ಬಿಗ್ ಡೀಲ್ : ಜಬಾಂಗ್ ಸಂಸ್ಥೆಯನ್ನು ಖರೀದಿಸಿದ ಫ್ಲಿಪ್ ಕಾರ್ಟ್

Posted By:
Subscribe to Oneindia Kannada

ಬೆಂಗಳೂರು, ಜುಲೈ 26: ಆನ್ ಲೈನ್ ಶಾಪಿಂಗ್ ದಿಗ್ಗಜ ಫ್ಲಿಪ್ ಕಾರ್ಟ್ ಸಂಸ್ಥೆ ಅಧೀನದ ಮಿಂಟ್ರಾ.ಕಾಂ ತೆಕ್ಕೆಗೆ ಫ್ಯಾಷನ್ ಶಾಪಿಂಗ್ ತಾಣ ಜಬಾಂಗ್ ಸೇರಿಕೊಂಡಿದೆ. ಸರಿ ಸುಮಾರು 70 ಮಿಲಿಯನ್ ಯುಎಸ್ ಡಾಲರ್ ಮೊತ್ತಕ್ಕೆ ಜಬಾಂಗ್ ಸಂಸ್ಥೆಯನ್ನು ಖರೀದಿಸಿರುವುದಾಗಿ ಮಿಂಟ್ರಾ ಪ್ರಕಟಣೆ ಹೊರಡಿಸಿದೆ.

ಗ್ಲೋಬಲ್ ಫ್ಯಾಷನ್ ಗ್ರೂಪ್ (ಜಿಎಫ್ ಜಿ) ಗೆ ಸೇರಿರುವ ಜಬಾಂಗ್ ವೆಬ್ ತಾಣ ಇನ್ಮುಂದೆ ಫ್ಲಿಪ್ ಕಾರ್ಟ್ ಇ ಕುಟುಂಬ ಸೇರಲಿದೆ. ಜಬಾಂಗ್ ನ ಖರೀದಿ ಮೂಲಕ ಭಾರತದ ಅತಿದೊಡ್ಡ ಫ್ಯಾಷನ್ ವೇದಿಕೆ ಒದಗಿಸುವುದು ನಮ್ಮ ಉದ್ದೇಶ ಎಂದು ಮಿಂಟ್ರಾದ ಸಿಇಒ ಅನಂತ್ ನಾರಾಯಣನ್ ಹೇಳಿದ್ದಾರೆ. [ಭಾರತದ ಅತಿದೊಡ್ಡ ಇ ಕಾಮರ್ಸ್ ಸಂಸ್ಥೆ ಸಿಇಒ ಬದಲು!]

ಮಾರ್ಚ್ 2016ರಂತೆ ಇಬಿಐಟಿಡಿಎ ಕಳೆದುಕೊಂಡು ಜಬಾಂಗ್ ನಿವ್ವಳ ಆದಾಯ 126 ಮಿಲಿಯನ್ ಯುರೋನಷ್ಟಿದೆ. ಈ ಖರೀದಿ ಮೂಲಕ ಮಾರುಕಟ್ಟೆಯಲ್ಲಿ ಶೇ 20 ರಿಂದ 35 ರಷ್ಟು ಮಾರಾಟದಲ್ಲಿ ಏರಿಕೆ ಕಾಣುವ ನಿರೀಕ್ಷೆ ಫ್ಲಿಪ್ ಕಾರ್ಟ್ ಗಿದೆ.[ಫ್ಲಿಪ್ ಕಾರ್ಟ್ ಸಂಸ್ಥೆಗೆ ಹಿನ್ನಡೆ, ಹಿರಿಯ ಅಧಿಕಾರಿ ರಾಜೀನಾಮೆ!]

2012ರಲ್ಲಿ ಜರ್ಮನಿಯ ರಾಕೆಟ್ ಇಂಟರ್ನೆಟ್ ಮೂಲಕ ಆರಂಭವಾದ ಜಬಾಂಗ್ ಮೇಲೆ ಸ್ವೀಡನ್ನಿನ ಸಂಸ್ಥೆ ಕಿನೆವಿಕ್ ಭಾರಿ ಬಂಡವಾಳ ಹೂಡಿತ್ತು. ಗ್ಲೋಬಲ್ ಫ್ಯಾಷನ್ ಗ್ರೂಪ್ ನೀಡಿರುವ ಪ್ರಕಟಣೆ ಪೂರ್ಣ ವಿವರ ಇಲ್ಲಿದೆ

ಗ್ಲೋಬಲ್ ಫ್ಯಾಷನ್ ಗ್ರೂಪ್ ನಿಂದ ಜಬಾಂಗ್ ಹೊರಕ್ಕೆ

ಗ್ಲೋಬಲ್ ಫ್ಯಾಷನ್ ಗ್ರೂಪ್ ನಿಂದ ಜಬಾಂಗ್ ಹೊರಕ್ಕೆ

2014ರಲ್ಲಿ ಜಬಾಂಗ್ ಸೇರಿದಂತೆ ಆರು ಇ ಕಾಮರ್ಸ್ ತಾಣಗಳು ಸೇರಿಕೊಂಡು ಗ್ಲೋಬಲ್ ಫ್ಯಾಷನ್ ಗ್ರೂಪ್ ಸ್ಥಾಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಫ್ಲಿಫ್ ಕಾರ್ಟ್ ತೆಕ್ಕೆಗೆ ಜಬಾಂಗ್ ಬಿದ್ದ ಮೇಲೆ

ಫ್ಲಿಫ್ ಕಾರ್ಟ್ ತೆಕ್ಕೆಗೆ ಜಬಾಂಗ್ ಬಿದ್ದ ಮೇಲೆ

ಫ್ಲಿಫ್ ಕಾರ್ಟ್ ತೆಕ್ಕೆಗೆ ಜಬಾಂಗ್ ಬಿದ್ದ ಮೇಲೆ ಆದಿತ್ಯ ಬಿರ್ಲಾ ಒಡೆತನ ಅಬೊಫ್, ಫ್ಯೂಚರ್ ಗ್ರೂಪ್ ಹಾಗೂ ಸ್ನಾಪ್ ಡೀಲ್ ಫ್ಯಾಷನ್ ತಾಣಗಳಿಗೆ ತಕ್ಕಮಟ್ಟಿನ ಹೊಡೆತ ಬೀಳಲಿದೆ.

ಫ್ಲಿಪ್ ಕಾರ್ಟ್ ಸಹ ಸ್ಥಾಪಕ ಸಚಿನ್ ರಿಂದ ಟ್ವೀಟ್

ಫ್ಲಿಪ್ ಕಾರ್ಟ್ ಸಹ ಸ್ಥಾಪಕ ಸಚಿನ್ ರಿಂದ ಟ್ವೀಟ್

ಫ್ಲಿಪ್ ಕಾರ್ಟ್ ಸಹ ಸ್ಥಾಪಕ ಸಚಿನ್ ಬನ್ಸಾಲ್ ಟ್ವೀಟ್ ಮಾಡಿ, ಫ್ಲಿಪ್ ಕಾರ್ಟ್ ಫ್ಯಾಮಿಲಿಗೆ ಸ್ವಾಗತಿಸಿದ್ದಾರೆ.

ಜಬಾಂಗ್ ಗೆ ಯಾರು ಹೊಸ ಸಿಇಒ

ಜಬಾಂಗ್ ಗೆ ಯಾರು ಹೊಸ ಸಿಇಒ

ಜಬಾಂಗ್ ಸಿಇಒ ಸಂಜೀವ್ ಅವರು ಹುದ್ದೆ ತೊರೆದಿದ್ದಾರೆ. ಮಿಂಟ್ರಾದ ಅನಂತ್ ಅವರೇ ಈಗ ಜಬಾಂಗ್ ಹೊಣೆ ಹೊರಲಿದ್ದಾರೆ.

ಯಾರು ಯಾರನ್ನು ಖರೀದಿಸಿದರು

ಯಾರು ಯಾರನ್ನು ಖರೀದಿಸಿದರು

ಮಿಂಟ್ರಾವನ್ನು ಫ್ಲಿಪ್ ಕಾರ್ಟ್ ಖರೀದಿಸಿತು. ಜಬಾಂಗ್ ತಾಣವನ್ನು ಮಿಂಟ್ರಾ ಖರೀದಿಸಿದೆ. ಈಗ ಜಬಾಂಗ್ ಯಾರನ್ನು ಖರೀದಿಸಲಿದೆ.

ನೀಲ್ ನಿತೀನ್ ಮುಖೇಶ್ ರಂತೆ ಇದೆ

ನೀಲ್ ನಿತೀನ್ ಮುಖೇಶ್ ರಂತೆ ಇದೆ

ನಟ ನೀಲ್ ನಿತೀನ್ ಮುಖೇಶ್ ರ ಹೆಸರಂತೆ ಇದೆ ಫ್ಲಿಫ್ ಕಾರ್ಟ್ ಮಿಂಟ್ರಾ ಜಬಾಂಗ್

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Flipkart's unit Myntra is most likely to acquire rival Jabong as both the companies have signed a definitive agreement for a deal
Please Wait while comments are loading...