Gold Price on November 19: ವಾರದ ಬಳಿಕ ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಏರಿಕೆ, ಕುಸಿತಕ್ಕೆ ಕಾರಣವೇನು?
Gold Price Today: ವಿದೇಶದಲ್ಲಿನ ಒಂದಷ್ಟು ಬದಲಾವಣೆಗಳ ಕಾರಣದಿಂದಾಗಿ ಭಾರತದ ಮಾರುಕಟ್ಟೆಗಳಲ್ಲಿ ಚಿನ್ನ ಮತ್ತು ಬೆಳ್ಳಿ ಎರಡು ಲೋಹಗಳ ಬೆಲೆ ಇಳಿಕೆ ಆಗಿದೆ. ದಿನದಿಂದ ದಿಕ್ಕೆ ಬೆಲೆ ಹೆಚ್ಚಿಕೊಂಡಿದ್ದ ಚಿನ್ನಾಭರಣಗಳ ದರವು ಕಳೆದ ಒಂದೇ ವಾರದಲ್ಲಿ ನಾಲ್ಕು ಭಾರಿ ಕುಸಿತ ಕಂಡಿದೆ. ಹೆಚ್ಚಳಕ್ಕಿಂತ ತಗ್ಗುವ ಪ್ರಮಾಣದಲ್ಲೂ ಹೆಚ್ಚಾಗಿದ್ದನ್ನು ಇಲ್ಲಿ ಗಮನಿಸಬೇಕಾಗಿದೆ. ಇಂದು ನವೆಂಬರ್ 19ರಂದು ದರ ಕುಗ್ಗಿತಾ, ಹೆಚ್ಚಾಯಿತಾ ಎಂಬ ಪಟ್ಟಿ ಸಹಿತ ಮಾಹಿತಿ ಇಲ್ಲಿದೆ.
ಇಂದು ಬೆಂಗಳೂರು, ಕರ್ನಾಟಕ ಸೇರಿದಂತೆ ದೇಶದ ಅನೇಕ ನಗರಗಳಲ್ಲಿ 24 ಕ್ಯಾರಟ್ ಚಿನ್ನ ಮತ್ತು 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಇಂದು ಭರ್ಜರಿ ಏರಿಕೆ ಆಗಿದೆ. ಬೆಂಗಳೂರಿನಲ್ಲಿ ಇಂದು 10 ಗ್ರಾಂ 22 ಕ್ಯಾರಟ್ ಚಿನ್ನ ಬಂಗಾರದ ದರವು 1100 ರೂಪಾಯಿ ಹೆಚ್ಚಾಗಿದ್ದು 1,14,550 ರೂಪಾಯಿಯಷ್ಟಿದೆ. ಅದೇ ರೀತಿ 24 ಕ್ಯಾರಟ್ ಚಿನ್ನ 10 ಗ್ರಾಂ ದರವು 1200 ರೂಪಾಯಿ ಏರಿಕೆಯೊಂದಿಗೆ 1,24,860 ರೂಪಾಯಿ ಕಂಡಿದೆ.

ಬೆಳ್ಳಿ ದರದಲ್ಲೂ ಇಂದು ಮಹತ್ವ ಏರಿಕೆ ಆಗಿದೆ. 100 ಗ್ರಾಂಗೆ 300 ರೂಪಾಯಿ ಏರಿಕೆ ಆಗಿದ್ದು, 16,500 ರೂಪಾಯಿ ಇದೆ. ಒಂದು ಕೆ.ಜಿ. ಬೆಳ್ಳಿಗೆ 1,65,000 ರೂ.ಗೆ ಹೆಚ್ಚಾಗಿದೆ. ಒಂದು ವಾರದ ಹಿಂದೆ (ನವೆಂಬರ್ 13) kg ಬೆಳ್ಳಿಗೆ 11,000 ರೂಪಾಯಿ ಏರಿಕೆ ಆಗಿತ್ತು. ಅಲ್ಲಿಂದ ನಿಂತರ ಇಳಿಕೆ ಆಗಿದ್ದು, ಇಂದು ಬುಧವಾರ ಮತ್ತೆ 3000 ರೂಪಾಯಿ ಹೆಚ್ಚಾಗಿದೆ.
ಅಮೆರಿಕದಲ್ಲಿನ ಫೆಡರಲ್ ರಿಸರ್ವ್ ಸಂಸ್ಥೆ ತನ್ನ ಬಡ್ಡಿದರವನ್ನು ಇಳಿಕೆ ಮಾಡುವ ನಿರೀಕ್ಷೆ ಇತ್ತು. ಅದರೆ ಆ ನಿರೀಕ್ಷೆ ಸಾಕಾರಗೊಳ್ಳದೆ ಹುಸಿ ಆಯಿತು. ಅಲ್ಲದ ಇತರ ಯಾವ ಸಕಾರಾತ್ಮಕ ಬೆಳವಣಿಗೆಗಳು ಆಗದೇ ಹಿನ್ನೆಲೆಯಲ್ಲಿ ಹೂಡಿಕೆದಾರರು ತಮ್ಮ ನಿರ್ಧಾರದಿಂದ ಹಿಂದೆ ಸರಿದರು. ಇದರಿಂದಾಗಿ ನಿರಂತರವಾಗಿ ಚಿನ್ನ ಮತ್ತು ಬೆಳ್ಳಿ ವಾರಗಳ ಕಾಲ ಕುಸಿತ ಕಂಡಿತ್ತು. ಇಂದು ಮತ್ತೆ ದರ ಹೆಚ್ಚಾಗಿದ್ದು, ಗ್ರಾಹಕರಿಗೆ ಆಘಾತವಾಗಿದೆ. ನಗರವಾರು ಇಂದಿನ ದುಬಾರಿ ಚಿನ್ನ-ಬೆಳ್ಳಿ ದರವೆಷ್ಟಿದೆ.
22 ಕ್ಯಾರೆಟ್ 10 ಗ್ರಾಂ ಚಿನ್ನದ ದರಪಟ್ಟಿ
* ದೆಹಲಿ: 1,13,620 ರೂಪಾಯಿ
* ಮುಂಬೈ: 1,13,480 ರೂಪಾಯಿ
* ಚೆನ್ನೈ: 1,14,964 ರೂಪಾಯಿ
* ಬೆಂಗಳೂರು: 1,14,550 ರೂಪಾಯಿ
* ಹೈದರಾಬಾದ್: 1,15,110 ರೂಪಾಯಿ
* ಕೋಲ್ಕತ್ತಾ: 1,15,226 ರೂಪಾಯಿ
24 ಕ್ಯಾರಟ್ 10 ಗ್ರಾಂ ಚಿನ್ನದ ದರಪಟ್ಟಿ
* ಹೈದರಾಬಾದ್: 1,24,860 ರೂಪಾಯಿ
* ಚೆನ್ನೈ: 1,24,470 ರೂಪಾಯಿ
* ಮುಂಬೈ: 1,23,790 ರೂಪಾಯಿ
* ಬೆಂಗಳೂರು: 1,24,860 ರೂಪಾಯಿ
* ನವದೆಹಲಿ: 1,22,970 ರೂಪಾಯಿ
* ಕೋಲ್ಕತ್ತಾ: 1,24,860 ರೂಪಾಯಿ












Click it and Unblock the Notifications