ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೇಟ್ಲಿ ಬಜೆಟ್ 2017 : ತೆರಿಗೆದಾರರ 10 ನಿರೀಕ್ಷೆಗಳು

ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ(ಫೆಬ್ರವರಿ 01) 2017-18ನೇ ಬಜೆಟ್ ಮಂಡಿಸಲಿದ್ದಾರೆ. ಅಪನಗದೀಕರಣ ಜಾರಿಗೊಂಡ ಬಳಿಕ ಗ್ರಾಹಕರು, ಸಂಸ್ಥೆಗಳಿಂದ ನಿರೀಕ್ಷೆ ಹೆಚ್ಚಾಗಿದೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 31: ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಬುಧವಾರ(ಫೆಬ್ರವರಿ 01) 2017-18ನೇ ಬಜೆಟ್ ಮಂಡಿಸಲಿದ್ದಾರೆ. ಅಪನಗದೀಕರಣ ಜಾರಿಗೊಂಡ ಬಳಿಕ ಗ್ರಾಹಕರು, ಸಂಸ್ಥೆಗಳಿಂದ ನಿರೀಕ್ಷೆ ಹೆಚ್ಚಾಗಿದೆ.

ದೇಶ ಭಾರಿ ವಿತ್ತೀಯ ಕೊರತೆ ಅನುಭವಿಸುತ್ತಿರುವುದರಿಂದ ತೆರಿಗೆ ವ್ಯವಸ್ಥೆ ಬದಲಾವಣೆ, ಸರಳೀಕೃತ ಪಾವತಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. [2016: ಕೇಂದ್ರ ಬಜೆಟ್ ಸಂಪೂರ್ಣ ವಿವರ]

FM Arun Jaitley Budget 2017 : Top 10 Expectations from Taxpayers

ಆದಾಯ ತೆರಿಗೆದಾರರಿಗೆ ಆದಾಯ ತೆರಿಗೆ ಮಿತಿ ಹಾಗೂ ನೇರ ತೆರಿಗೆಯಲ್ಲಿ ಕಳೆದ ಬಾರಿ ಯಾವುದೇ ಬದಲಾವಣೆ ಕಂಡು ಬಂದಿರಲಿಲ್ಲ. ಈ ಬಾರಿ ತೆರಿಗೆ ಮಿತಿ ಏರಿಕೆ, ಸೇವಾ ತೆರಿಗೆಯಲ್ಲಿ ಹೆಚ್ಚಳ ನಿರೀಕ್ಷೆಯಿದೆ ಎಂದು ಎಸ್ ಬಿಐನ ಆರ್ಥಿಕ ಸಲಹೆಗಾರ ಸೌಮ್ಯ ಕಾಂತಿ ಘೋಶ್ ಅಭಿಪ್ರಾಯಪಟ್ಟಿದ್ದಾರೆ.[ಜೇಟ್ಲಿ ಮಹತ್ವಾಕಾಂಕ್ಷೆಯ ಕೇಂದ್ರ ಬಜೆಟ್ 2017 : LIVE]

ಜೇಟ್ಲಿ ಬಜೆಟ್ ನ 10 ನಿರೀಕ್ಷೆಗಳು:
* ವೈಯಕ್ತಿಕ ಆದಾಯ ತೆರಿಗೆ ಮಿತಿಯನ್ನು 2,50,000 ರು ನಿಂದ 3,00,000 ರು ಏರಿಕೆ ಮಾಡಬೇಕು.
* ಶೈಕ್ಷಣಿಕ, ಸಾರಿಗೆ, ಇತ್ಯಾದಿ ಭತ್ಯೆಗಳ ಮಿತಿಯಲ್ಲಿ ಹೆಚ್ಚಳಕ್ಕೆ ಬೇಡಿಕೆ.
* 80ಸಿ ಅನ್ವಯ (ಆದಾಯ ತೆರಿಗೆ ಕಾಯ್ದೆ 1961) ಕಡಿತಗೊಳ್ಳುವ ತೆರಿಗೆ ಮಿತಿ ಏರಿಕೆ.

ತೆರಿಗೆ ಪಾವತಿ ಮಿತಿ

ತೆರಿಗೆ ಪಾವತಿ ಮಿತಿ

* 60 ವರ್ಷ ಕೆಳಗಿರುವ ವ್ಯಕ್ತಿಗಳ ತೆರಿಗೆ ಪಾವತಿ ಮಿತಿಯನ್ನು 2.5 ಲಕ್ಷ ರು ನಿಂದ 3 ಲಕ್ಷ ರುಗೆ ಏರಿಕೆ ಮಾಡುವ ಸಾಧ್ಯತೆ.
* ವಾರ್ಷಿಕ ತೆರಿಗೆ ವಿನಾಯತಿ ಮಿತಿಯನ್ನು 5 ಲಕ್ಷ ಕ್ಕೇರಿಸಲು ಚಿಂತನೆ.
* 2014ರ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿಯನ್ನು 2 ಲಕ್ಷ ರು ನಿಂದ 2.5 ಲಕ್ಷ ರುಗೆ ಏರಿಸಲಾಗಿತ್ತು.

ಎಸ್ ಬಿಐ ಹೇಳಿಕೆ

ಎಸ್ ಬಿಐ ಹೇಳಿಕೆ

ತೆರಿಗೆ ದರದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ ಎಂದು ಸರ್ಕಾರಿ ಸ್ವಾಮ್ಯದ ಅತಿದೊಡ್ಡ ಬ್ಯಾಂಕ್ ಎಸ್ ಬಿಐ ಹೇಳಿದೆ. ತೆರಿಗೆ ಪಾವತಿ ಮಿತಿ 3 ಲಕ್ಷ ರುಗೆ ಏರಿಸಿದರೆ. 3 ಲಕ್ಷ ರು ನಿಂಡ 5 ಲಕ್ಷ ರು ತನಕ ಶೇ 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಮಿಕ್ಕಂತೆ ಎಲ್ಲವೂ ಈ ಹಿಂದಿನ ದರದಂತೆ ನಡೆಯಲಿದೆ.

ಶುಭ ಸುದ್ದಿಯನ್ನು ಸರ್ಕಾರ ನೀಡಬಹುದು.

ಶುಭ ಸುದ್ದಿಯನ್ನು ಸರ್ಕಾರ ನೀಡಬಹುದು.

ಗೃಹಸಾಲ ಬಡ್ಡಿದರ ಪಾವತಿ ವಿನಾಯತಿ ಮಿತಿಯನ್ನು ಏರಿಸುವ ನಿರೀಕ್ಷೆಯಿದೆ. ಪ್ರಸ್ತುತ 2 ಲಕ್ಷ ರು ತನಕ ವಿನಾಯತಿ ಇದ್ದು, ಈ ಮಿತಿಯನ್ನು 2.5 ಲಕ್ಷ ರುಗೇ ಏರಿಸುವ ಸಾಧ್ಯತೆಯಿದೆ. ಈ ಮೂಲಕ 75 ಲಕ್ಷಕ್ಕೂ ಅಧಿಕ ಗೃಹಸಾಲ ಪಾವತಿದಾರರಿಗೆ ಶುಭ ಸುದ್ದಿಯನ್ನು ಸರ್ಕಾರ ನೀಡಬಹುದು.

ಉಳಿತಾಯ ಮಾಡುವವರಿಗೆ ಅನುಕೂಲ

ಉಳಿತಾಯ ಮಾಡುವವರಿಗೆ ಅನುಕೂಲ

ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿಎಸ್) ನಲ್ಲಿ 80 ಸಿಸಿಡಿ(1) ಅಡಿಯಲ್ಲಿ ಹೂಡಿಕೆ ಮಾಡಿರುವವರಿಗೆ ಹೆಚ್ಚುವರಿಯಲ್ಲಿ 50,000 ರು ಕಡಿತಕ್ಕೆ ಕಳೆದ ಬಾರಿ ಅನುಮತಿ ನೀಡಲಾಗಿತ್ತು. ಈ ಮಿತಿಯನ್ನು 50 ಸಾವಿರ ರು ನಿಂದ 2.5 ಲಕ್ಷ ರು ಗೇರಿಸಿದರೆ 80 ಸಿ ಹಾಗೂ 80ಸಿಸಿಡಿ ಅಡಿಯಲ್ಲಿ ಉಳಿತಾಯ ಮಾಡುವವರಿಗೆ ಅನುಕೂಲ.

ಸೇವಾ ತೆರಿಗೆ

ಸೇವಾ ತೆರಿಗೆ

ಸರಕು ಸಾಗಣೆ ತೆರಿಗೆ(ಜಿಎಸ್ ಟಿ) ಗೆ ಹೊಂದಿಕೊಂಡಂತೆ ಸೇವಾ ತೆರಿಗೆ ಏರಿಕೆ ನಿರೀಕ್ಷೆ ಇದೆ. ಅದರೆ, ಶೇ 15 ರಿಂದ ಗರಿಷ್ಠ ಶೇ 18ರೊಳಗೆ ತೆರಿಗೆ ಏರಿಕೆ ಕಾಣಬಹುದು. ಪರೋಕ್ಷ ತೆರಿಗೆ (ಅಬಕಾರಿ ಸುಂಕ) ಬಗ್ಗೆ ಹೆಚ್ಚಿನ ಬದಲಾವಣೆ ನಿರೀಕ್ಷೆಯಿಲ್ಲ. ಜುಲೈ 1 ರಂದು ಜಿಎಸ್ ಟಿ ಜಾರಿಗೆ ತರಬೇಕಿದೆ.

ಹೆಚ್ಚುವರಿಯಾಗಿ ತೆರಿಗೆ ಕಡಿತ

ಹೆಚ್ಚುವರಿಯಾಗಿ ತೆರಿಗೆ ಕಡಿತ

ತೆರಿಗೆ ಉಳಿತಾಯ ಬಾಂಡ್ ಗಳನ್ನು ಪುನಃ ಚಾಲ್ತಿಗೆ ತರುವ ಸಾಧ್ಯತೆಯಿದೆ. ಇದರಿಂದ ಹೂಡಿಕೆ ದಾರರು ಹೆಚ್ಚುವರಿಯಾಗಿ ತೆರಿಗೆ ಕಡಿತಗೊಳಿಸಿಕೊಳ್ಳಬಹುದಾಗಿತ್ತು. ಇದರಿಂದ ಬರುವ ಆದಾಯವನ್ನು ಸರ್ಕಾರ ರೈಲ್ವೆ ಹಾಗೂ ಹೆದ್ದಾರಿ ಯೋಜನೆಗೆ ಬಳಸುವ ನಿರೀಕ್ಷೆಯಿದೆ.

ಟಿಡಿಎಸ್ ಮೇಲಿನ ಬ್ಯಾಂಕ್ ಬಡ್ಡಿದರ

ಟಿಡಿಎಸ್ ಮೇಲಿನ ಬ್ಯಾಂಕ್ ಬಡ್ಡಿದರ

tax deducted at source ಟಿಡಿಎಸ್ ಮೇಲಿನ ಬ್ಯಾಂಕ್ ಬಡ್ಡಿದರ ಏರಿಕೆ. ನಿಶ್ಚಿತ ಠೇವಣಿ ಮೇಲೆ 10 ಸಾವಿರ ರು ನಿಂದ 20 ಸಾವಿರ ರುಗೆ ಏರಿಕೆ ಸಾಧ್ಯತೆ. ಈ ಮೂಲಕ ಉಳಿತಾಯಕ್ಕೆ ಆದ್ಯತೆ ನೀಡಬಹುದು.

ಡಿಜಿಟಲ್ ಇಂಡಿಯಾ ಯೋಜನೆ

ಡಿಜಿಟಲ್ ಇಂಡಿಯಾ ಯೋಜನೆ

ಬಜೆಟ್ ನಲ್ಲಿ ಡಿಜಿಟಲ್ ಇಂಡಿಯಾ ಯೋಜನೆಗೆ ಹೆಚ್ಚಿನ ಆದ್ಯತೆ ಸಿಗಲಿದ್ದು, ಕ್ಯಾಶ್ ಲೆಸ್ ವ್ಯವಹಾರ, ಡಿಜಿಟಲ್ ಪೇಮೆಂಟ್ ಗೆ ವಿನಾಯತಿ ಘೋಷಿಸುವ ನಿರೀಕ್ಷೆಯಿದೆ. ಈ ಮೂಲಕ ನಗದು ಬಳಕೆ ಕಡಿಮೆಗೊಳಿಸುವ ಯತ್ನ ಸರ್ಕಾರದ್ದಾಗಿದೆ.

ತೆರಿಗೆಯಲ್ಲಿ ಕಡಿತ

ತೆರಿಗೆಯಲ್ಲಿ ಕಡಿತ

ಈಕ್ವಿಟಿ ಮೇಲೆ ಹೂಡಿಕೆ ಹಾಗೂ ಕಡಿಮೆ ಅವಧಿಯ ವ್ಯವಹಾರಕ್ಕೆ ತೆರಬೇಕಾಗಿರುವ ತೆರಿಗೆಯನ್ನು(ಶೇ15) ಕಡಿತಗೊಳಿಸುವುದು ಅಥವಾ ತೆಗೆದು ಹಾಕುವ ನಿರೀಕ್ಷೆಯಿದೆ.

English summary
The Finance Minister will present the Budget on Wednesday, February 1, and markets and industry also expect him to announce income taax sops to spur consumption in the economy suggeestions by NDTV.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X