ಕೇಬಲ್ ಟಿವಿ ನೋಡಲು ಹೆಚ್ಚು ಹಣ ಪಾವತಿಸಬೇಕು
ಬೆಂಗಳೂರು, ನ.18 : ಯಾಕೋ ಸ್ಟಾರ್ ಟಿವಿ ಚಾನೆಲ್‌ಗಳು ಬರುತ್ತಿಲ್ಲ ಎಂದು ಬೆಂಗಳೂರಿನ ಜನರು ಎರಡು ದಿನಗಳಿಂದ ದೂರುತ್ತಿದ್ದಾರೆ. ನಗರದ ಬಹುತೇಕ ಭಾಗದಲ್ಲಿ ಸ್ಟಾರ್ ಸ್ಪೋರ್ಟ್ಸ್ ಮತ್ತಿತರ ಚಾನೆಲ್‌ಗಳ ಪ್ರಸಾರ ಸ್ಥಗಿತಗೊಂಡಿದ್ದು, ಈ ಚಾನೆಲ್‌ಗಳನ್ನು ನೋಡಬೇಕಾದರೆ ನೀವು ಹೆಚ್ಚಿನ ಹಣ ಪಾವತಿ ಮಾಡಬೇಕಾಗಿದೆ.
ಹೆಚ್ಚು ಮನರಂಜನಾ ಚಾನೆಲ್‌ಗಳನ್ನು ಹೊಂದಿರುವ ಮತ್ತು ಕ್ರಿಕೆಟ್ ಸೇರಿದಂತೆ ಪ್ರಮುಖ ಕ್ರೀಡೆಗಳನ್ನು ಪ್ರಸಾರ ಮಾಡುವ ಸ್ಟಾರ್ ಗ್ರೂಪ್, ಅ ಲಾ ಕಾರ್ಟೆ ಪದ್ಧತಿ ಜಾರಿಗೊಳಿಸಿರುವುದರಿಂದ ಬೆಂಗಳೂರಿನ ಹಲವು ಭಾಗದಲ್ಲಿ ಸ್ಟಾರ್ ಸ್ಪೋರ್ಟ್ಸ್ ಮುಂತಾದ ಚಾನೆಲ್ ಪ್ರಸಾರ ಸ್ಥಗಿತಗೊಂಡಿದೆ.

ಇಷ್ಟು ದಿನ ಸ್ಟಾರ್ ಗ್ರೂಪ್ ಕೇಬಲ್ ಆಪರೇಟರ್‌ಗಳಿಗೆ ಚಾನೆಲ್‌ಗಳನ್ನು ನೀಡುತ್ತಿತ್ತು. ಅದನ್ನು ಅವರು ಗ್ರಾಹಕರಿಗೆ ನೀಡಿ ಹಣ ಪಡೆಯುತ್ತಿದ್ದರು. ಸದ್ಯ ಗ್ರೂಪ್ ನೇರವಾಗಿ ಚಾನೆಲ್‌ಗಳನ್ನು ಗ್ರಾಹಕರಿಗೆ ನೀಡಲು ಮುಂದಾಗಿದೆ. ಆದ್ದರಿಂದ ನೀವು ಸ್ಟಾರ್ ಗ್ರೂಪ್‌ನ ಯಾವುದೇ ಚಾನೆಲ್ ಪಡೆಯಬೇಕು ಎಂದರೆ ಹೆಚ್ಚಿನ ಹಣ ಪಾವತಿ ಮಾಡಬೇಕು.
ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಭವಿಷ್ಯದಲ್ಲಿ ಎಲ್ಲಾ ಚಾನೆಲ್‌ಗಳನ್ನು ಅ ಲಾ ಕಾರ್ಟೆ ಮಾದರಿಯಲ್ಲಿಯೇ ಗ್ರಾಹಕರಿಗೆ ನೀಡಲು ಮುಂದಾಗಿದೆ. ಇದರ ಅನ್ವಯ ಗ್ರಾಹಕರು ತಮಗೆ ಬೇಕಾದ ಚಾನೆಲ್‌ಗಳಿಗೆ ಮಾತ್ರ ಹಣ ಪಾವತಿ ಮಾಡಬಹುದಾಗಿದೆ. [ಕೇಬಲ್ ನಲ್ಲಿ 21 ಡಿಡಿ ಚಾನೆಲ್ ಪ್ರಸಾರ ಕಡ್ಡಾಯ]
ಅತ್ತ ಸ್ಟಾರ್ ಗ್ರೂಪ್ ಅ ಲಾ ಕಾರ್ಟೆ ಜಾರಿಗೆ ತರಲು ಹೊರಟಿರುವುದರಿಂದ ದರ ಪಟ್ಟಿ ಅಂತಿಮಗೊಳಿಸುವ ಬಗ್ಗೆಯೂ ಮಲ್ಟಿ ಸಿಸ್ಟಂ ಆಪರೇಟರ್ (ಎಂಎಸ್‌ಒ) ಹಾಗೂ ಕೇಬಲ್ ಆಪರೇಟರ್‌ಗಳ ನಡುವೆ ಮಾತುಕತೆ ಆರಂಭವಾಗಿದೆ. ಜನವರಿಯಲ್ಲಿ ನೂತನ ದರಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದ್ದು, ದರ ಹೆಚ್ಚು ಕಡಿಮೆಯಾಗಬಹುದಾಗಿದೆ.
ಏನಿದು ಅ ಲಾ ಕಾರ್ಟೆ : ಆಯ್ದ ಚಾನೆಲ್‌ಗಳ ಸೇವೆಯನ್ನು ಗ್ರಾಹಕರಿಗೆ ನೀಡುವ ವ್ಯವಸ್ಥೆಯನ್ನು ಅ ಲಾ ಕಾರ್ಟೆ ಎನ್ನುತ್ತಾರೆ. ಇದರ ಅನ್ವಯ ಒಬ್ಬ ಬ್ರಾಡ್‌ಕಾಸ್ಟರ್ ತನ್ನ ಬಳಿ ಇರುವ ಚಾನೆಲ್‌ಗಳನ್ನು ಒಂದು ಗುಚ್ಛವನ್ನಾಗಿ ಅಥವಾ ಒಂದೊಂದೇ ಚಾನೆಲ್‌ಗಳನ್ನು ಬಿಡಿ ಬಿಡಿಯಾಗಿ ಗ್ರಾಹಕರಿಗೆ ಒದಗಿಸಲು ಸಾಧ್ಯವಿದೆ.
-
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ












Click it and Unblock the Notifications