ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಾಟಾ ಸಮೂಹ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ಅಪಘಾತದಲ್ಲಿ ಮೃತ

|
Google Oneindia Kannada News

ಮುಂಬೈ, ಸೆ. 4: ಟಾಟಾ ಸನ್ಸ್ ಸಂಸ್ಥೆ ಮಾಜಿ ಚೇರ್ಮನ್ ಸೈರಸ್ ಮಿಸ್ತ್ರಿ ರಸ್ತೆ ಅಪಘಾತದಲ್ಲಿ ಮೃತರಾಗಿದ್ದಾರೆ. ಭಾನುವಾರದಂದು ಸೈರಸ್ ಮಿಸ್ತ್ರಿ ಅವರಿದ್ದ ಕಾರು ರಸ್ತೆ ವಿಭಜಕಕ್ಕೆ ಗುದ್ದಿದ್ದು, ತೀವ್ರವಾಗಿ ಗಾಯಗೊಂಡಿದ್ದ ಮಿಸ್ತ್ರಿ ಮೃತಪಟ್ಟಿದ್ದಾರೆ. ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ಸಮೀಪ ಈ ದುರ್ಘಟನೆ ಸಂಭವಿಸಿದೆ.

''ಮಧ್ಯಾಹ್ನ ಸುಮಾರು 3.15ಕ್ಕೆ ಈ ಅಪಘಾತ ಸಂಭವಿಸಿದ್ದು, ಮಿಸ್ತ್ರಿ ಅವರು ಅಹಮದಾಬಾದಿನಿಂದ ಮುಂಬೈ ಕಡೆಗೆ ಪ್ರಯಾಣಿಸುತ್ತಿದರು. ಸೂರ್ಯ ನದಿಯ ಮೇಲಿನ ಸೇತುವೆ ಬಳಿ ಅಪಘಾತ ಸಂಭವಿಸಿದೆ'' ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಮಿಸ್ತ್ರಿ ಅವರ ಜೊತೆಗೆ ಕಾರು ಚಾಲಕ ಸೇರಿದಂತೆ ಇನ್ನಿಬ್ಬರು ಪ್ರಯಾಣಿಸುತ್ತಿದ್ದರು. ಗಾಯಗೊಂಡ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Former Tata Chairman Cyrus Mistry killed in road accident near Mumbai

2011ರಲ್ಲಿ ಟಾಟಾ ಉತ್ತರಾಧಿಕಾರಿ ಯಾರು ಎನ್ನುವ ಬಹುಕಾಲದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು, 44 ವರ್ಷದ ಸೈರಸ್ ಪಲ್ಲೊಂಜಿ ಮಿಸ್ತ್ರಿ ಅವರನ್ನು ಅಂದಿನ 80 ಶತಕೋಟಿ ಡಾಲರ್ ಮೌಲ್ಯದ ಟಾಟಾ ಸಮೂಹದ ಸಾರಥಿಯನ್ನಾಗಿ ಮಾಡಿದ್ದರು. ಆದರೆ, ಟಾಟಾ ಸನ್ಸ್ ಜೊತೆ ಭಿನ್ನಾಭಿಪ್ರಾಯ ಮೂಡಿದ್ದರಿಂದ 2016ರಲ್ಲಿ ಮಿಸ್ತ್ರಿ ಅವರು ಸಂಸ್ಥೆ ತೊರೆದಿದ್ದರು. ಚೇರ್ಮನ್ ಹುದ್ದೆ ತೊರೆದ ಬೆನ್ನಲ್ಲೇ ನಿರ್ದೇಶಕ ಸ್ಥಾನ ಕೈ ತಪ್ಪಿತ್ತು.

ಆದರೆ, ಟಾಟಾ ಸಂಸ್ಥೆ ಮಿಸ್ತ್ರಿಗೆ ಹೊಸ ಸಂಸ್ಥೆಯಾಗಿರಲಿಲ್ಲ. ಪಲ್ಲೊಂಜಿ ಕುಟುಂಬವು ಟಾಟಾ ಸನ್ಸ್‌ನಲ್ಲಿ 1965ರಿಂದಲೂ ಪಾಲು ಬಂಡವಾಳ ಹೊಂದಿದ್ದರೂ, ಮಿಸ್ತ್ರಿ ತಂದೆ ಪಲ್ಲೊಂಜಿ 1980ರಲ್ಲಷ್ಟೇ ನಿರ್ದೇಶಕ ಮಂಡಳಿಗೆ ಸೇರ್ಪಡೆಯಾಗಿದ್ದರು.

ಪಲ್ಲೊಂಜಿ ನಿರ್ದೇಶಕ ಹುದ್ದೆಯಿಂದ ಕೆಳಗಿಳಿದ 2 ವರ್ಷದ ನಂತರ ಅವರ ಮಗ ಸೈರಸ್ 2006ರಲ್ಲಿ ನಿರ್ದೇಶಕರಾಗಿದ್ದರು.

ನಂತರ ಟಾಟಾ ಸನ್ಸ್‌ನ ಆಡಳಿತ ಮಂಡಳಿಗೆ ನೇಮಕಗೊಂಡಿದ್ದರು. ಸದ್ಯಕ್ಕೆ ಅವರು ಟಾಟಾ ಸನ್ಸ್ ಮತ್ತು ಟಾಟಾ ಎಲ್‌ಎಕ್ಸಿ (ಭಾರತ) ನಿರ್ದೇಶಕರಾದರು. ರತನ್ ಟಾಟಾ ಅವರ ಉತ್ತರಾಧಿಕಾರಿ ಆಯ್ಕೆಗೆ ರಚಿಸಲಾಗಿದ್ದ ಐದು ಮಂದಿ ಸಮಿತಿಯ ಸದಸ್ಯರೂ ಆಗಿದ್ದರು. 1968ರ ಜುಲೈ 4ರಂದು ಜನಿಸಿರುವ ಸೈರಸ್, 1991ರಲ್ಲಿ ಶಪೂರ್ಜಿ ಪಲ್ಲೊಂಜಿ ಸಂಸ್ಥೆಗೆ ನಿರ್ದೇಶಕರಾಗಿ ಸೇರಿಕೊಂಡು ಸಂಸ್ಥೆಯ ವಹಿವಾಟನ್ನು ಗಮನಾರ್ಹವಾಗಿ ವಿಸ್ತರಿಸಿದ್ದರು.

ಟಾಟಾ ಉಪನಾಮ ಹೊಂದದ ಐರಿಷ್ ಪ್ರಜೆ ಮಿಸ್ತ್ರಿ ಅವರು ಕೂಡಾ ಪಾರ್ಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಲಂಡನ್‌ನ ಇಂಪಿರಿಯಲ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್, ಲಂಡನ್‌ನ ಬಿಸಿನೆಸ್ ಸ್ಕೂಲ್‌ನ ಆಡಳಿತ ನಿರ್ವಹಣೆ ಸ್ನಾತಕೋತ್ತರ ಪದವೀಧರಾಗಿದ್ದರು. ಶಪೂರ್ಜಿ ಪಲ್ಲೊಂಜಿ ಸಂಸ್ಥೆ, ಟಾಟಾ ಸನ್ಸ್ ಬೆಳವಣಿಗೆಗೆ ಕಾರಣದ ಪ್ರಮುಖ ಉದ್ಯಮಿ ಎನಿಸಿಕೊಂಡಿದ್ದರು.

English summary
Former Tata Sons chairman Cyrus Mistry was on Sunday killed in a road accident after his car hit a divider in Maharashtra's Palghar district neighbouring Mumbai, a police official said. Mistry was travelling from Ahmedabad to Mumbai in a Mercedes car, he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X