Gold Price 9th October: ಚಿನ್ನ ಖರೀದಿ ಮಾಡಲು ಇದೇ ಸರಿಯಾದ ಸಮಯ, ಮುಂದೆ ಭಾರಿ ಏರಿಕೆ ಆಗಲಿದೆ ಬಂಗಾರ...

ಚಿನ್ನದ ಬೆಲೆ ಮುಗಿಲು ಮುಟ್ಟುತ್ತಿದೆ, ಚಿನ್ನ ಖರೀದಿ ಇನ್ನಮುಂದೆ ಎಲ್ಲರಿಗೂ ಸಾಧ್ಯವೇ ಇಲ್ಲ ಅಂತಾ ತಜ್ಞರು ಹೇಳುತ್ತಿದ್ದಾರೆ. ಚಿನ್ನದ ಬೆಲೆ ನಿರಂತರ ಏರಿಕೆ ಕಾರಣಕ್ಕೆ ಸಾಕಷ್ಟು ಅಲ್ಲೋಲ ಕಲ್ಲೋಲ ಈಗ ಸೃಷ್ಟಿಯಾಗಿದೆ. ನೋಡ ನೋಡುತ್ತಲೇ ಚಿನ್ನದ ಬೆಲೆ ಇದೀಗ 1,50,000 ರೂಪಾಯಿ ತಲುಪುವುದು ಗ್ಯಾರಂಟಿನಾ? ಎಂಬ ಪ್ರಶ್ನೆ ಮೂಡಿದೆ. ಇಂತಹ ಪರಿಸ್ಥಿತಿಯಲ್ಲಿ... ಚಿನ್ನ ಖರೀದಿ ಮಾಡಲು ಇದೇ ಸರಿಯಾದ ಸಮಯ, ಮುಂದೆ ಭಾರಿ ಏರಿಕೆ ಆಗಲಿದೆ ಬಂಗಾರ...

ಚಿನ್ನ ಖರೀದಿಗೆ ಕಾಯುತ್ತಿದ್ದ ಆಭರಣ ಪ್ರಿಯರಿಗೆ ಆಘಾತವಾಗಿದೆ ಚಿನ್ನ ಇಲ್ಲದೆ ಏನೂ ಮಾಡಲು ಆಗಲ್ಲ ಎಂಬ ಸ್ಥಿತಿ ಜಗತ್ತಿನಾದ್ಯಂತ ನಿರ್ಮಾಣವಾಗಿದೆ. ಯಾಕಂದ್ರೆ ಉತ್ಪಾದನೆ ವಲಯದಿಂದ ಹಿಡಿದು ಹೂಡಿಕೆ ಮಾಡುವವರ ತನಕ ಎಲ್ಲರಿಗೂ ಇಷ್ಟವಾದ ವಸ್ತು ಈ ಚಿನ್ನ. ಆದ್ರೆ ಭಾರತದಲ್ಲಿ ಆಭರಣದ ರೂಪದಲ್ಲಿ ಚಿನ್ನವನ್ನು ಜನ ಇಷ್ಟಪಡುತ್ತಾರೆ. ಇದೇ ಕಾರಣಕ್ಕೆ ಭಾರತ ಪ್ರತಿವರ್ಷ ಕೂಡ ಚಿನ್ನವನ್ನ ಭಾರಿ ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಚಿನ್ನದ ಬೆಲೆ ಈಗ ಎಲ್ಲಾ ದಾಖಲೆ ಮೀರಿ ಏರಿಕೆ ಕಾಣುತ್ತಿದೆ. ಇಂಥ ವಾತಾವರಣದಲ್ಲಿ ಚಿನ್ನ ಖರೀದಿ ಮಾಡಲು ಇದೇ ಸರಿಯಾದ ಸಮಯ?

Gold And Silver Price On 9th October Of 2025

ಚಿನ್ನದ ಬೆಲೆ ಇಂದು ಎಷ್ಟಿದೆ?

ಚಿನ್ನ ಅಂದರೆ ಏನೋ ಹರುಷವು... ಹೀಗೆ, ಆಭರಣ ಪ್ರಿಯರು ಚಿನ್ನದ ವಿಷಯ ಕೇಳಿದರೆ ಸಾಕು, ನಸುನಗೆ ಬೀರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನ ಪ್ರಿಯರಿಗೆ ಆಘಾತವೇ ಎದುರಾಗಿದ್ದು, ಭಾರಿ ಪ್ರಮಾಣದಲ್ಲಿ ಚಿನ್ನದ ಬೆಲೆ ಏರಿಕೆ ಆಗಿದೆ ಅಂತಾ ಚಿಂತೆ ಮಾಡುತ್ತಿದ್ದಾರೆ. ಚಿನ್ನದ ಬೆಲೆಯಲ್ಲಿ ಇಷ್ಟು ಪ್ರಮಾಣದ ಏರಿಕೆ ಸ್ವತಃ ಮಾರುಕಟ್ಟೆ ತಜ್ಞರಿಗೆ ಕೂಡ ಆಘಾತ ನೀಡಿದೆ. ಹೀಗಿದ್ದಾಗ ಚಿನ್ನದ ಬೆಲೆ ಇಳಿಕೆ ಯಾವಾಗ?? ಅಂತಾ ಚಿಂತೆ ಮಾಡುತ್ತಿದ್ದಾರೆ ಜನ. ಹಾಗಾದ್ರೆ ಇವತ್ತು ಚಿನ್ನ ಬೆಲೆ ಏನಾಯ್ತು? ಕರ್ನಾಟಕದಲ್ಲಿ ಎಷ್ಟಿದೆ ಗೋಲ್ಡ್ ರೇಟ್? ಮುಂದೆ ಓದಿ.

ಬಂಗಾರದ ಬೆಲೆ ಮತ್ತೆ ಏರಿಕೆ

ಚಿನ್ನದ ಬೆಲೆಯಲ್ಲಿ ಇಂದು ಮತ್ತೆ ಏರಿಕೆ ಕಂಡುಬಂದಿದ್ದು, ಕನ್ನಡಿಗರ ರಾಜಧಾನಿ ಬೆಂಗಳೂರು ಸೇರಿ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ 22 ಕ್ಯಾರೆಟ್ ಬಂಗಾರ ದರವು 1,13,800 ರೂಪಾಯಿ ತಲುಪಿದ್ದು ಆಭರಣ ಮಾಡಿಸುವವರಿಗೆ ಚಿನ್ನ ಬೆಲೆ ಇಷ್ಟು ಪ್ರಮಾಣದಲ್ಲಿ ಏರಿಕೆ ಕಂಡಿದ್ದು ಚಿಂತೆ ತರಿಸಿದೆ. ಹಾಗೂ 10 ಗ್ರಾಂ 24 ಕ್ಯಾರೆಟ್ ಅಂದ್ರೆ ಶುದ್ಧ ಚಿನ್ನ ಬೆಲೆ 1,24,150 ರೂಪಾಯಿಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಒಂದೇ ದಿನ 220 ರೂಪಾಯಿ ಏರಿಕೆ ಕಂಡಿದೆ ಶುದ್ಧ ಚಿನ್ನದ ಬೆಲೆ. ಮತ್ತೊಂದು ಕಡೆ ಬೆಳ್ಳಿ ಬೆಲೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಬೆಳ್ಳಿಯ ಬೆಲೆ ಇಂದು ಪ್ರತಿ ಕೆಜಿಗೆ 1,000 ರೂಪಾಯಿ ಏರಿಕೆ ಕಾಣುವ ಮೂಲಕ 1,61,000 ರೂಪಾಯಿ ತಲುಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+