ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಿಎಸ್‌ಟಿ ಕಾನೂನುಗಳನ್ನು ಅಪರಾಧ ಮುಕ್ತವಾಗಿಡಲು ಸಿಐಐ ಸಲಹೆ

|
Google Oneindia Kannada News

ನವದೆಹಲಿ, ನವೆಂಬರ್ 21: ಉದ್ಯಮ ಸಂಸ್ಥೆಯಾದ ಭಾರತೀಯ ಕೈಗಾರಿಕಾ ಒಕ್ಕೂಟವು (CII) ಮುಂಬರುವ ಕೇಂದ್ರದ ಬಜೆಟ್‌ಗಾಗಿ ತನ್ನ ಕಾರ್ಯಸೂಚಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿಮೆ ಮಾಡಲು ಹಾಗೂ ಅಪರಾಧ ವರ್ಗವನ್ನು ಜಿಎಸ್‌ಟಿ ಕಾನೂನಿನ ವ್ಯಾಪ್ತಿಯಿಂದ ತೆಗೆದು ಹಾಕಲು ಮತ್ತು ಬಂಡವಾಳ ಲಾಭದ ತೆರಿಗೆಯನ್ನು ಮರುಪರಿಶೀಲಿಸಲು ಒಕ್ಕೂಟವು ಒತ್ತಾಯಿಸಿದೆ.

ಜಿಎಸ್‌ಟಿ ಕಾನೂನುಗಳನ್ನು ಅಪರಾಧ ಮುಕ್ತವಾಗಿಡಲು ಸಿಐಐ ಸಲಹೆ ಕೇಂದ್ರಕ್ಕೆ ನೀಡಿದೆ. ತೆರಿಗೆ ವಂಚನೆಯನ್ನು ತಡೆಯಲು ಸಾಕಷ್ಟು ದಂಡದ ನಿಬಂಧನೆಗಳನ್ನು ಜಿಎಸ್‌ಟಿ ಹೊಂದಿದೆ ಎಂದು ಹೇಳಿದೆ.

ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಚಿಂತನೆ: ತೈಲ ಸಚಿವ ಪೆಟ್ರೋಲ್, ಡೀಸೆಲ್ ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರ ಚಿಂತನೆ: ತೈಲ ಸಚಿವ

'ಕ್ಯಾಪಿಟಲ್ ಗೇನ್ಸ್ ತೆರಿಗೆ ದರಗಳು ಮತ್ತು ಸಂಕೀರ್ಣತೆಗಳು ಮತ್ತು ವೈಪರೀತ್ಯಗಳನ್ನು ತೆಗೆದುಹಾಕಲು ಹಿಡುವಳಿ ಅವಧಿಯನ್ನು ಹೊಸದಾಗಿ ನೋಡುವ ಅವಶ್ಯಕತೆಯಿದೆ' ಎಂದು ಭಾರತೀಯ ಕೈಗಾರಿಕಾ ಒಕ್ಕೂಟದ ಉದ್ಯಮ ಸಂಸ್ಥೆಯ ಅಧ್ಯಕ್ಷ ಸಂಜೀವ್ ಬಜಾಜ್ ಹೇಳಿದ್ದಾರೆ.

Fresh look needed at capital gains tax to remove complexities, inconsistencies: CII President

ಅಪರಾಧ ಸಾಬೀತು ಆದರೆ ಬಂಧನದ ಕ್ರಮಬೇಡ

ಮುಂದಿನ ಹಂತದ ಸುಧಾರಣೆಗಳಲ್ಲಿ ವೈಯಕ್ತಿಕ ಆದಾಯ ತೆರಿಗೆ ದರಗಳನ್ನು ಕಡಿತಗೊಳಿಸುವ ಬಗ್ಗೆಯೂ ಸರ್ಕಾರ ಪರಿಗಣಿಸಬೇಕು. ವ್ಯವಹಾರಗಳಿಗೆ ಫ್ಲಾಟ್ ಟ್ಯಾಕ್ಸ್ ಮುಂದುವರೆಯಬೇಕು ಮತ್ತು ಕಾರ್ಪೊರೇಟ್ ತೆರಿಗೆ ದರವೂ ಪ್ರಸ್ತುತ ಮಟ್ಟದಲ್ಲಿ ಉಳಿಯಬೇಕು ಎಂದು ಸಿಐಐ ಹೇಳಿದೆ. ಮತ್ತೊಂದೆಡೆ, ಸಿವಿಲ್ ಪ್ರಕರಣಗಳಲ್ಲಿ ತೆರಿಗೆ ವ್ಯವಹಾರದಲ್ಲಿನ ಅಪರಾಧ ಸಾಬೀತಾಗುವವರೆಗೆ ಯಾವುದೇ ಬಂಧನ ಅಥವಾ ಬಂಧನದ ಕ್ರಮ ಇರಬಾರದು ಎಂದು ತಿಳಿಸಿದೆ.

2023-24ರ ವೇಳೆಗೆ ವಿತ್ತೀಯ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಆರಕ್ಕೆ ಮತ್ತು 2025-26ರ ವೇಳೆಗೆ ಶೇ.4.5ಕ್ಕೆ ಇಳಿಸಲು ಪ್ರಯತ್ನಿಸಬೇಕು ಎಂದು ಚೇಂಬರ್ ಹೇಳಿದೆ. ಇದಲ್ಲದೆ, ಬಂಡವಾಳ ವೆಚ್ಚವನ್ನು 2023-24ರಲ್ಲಿ ಪ್ರಸ್ತುತ 2.9 ಪ್ರತಿಶತದಿಂದ 3.3-3.4 ಕ್ಕೆ ಹೆಚ್ಚಿಸಬೇಕು ಮತ್ತು 2024-25 ರ ವೇಳೆಗೆ ಅದನ್ನು 3.8-3.9 ಪ್ರತಿಶತಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿರಬೇಕು.

Fresh look needed at capital gains tax to remove complexities, inconsistencies: CII President

ಆರ್ಥಿಕತೆಯ ಬೆಳವಣಿಗೆಯನ್ನು ವೇಗಗೊಳಿಸಲು ಸಾರ್ವಜನಿಕ ವಲಯದ ಹೂಡಿಕೆಯು ಸಾಕಾಗುವುದಿಲ್ಲವಾದ್ದರಿಂದ ಖಾಸಗಿ ವಲಯದ ಹೂಡಿಕೆ ಹೆಚ್ಚಿಸುವ ಅವಶ್ಯಕತೆಯಿದೆ ಎಂದು ಸಿಐಐ ಅಭಿಪ್ರಾಯಪಟ್ಟಿದ್ದಾರೆ.

English summary
CII President Sanjiv Bajaj said that A fresh look is needed at the capital gains tax with respect to its rates and holding period to remove complexities and inconsistencies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X