ಬಾಬಾ ರಾಮ್ ದೇವ್ 'ಪತಂಜಲಿ'ಯಲ್ಲಿ ಫ್ರಾನ್ಸ್ ಕಂಪನಿಯಿಂದ ಭಾರೀ ಹೂಡಿಕೆ

Subscribe to Oneindia Kannada

ನವದೆಹಲಿ, ಜನವರಿ 11: ಬಾಬಾ ರಾಮ್ ದೇವ್ ಒಡೆತನದ ಪತಂಜಲಿ ಆಯುರ್ವೇದ ಕಂಪನಿಯಲ್ಲಿ ಫ್ರಾನ್ಸ್ ಮೂಲದ ಐಷಾರಾಮಿ ಕಂಪನಿಯೊಂದು ಭರ್ಜರಿ ಹೂಡಿಕೆ ಮಾಡಲು ಮುಂದೆ ಬಂದಿದೆ.

ಮೊಯೆಟ್ ಹೆನ್ನೆಸ್ಸಿ-ಲೂಯಿ ವಿಟ್ಟೊನ್ ಗ್ರೂಪ್ ಬರೋಬ್ಬರಿ 500 ಮಿಲಿಯನ್ ಅಮೆರಿಕನ್ ಡಾಲರ್ (ರೂ. 3250 ಕೋಟಿ) ಹೂಡಿಕೆ ಮಾಡಲು ಮುಂದೆ ಬಂದಿದೆ.

ಈ ಮಾಹಿತಿಯನ್ನು ಪತಂಜಲಿ ಕಂಪನಿಯ ವಕ್ತಾರ ಎಸ್.ಕೆ ಗುಪ್ತ ತಿಜರ್ವಾಲಾ ಹಂಚಿಕೊಂಡಿದ್ದಾರೆ. "ನಮ್ಮ ಅಭಿವೃದ್ಧಿಗಾಗಿ ವಿದೇಶಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳುತ್ತೇವೆ. ಅದೇ ರೀತಿ ದೇಶದ ಒಳಿತಿಗಾಗಿ ನಾವು ವಿದೇಶಿ ಹೂಡಿಕೆ ಪಡೆದುಕೊಳ್ಳಲು ಹಿಂಜರಿಯುವುದಿಲ್ಲ. ನಾವು ಇದನ್ನು ನಮ್ಮ ಸ್ವಂತಕ್ಕೆ ಪಡೆದುಕೊಳ್ಳುತ್ತೇವೆ. ಶೇರು ನೀಡುವುದಿಲ್ಲ ಎಂದು ಆಚಾರ್ಯ ಬಾಲಕೃಷ್ಣ (ಪತಂಜಲಿ ಎಂಡಿ) ಹೇಳಿದ್ದಾರೆ," ಎಂಬುದಾಗಿ ಗುಪ್ತಾ ಟ್ವೀಟ್ ಮಾಡಿದ್ದಾರೆ.

French luxury group eyes investing over Rs 3K cr in Patanjali

ನಾಗಪುರ, ಗ್ರೇಟರ್ ನೋಯ್ಡಾ, ಅಸ್ಸಾಂ, ಛತ್ತೀಸ್ ಗಢ, ಆಂಧ್ರ ಪ್ರದೇಶ, ತೆಲಂಗಾಣ, ಹರ್ಯಾಣ ಮತ್ತು ರಾಜಸ್ಥಾನದಲ್ಲಿ ಕಂಪೆನಿಯು ಘಟಕಗಳನ್ನು ಆರಂಭಿಸಲು ಚಿಂತನೆ ನಡೆಸಿದೆ ಒಟ್ಟು 10,100 ಎಕರೆಯಲ್ಲಿ ಔಷಧೀಯ ಗಿಡಗಳನ್ನು ನೆಡುವ ಯೋಜನೆ ಹಾಕಿಕೊಂಡಿದೆ. ಇದಕ್ಕೆ ಸುಮಾರು 5,000 ಕೋಟಿ ಹಣ ಬೇಕು ಎಂದು ಆಚಾರ್ಯ ಬಾಲಕೃಷ್ಣ ಹೇಳಿದ್ದಾರೆ.

ಸಂಕ್ರಾಂತಿ ವಿಶೇಷ ಪುಟ

ಈ ಸಂಬಂಧ ಇದೀಗ ಫ್ರಾನ್ಸ್ ಕಂಪನಿ ರೂ. 3250 ಕೋಟಿ ಹೂಡಿಕೆ ಮಾಡಲು ಮುಂದೆ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
French luxury group LVMH Moet Hennessy – Louis Vuitton, is willing to invest a mammoth 500 million USD (Rs 3250 crore) in Patanjali Ayurveda.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ