2,55,100 ರೂಪಾಯಿಗಳ ಆಸುಪಾಸಿನಲ್ಲಿ ವಹಿವಾಟು ನಡೆಸುತ್ತಿದೆ.
ನಿನ್ನೆಯ ಬೆಲೆಗೆ ಹೋಲಿಸಿದರೆ ಇಂದು ಚಿನ್ನ ಮತ್ತು ಬೆಳ್ಳಿ ಎರಡರ ಬೆಲೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ. ನಿನ್ನೆ ಅಂದರೆ ಆಗಸ್ಟ್ 20ರಂದು ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 14,600 ರೂಪಾಯಿ ಇತ್ತು. ಆದರೆ ಇಂದು 110 ರೂಪಾಯಿ ಏರಿಕೆಯಾಗಿ 14,710 ರೂಪಾಯಿಗೆ ತಲುಪಿದೆ. ಅಂದರೆ 10 ಗ್ರಾಂ ಚಿನ್ನದ ಮೇಲೆ ಬರೋಬ್ಬರಿ 1,100 ರೂಪಾಯಿ ಹೆಚ್ಚಳವಾಗಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಏರಿಕೆ ಕಂಡುಬಂದಿದ್ದು, ನಿನ್ನೆ 1 ಗ್ರಾಂ ಬೆಳ್ಳಿಗೆ 250 ರೂಪಾಯಿ ಇದ್ದ ಬೆಲೆ ಇಂದು 5 ರೂಪಾಯಿ ಹೆಚ್ಚಳ ಕಂಡು 255 ರೂಪಾಯಿಗೆ ಮುಟ್ಟಿದೆ.
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ ಪಟ್ಟಿ
ದೇಶದ ವಿವಿಧ ನಗರಗಳಲ್ಲಿ ಸ್ಥಳೀಯ ತೆರಿಗೆಗಳು ಹಾಗೂ ಬೇಡಿಕೆಗೆ ಅನುಗುಣವಾಗಿ ಚಿನ್ನದ ದರದಲ್ಲಿ ಅಲ್ಪ ವ್ಯತ್ಯಾಸವಿರುತ್ತದೆ. ನಗರವಾರು 22 ಕ್ಯಾರಟ್ 1 ಗ್ರಾಂ ಚಿನ್ನದ ನಿಖರ ಬೆಲೆ ಪಟ್ಟಿ ಹೀಗಿದೆ:
ಬೆಂಗಳೂರು - 14,710 ರೂಪಾಯಿ
ದೆಹಲಿ - 14,725 ರೂಪಾಯಿ
ಚೆನ್ನೈ - 14,710 ರೂಪಾಯಿ
ಮುಂಬೈ - 14,710 ರೂಪಾಯಿ
ಹೈದರಾಬಾದ್ - 14,710 ರೂಪಾಯಿ
ಅಹಮದಾಬಾದ್ - 14,715 ರೂಪಾಯಿ
ಪುಣೆ - 14,710 ರೂಪಾಯಿ
ಕೋಲ್ಕತ್ತಾ - 14,710 ರೂಪಾಯಿ
ಅಮೆರಿಕದ ಡಾಲರ್ ಮೌಲ್ಯದಲ್ಲಿನ ಇಳಿಕೆ, ಕಚ್ಚಾ ತೈಲ ಬೆಲೆಯಲ್ಲಿನ ಏರಿಳಿತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾಗಿ ಚಿನ್ನದತ್ತ ಮುಖ ಮಾಡಿರುವುದು ಇಂದಿನ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ವರಮಹಾಲಕ್ಷ್ಮಿ ಹಬ್ಬದ ಸೀಸನ್ ಆಗಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ.
ಸೂಚನೆ: ಮೇಲಿನ ಬೆಲೆಗಳಲ್ಲಿ ಜಿಎಸ್‌ಟಿ, ಮೇಕಿಂಗ್ ಚಾರ್ಜಸ್ ಸೇರಿರುವುದಿಲ್ಲ. ಆಭರಣ ಖರೀದಿಸುವಾಗ ಅಂತಿಮ ಬಿಲ್‌ನಲ್ಲಿ ಈ ವೆಚ್ಚಗಳು ಸೇರ್ಪಡೆಯಾಗುತ್ತವೆ.


Click it and Unblock the Notifications
