ಸುಳ್ಳಾದ ನಿರೀಕ್ಷೆ! ಭಾರತದ ಜಿಡಿಪಿ ದರ ವರ್ಷದಿಂದ ವರ್ಷಕ್ಕೆ ಕುಸಿತ

ನವದೆಹಲಿ, ಮೇ 31: 2018-19ನೇ ಸಾಲಿನ ಆರ್ಥಿಕ ಪ್ರಗತಿ ದರ ಶೇ 7.2ರಷ್ಟಾಗಲಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಘೋಷಿಸಿತ್ತು. ಆದರೆ, ಕಳೆದ ಆರ್ಥಿಕ ವರ್ಷದಲ್ಲಿ ಜಿಡಿಪಿ ದರ 7.2% ರಿಂದ 6.8% ಕೇಂದ್ರ ಸಾಂಖ್ಯಿಕ ಕಚೇರಿ(ಸಿಎಸ್ಒ) ಮಾಹಿತಿ ನೀಡಿದೆ.

2018-19ರ ನಾಲ್ಕನೇ ತ್ರೈಮಾಸಿಕದಲ್ಲಿ 5.8% ಮಾತ್ರ ಗಳಿಸಲಾಗಿದೆ. ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಪ್ರಗತಿ ಕುಂಠಿತ ಕಂಡಿದೆ. ಜನವರಿ -ಮಾರ್ಚ್ 2018-2019 ತ್ರೈಮಾಸಿಕದಲ್ಲಿ ಜಿಡಿಪಿ ಪ್ರಗತಿ 6%ಗೆ ಕುಸಿದಿತ್ತು.

ಲೋಕಸಭೆ ಚುನಾವಣೆಗೂ ಮುನ್ನ ನಿರುದ್ಯೋಗ ಪ್ರಮಾಣದ ಬಗ್ಗೆ ಬಂದ ವರದಿಗಳನ್ನು ಕಾರ್ಮಿಕ ಇಲಾಖೆ ಒಪ್ಪಿಕೊಂಡಿದೆ. 2017-18ರ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ 6.1%ನಷ್ಟಿತ್ತು. ಇದು ಕಳೆದ 45ವರ್ಷಗಳಲ್ಲೇ ಅಧಿಕ ಪ್ರಮಾಣ ಎಂದು ತಿಳಿಸಿದೆ.

GDP growth for FY 2018-19 falls to 6.8% from 7.2 % in previous year

ಶೇ 7.8 ರಷ್ಟು ನಗರ ಪ್ರದೇಶದ ಯುವ ಜನಾಂಗ, ಶೇ 5.3ರಷ್ಟು ಗ್ರಾಮೀಣ ಭಾಗದವರು ನಿರುದ್ಯೋಗಿಗಳಾಗಿದ್ದಾರೆ.ಶೇ 6.2ರಷ್ಟು ಪುರುಷರು ಹಾಗೂ ಶೇ 5.7ರಷ್ಟು ಮಹಿಳೆಯರು ನಿರುದ್ಯೋಗಿಗಳಾಗಿದ್ದಾರೆ.

ಖಾಸಗಿ ಆರ್ಥಿಕ ತಜ್ಞರ ಪ್ರಕಾರ 2018-19ನೇ ಸಾಲಿಗೆ ಶೇ7ರಷ್ಟಿರಲಿದೆ.ಶೇ 7.4ರಷ್ಟು ನಿರೀಕ್ಷೆಯನ್ನು ಹೊಂದಲಾಗಿತ್ತು. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಬದಲಾವಣೆ, ಮೇಲಿಂದ ಮೇಲೆ ಬಡ್ಡಿ ದರದಲ್ಲಿನ ಏರಿಕೆ, ರಫ್ತು ಬೇಡಿಕೆ ದುರ್ಬಲಗೊಂಡಿದ್ದ ಕಾರಣಕ್ಕೆ ಜಗತ್ತಿನಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗೆ ತಡೆ ಬಿದ್ದಂತಾಗಿತ್ತು.

ಸಾಲದ ಕೊರತೆಯನ್ನು ನೀಗಿಸಲು ರಿಸರ್ವ್ ಬ್ಯಾಂಕ್ ಆಫ್ ಗವರ್ನರ್ ಹಾಗೂ ಅವರ ತಂಡ ಹೆಚ್ಚಿನ ಪ್ರಯತ್ನ ಮಾಡಬೇಕು ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+