ಇನ್ನು, ಅಪ್ಲೈ ಮಾಡಿದ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಸಂಖ್ಯೆ!

Posted By:
Subscribe to Oneindia Kannada
ನವದೆಹಲಿ, ಫೆಬ್ರವರಿ 15: ನಿಮ್ಮ ಸ್ಮಾರ್ಟ್ ಫೋನ್ ನಿಂದಲೇ ಪ್ಯಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿ, ಕೆಲವೇ ನಿಮಿಷಗಳಲ್ಲಿ ಪ್ಯಾನ್ ಸಂಖ್ಯೆ ಪಡೆಯುವಂಥ ವಿಶಿಷ್ಠ ತಂತ್ರಜ್ಞಾನವನ್ನು ಬಹು ಶೀಘ್ರದಲ್ಲೇ ಆದಾಯ ತೆರಿಗೆ ಇಲಾಖೆ ಬಿಡುಗಡೆಗೊಳಿಸಲಿದೆ.

ಹೊಸ ತಂತ್ರಜ್ಞಾನದಲ್ಲಿ ನಿಮಿಷಗಳಲ್ಲಿ ಪ್ಯಾನ್ ಸಂಖ್ಯೆ ಪಡೆಯುವುದಷ್ಟೇ ಅಲ್ಲ, ಅದನ್ನು ಉಪಯೋಗಿಸಿ ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ನಿಮ್ಮ ತೆರಿಗೆ ಪಾವತಿಸುವಂಥ ಸೌಲಭ್ಯ ಸಿಗಲಿದೆ. ಅಲ್ಲದೆ, ಇದರಿಂದ ಹೊಸದಾಗಿ ಉದ್ಯೋಗಗಳಿಗೆ ಸೇರುವ ಯುವ ಜನರಿಗೂ ನೆರವಾಗಲಿದೆ.[ಬಜೆಟ್ 2017: ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ]

Get PAN in a few minutes, app to pay taxes

ಇಂಥದ್ದೊಂದು ಸೌಲಭ್ಯವನ್ನು ಪರಿಚಯಿಸಲಿಕ್ಕಾಗಿಯೇ, ಕೇಂದ್ರ ನೇರ ತೆರಿಗೆಗಳ ಮಂಡಳಿಯು, ಆಧಾರ್ ಕಾರ್ಡ್ ಮಾಹಿತಿಯನ್ನು ಉಪಯೋಗಿಸಿಕೊಂಡು ಪ್ಯಾನ್ ಸಂಖ್ಯೆಯನ್ನು ತ್ವರಿತವಾಗಿ ನೀಡುವಂಥ ಸೌಲಭ್ಯವನ್ನು ನೀಡುವ ಬಗ್ಗೆ ಕೆಲ ದಿನಗಳಿಂದ ಕೆಲಸ ಆರಂಭಿಸಿದೆ. ಅದೀಗ ಪೂರ್ಣಗೊಂಡಿದ್ದು ಕೇಂದ್ರ ಸರ್ಕಾರದ ಒಪ್ಪಿಗೆ ದೊರತ ಕೂಡಲೇ ಜಾರಿಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.[ಫೆಬ್ರವರಿ 28ರಿಂದ ಪ್ರತಿ ಬ್ಯಾಂಕ್ ಖಾತೆಗೂ ಪ್ಯಾನ್ ಕಾರ್ಡ್ ಕಡ್ಡಾಯ]

ಉದಾಹರಣೆಗೆ, ಕೆಲ ತಿಂಗಳುಗಳ ಹಿಂದೆ ಪರಿಚಯವಾದ ಜಿಯೋ ಸಿಮ್ ಕಾರ್ಡುಗಳನ್ನು ಕೊಂಡುಕೊಳ್ಳಲು ವೇಳೆ ಗ್ರಾಹಕರು ನೂರೆಂಟು ದಾಖಲೆಗಳನ್ನು ಜೊತೆಯಲ್ಲಿ ಕೊಂಡೊಯ್ಯುವಂತಿರಲಿಲ್ಲ. ಕೇವಲ ಒಂದು ಆಧಾರ್ ಕಾರ್ಡ್ ಅಥವಾ ಆಧಾರ ಸಂಖ್ಯೆಯನ್ನು ಕೊಂಡೊಯ್ದು ಅದರ ಸಂಖ್ಯೆಯನ್ನು ನೀಡುವ ಮೂಲಕ ಜಿಯೋ ಸಿಮ್ ಪಡೆಯುವಂಥ ಸೌಲಭ್ಯವಿದೆ.[ಐದು ದಿನದ ಕಂದಮ್ಮನಿಗೆ ಲಭಿಸಿದೆ ಪ್ಯಾನ್ ಕಾರ್ಡ್!]

ಇದನ್ನೇ ಉದಾಹರಣೆಯಾಗಿ ನೀಡುವ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು, "ಕೇವಲ ಆಧಾರ್ ಕಾರ್ಡ್ ನಿಂದ ಮೊಬೈಲ್ ಸಿಮ್ ಕಾರ್ಡು ನೀಡಬಹುದಾದರೆ, ಪ್ಯಾನ್ ಕಾರ್ಡ್ ಯಾಕೆ ನೀಡಲಾಗುವುದಿಲ್ಲ" ಎಂಬ ಚಿಂತನೆಯೇ ಹೊಸ ತಂತ್ರಜ್ಞಾನಕ್ಕೆ ನಾಂದಿ ಹಾಡಿದೆ ಎಂದು ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
You may soon be able to get a permanent account number in minutes. As part of its drive to make life easy for taxpayers, the Central Board of Direct Taxes is working on issuing PAN on a real-time basis using Aadhaar's e-KYC facility.
Please Wait while comments are loading...