ಮುಂದಿನ ಆರ್ಥಿಕ ವರ್ಷದಲ್ಲಿ ಶೇ. 10.5ರಷ್ಟು ಭಾರತದ ಜಿಡಿಪಿ ಬೆಳವಣಿಗೆ: ಆರ್‌ಬಿಐ

ನವದೆಹಲಿ, ಫೆಬ್ರವರಿ 05: ಭಾರತೀಯ ರಿಸರ್ವ್ ಬ್ಯಾಂಕ್ ಆರ್‌ಬಿಐ ವಿತ್ತೀಯ ನೀತಿಯನ್ನು ಪರಿಷ್ಕರಿಸಿದ್ದು, ರೆಪೋ ಮತ್ತು ರಿವರ್ಸ್ ರೆಪೋ ದರದಲ್ಲಿ ಯಥಾಸ್ಥಿತಿಯನ್ನು ಕಾಪಾಡಿಕೊಂಡಿದೆ. ಇದರ ಜೊತೆಗೆ ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು ಶೇಕಡಾ 10.5ರಷ್ಟು ಎಂದು ಅಂದಾಜಿಸಿದೆ.

ಇತ್ತೀಚೆಗೆ ಕೇಂದ್ರ ಬಜೆಟ್ ಮಂಡನೆಯಾದ ನಂತರ ವಿತ್ತೀಯ ದರ ನಿಗದಿ ಮಾಡುವ ತಂಡ ಇಂದು ಸಭೆ ಸೇರಿ ದೇಶದ ಜಿಡಿಪಿ ಬೆಳವಣಿಗೆಯ ದರವನ್ನು ಶೇಕಡಾ 14.5ರಷ್ಟು ಮತ್ತು ವಿತ್ತೀಯ ಕೊರತೆಯನ್ನು ಶೇಕಡಾ 6.8ರಷ್ಟು ಸೂಚಿಸಿದೆ. ಮುಂದಿನ ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ ಆರಂಭವಾಗಲಿದೆ.

2021 ರ ಮಾರ್ಚ್ 31 ರವರೆಗೆ ವಾರ್ಷಿಕ ಹಣದುಬ್ಬರವನ್ನು ಶೇಕಡ 4 ರಂತೆ ಕಾಯ್ದುಕೊಳ್ಳಲು ವಿತ್ತೀಯ ನೀತಿ ಸಮಿತಿಗೆ ಆದೇಶ ನೀಡಲಾಗಿದೆ. ಸಿಪಿಐ ಹಣದುಬ್ಬರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 5.2 ರಷ್ಟು ನಿರೀಕ್ಷಿಸಲಾಗಿದೆ. ಇದೇ ವೇಳೆಯಲ್ಲಿ 2021-22ರ ಆರ್ಥಿಕ ವರ್ಷದಲ್ಲಿ ಜಿಡಿಪಿ ಬೆಳವಣಿಗೆಯನ್ನು 10.5% ಎಂದು ಅಂದಾಜಿಸಲಾಗಿದೆ.

GDP Growth Projected At 10.5% In FY22: RBI

2020 ವರ್ಷವು ನಮ್ಮ ಸಾಮರ್ಥ್ಯ ಮತ್ತು ಸಹಿಷ್ಣುತೆಯನ್ನು ಪರೀಕ್ಷಿಸಿದರೆ, 2021 ನಮ್ಮ ಇತಿಹಾಸದ ಹಾದಿಯಲ್ಲಿ ಹೊಸ ಆರ್ಥಿಕ ಯುಗಕ್ಕೆ ವೇದಿಕೆ ಕಲ್ಪಿಸುತ್ತಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಭರವಸೆ ವ್ಯಕ್ತಪಡಿಸಿದರು.

ಇನ್ನು ಗ್ರಾಹಕರ ವಿಶ್ವಾಸವು ಪುನರುಜ್ಜೀವನಗೊಳ್ಳುತ್ತಿದೆ ಮತ್ತು ಉತ್ಪಾದನೆ, ಸೇವೆಗಳು ಮತ್ತು ಮೂಲಸೌಕರ್ಯಗಳ ವ್ಯಾಪಾರ ನಿರೀಕ್ಷೆಗಳು ಲವಲವಿಕೆಯಿಂದ ನಡೆಯುತ್ತಿದೆ. ಸರಕು ಮತ್ತು ಜನರ ಚಲನೆ ಮತ್ತು ದೇಶೀಯ ವ್ಯಾಪಾರ ಚಟುವಟಿಕೆಗಳು ವೇಗದಲ್ಲಿ ಬೆಳೆಯುತ್ತಿವೆ ಎಂದು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+