• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವೈರಾಣು ಸೋಂಕು ನಿವಾರಕ ಸಾಧನ ಹೊರ ತಂದ ಗೋದ್ರೇಜ್

|
Google Oneindia Kannada News

ಬೆಂಗಳೂರು, ಆಗಸ್ಟ್ 20: ಕೋವಿಡ್-19 ವೈರಸ್‍ನಿಂದ ರಕ್ಷಿಸಿಕೊಳ್ಳಲು ಗ್ರಾಹಕರು ತಮಗೆ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಸಾಂಕ್ರಾಮಿಕದ ಅವಧಿಯಲ್ಲಿ, ಪರಿಸ್ಥಿತಿಗೆ ಅನುಸಾರವಾಗಿ ಈ ಬ್ರ್ಯಾಂಡ್ ಸೂಕ್ತವೆನಿಸಿದ ಭಾರತದಲ್ಲೇ ನಿರ್ಮಿತವಾದ ಗೋದ್ರೇಜ್ ವೈರೋಶೀಲ್ಡ್ 4.0 ಎಂಬ ಉತ್ಪನ್ನವನ್ನು ಭಾರತದ ಗ್ರಾಹಕರಿಗೆ ನೀಡುವ ಮೂಲಕ ಈ ನಿರ್ಣಾಯಕ ಕಾಲಘಟ್ಟದಲ್ಲಿ ಅವರ ನೆರವಿಗೆ ಮುಂದಾಗಿದೆ.

   Hong Kong ನಲ್ಲಿIndian ವಿಮಾನ ಬ್ಯಾನ್ | Oneindia Kannada

   ಇದು ಯುವಿ-ಸಿ ತಂತ್ರಜ್ಞಾನ ಆಧರಿತ ಸಾಧನವಾಗಿದ್ದು, ಕೇವಲ 2-6 ನಿಮಿಷಗಳಲ್ಲಿ ಕೋವಿಡ್-19 ವೈರಾಣುಗಳನ್ನು ಶೇಕಡ 99ರಷ್ಟು ಸೋಂಕುಮುಕ್ತಗೊಳಿಸುತ್ತದೆ. ಇದು 254ಎನ್‍ಎಂ ಯುವಿ ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದು ಕೋವಿಡ್-19 ವೈರಾಣು, ಇತರ ವೈರಾಣು ಹಾಗೂ ಬ್ಯಾಕ್ಟೀರಿಯಾಗಳನ್ನು ತಟಸ್ಥಗೊಳಿಸಲು ಗರಿಷ್ಠ ಪ್ರಯೋಜನದ ತರಂಗಾಂತರವಾಗಿದೆ. ವಿಶ್ವಾಸಾರ್ಹ ಉತ್ಪನ್ನಗಳಿಗಾಗಿ ಹೆಸರಾಗಿರುವ ಬ್ರ್ಯಾಂಡ್‍ನ ವೈರೋಶೀಲ್ಡ್, ಯುವಿಸಿ ನಿರ್ಮೂಲನೆಗಾಗಿ ಐಎಂಸಿಆರ್ ಪ್ರಮಾಣಿತ ಪ್ರಯೋಗಾಲಯದಿಂದ ಪರೀಕ್ಷಿಸಲ್ಪಟ್ಟು ಪ್ರಮಾಣಪತ್ರ ಪಡೆದಿದೆ.

   ಯುವಿ ಸರೌಂಡ್ ತಂತ್ರಜ್ಞಾನವನ್ನು ಹೊಂದಿದ ಗೋದ್ರೇಜ್ ವೈರೋಶೀಲ್ಡ್ 4.0, 4 ಯುವಿ-ಸಿ ಟ್ಯೂಬ್‍ಗಳನ್ನು ಹಾಗೂ ಆರು ಬದಿಯ ಪ್ರತಿಫಲನಾತ್ಮಕ ಒಳಾಂಗಣವನ್ನು ಹೊಂದಿದೆ. ಇದು ಈ ವರ್ಗದಲ್ಲೇ ಮಾರುಕಟ್ಟೆಯಲ್ಲಿರುವ ಗರಿಷ್ಠ ಸಾಮರ್ಥ್ಯದ ಸಾಧನವಾಗಿದ್ದು, 360 ಡಿಗ್ರಿ ಯುವಿಸಿ ಸುರಕ್ಷೆಯನ್ನು ಖಾತರಿಪಡಿಸುತ್ತದೆ.

   ಎಲ್ಲಕ್ಕಿಂತ ಹೆಚ್ಚಾಗಿ ವೈರೋಶೀಲ್ಡ್ ಘನಾಕೃತಿಯ ವಿನ್ಯಾಸ ಯುವಿ-ಸಿ ಕಿರಣಗಳನ್ನು ಏಕಪ್ರಕಾರವಾಗಿ ವಿತರಿಸಲು ಅನುಕೂಲ ಮಾಡಿಕೊಡುತ್ತದೆ. ಇದು ದಿನಸಿ ಪ್ಯಾಕೆಟ್‍ಗಳಿಂದ ಹಿಡಿದು ತರಕಾರಿ, ಮೊಬೈಲ್, ಮಾಸ್ಕ್, ಚಿನ್ನಾಭರಣಗಳು, ಹೆಡ್‍ಫೋನ್, ಕಾರಿನ ಕೀಲಿ, ಮಕ್ಕಳ ಆಟಿಕೆಗಳು, ಕರೆನ್ಸಿ ನೋಟು, ವ್ಯಾಲೆಟ್ ಹಾಗೂ ಕನ್ನಡಕ ಇತ್ಯಾದಿಗಳನ್ನು ಕೂಡಾ ಯೋಗ್ಯವಾಗಿ ಇಡಲು ಅನುವಾಗುವಂತೆ ಇದನ್ನು ರೂಪಿಸಲಾಗಿದೆ.

   ಗೋದ್ರೇಜ್ ವೈರೋಶೀಲ್ಡ್ 4.0 ಶೇಕಡ 1000ರಷ್ಟು ಸೋರಿಕೆ ನಿವಾರಕ ಸಾಧನವಾಗಿದ್ದು ಮಾನವ ಸುರಕ್ಷತೆಯ ಸಾಧನವಾಗಿದೆ. ಇದರ ಸೋರಿಕೆ ನಿರೋಧಕ ಪರಿಣಾಮವನ್ನು ಪರೀಕ್ಷಿಸಿ ಪ್ರಮಾಣಿಸಲಾಗಿದೆ.

   Godrej Forays Into The Health And Hygiene Space Disinfecting Device

   ಗೋದ್ರೇಜ್ ವೈರೋಶೀಲ್ಡ್ ಯುವಿಸಿ ದೀಪಗಳೂ ಸೇರಿದಂತೆ ಎಲ್ಲ ಬಿಡಿಭಾಗಗಳಿಗೆ 1 ವರ್ಷದ ಸಮಗ್ರ ವಾರೆಂಟಿಯನ್ನು ಹೊಂದಿರುತ್ತದೆ ಹಾಗೂ ಗೋದ್ರೇಜ್ ಮಾರಾಟ ನಂತರದ ಸೇವಾ ಖಾತರಿಯನ್ನು ಕೂಡಾ ನೀಡಲಾಗುತ್ತಿದೆ. ಅಚ್ಚ ಬಿಳಿ ಬಣ್ಣ, ವಿಶೇಷತೆಗಳಿಂದ ಸಮೃದ್ಧವಾದ 30 ಲೀಟರ್ ಸಾಮರ್ಥ್ಯದ ಗೋದ್ರೇಜ್ ವೈರೋಶೀಲ್ಡ್ 4.0ಗೆ ಎಲ್ಲ ತೆರಿಗೆಗಳೂ ಸೇರಿದಂತೆ ಆಕರ್ಷಕ 9490 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

   English summary
   Godrej Appliances forays into the health and hygiene space with Godrej VIROSHIELD 4.0, UVC Technology-based disinfecting device delivering 99%+ disinfection against COVID19 and other pathogens.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X