ಟಾಪ್ 10 ಮಾರುಕಟ್ಟೆ ಮೌಲ್ಯ: ಇನ್ಫೋಸಿಸ್, ಐಟಿಸಿ ಮೌಲ್ಯ ಜಿಗಿತ
ಬೆಂಗಳೂರು, ಜನವರಿ 13: ಕಳೆದ ವಾರದ ಮಾರುಕಟ್ಟೆಯಲ್ಲಿ ಸಂಸ್ಥೆಗಳ ಮೌಲ್ಯ ಎಷ್ಟಿದೆ?, ಯಾವ ಸಂಸ್ಥೆಗೆ ಹೆಚ್ಚು ಲಾಭವಾಗಿದೆ? ಯಾವ ಸಂಸ್ಥೆಗೆ ನಷ್ಟವಾಗಿದೆ? ವಿವರ ಇಲ್ಲಿದೆ...
ಟಾಪ್ 10 ಹೆಚ್ಚು ಮೌಲ್ಯಯುತ ಸಂಸ್ಥೆಗಳ ಪೈಕಿ ಟಾಪ್ 05 ಮೊತ್ತ 43,689.89 ಕೋಟಿ ರು ಮೀರುತ್ತದೆ. ಈ ಪೈಕಿ ಇನ್ಫೋಸಿಸ್ ಹಾಗೂ ಐಟಿಸಿ ಸಂಸ್ಥೆಗಳು ಹೆಚ್ಚು ಲಾಭಗಳಿಸಿವೆ.
ಕಳೆದ ವಾರದಲ್ಲಿ ಲಾಭ ಗಳಿಸಿದ ಟಾಪ್ 10 ಸಂಸ್ಥೆಗಳ ಪೈಕಿ ಐಟಿಸಿ, ಎಚ್ ಡಿ ಎಫ್ ಸಿ, ಇನ್ಫೋಸಿಸ್, ಎಸ್ ಬಿಐ ಹಾಗೂ ಐಸಿಐಸಿಐ ಬ್ಯಾಂಕ್ ಹೆಚ್ಚು ಗಳಿಕೆ ಕಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ ಐಎಲ್), ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಚ್ ಯುಎಲ್ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಕಳೆದ ವಾರ ಹೆಚ್ಚು ನಷ್ಟ ಅನುಭವಿಸಿವೆ.
* ಐಟಿಸಿ ಮಾರುಕಟ್ಟೆ ಮೌಲ್ಯ 17,941.73 ಕೋಟಿ ರು ನಿಂದ 3.61.773.90 ಕೋಟಿ ರು ಗೇರಿತು. ಇನ್ಫೋಸಿಸ್ 10,026.05 ಕೋಟಿ ರು ನಿಂದ 2,98,684.46 ಕೋಟಿ ಗೇರಿದೆ.
* ಐಸಿಐಸಿಐ ಬ್ಯಾಂಕ್ ಮೌಲ್ಯ 8,378.07 ಕೋಟಿ ರು ನಿಂದ 2,43,822.14 ಕೋಟಿ ರು ಗೇರಿದೆ.
* ಎಸ್ ಬಿಐ ಮೌಲ್ಯ 4,506.92 ಕೋಟಿ ರು ನಿಂದ 2,70,013.40 ಕೋಟಿ ರು.
* ಎಚ್ಡಿಎಫ್ ಸಿ ಮೌಲ್ಯ 2,837.12 ಕೋಟಿ ರು ನಿಂದ 3,41,770.70 ಕೋಟಿ ರು ಗೇರಿದೆ.
ಇಳಿಕೆಯಾದ ಸಂಸ್ಥೆಗಳ ಮಾರುಕಟ್ಟೆ ಮೌಲ್ಯ
* ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮೌಲ್ಯ 12,007.63 ಕೋಟಿ ರು ನಿಂದ 6,91,170.50 ಕೋಟಿ ರುಗೆ ಕುಸಿತ ಕಂಡಿದೆ.
* ಕೋಟಕ್ ಮಹೀಂದ್ರಾ ಬ್ಯಾಂಕ್ ಮೌಲ್ಯದಲ್ಲಿ 4,829.04 ಕೋಟಿ ರು ಇಳಿಕೆಯಾಗಿ 2,32,958.82 ಕೋಟಿ ರು ನಷ್ಟಿದೆ.
* ಹಿಂದೂಸ್ತಾನ್ ಲಿವರ್ ಲಿಮಿಟೆಡ್ 2,575.93 ಕೋಟಿ ರು ಕಳೆದುಕೊಂಡು 3,82,785.70 ಕೋಟಿ ರು ಗೆ ಇಳಿದಿದೆ.
ಟಾಪ್ 10 ಸಂಸ್ಥೆಗಳ ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟಿಸಿಎಸ್, ಎಚ್ ಡಿ ಎಫ್ ಸಿ ಬ್ಯಾಂಕ್, ಹಿಂದೂಸ್ತಾನ್ ಯೂನಿ ಲಿವರ್, ಐಟಿಸಿ, ಇನ್ಫೋಸಿಸ್, ಎಸ್ ಬಿಐ, ಐಸಿಐಸಿಐ ಬ್ಯಾಂಕ್ ಹಾಗೂ ಕೋಟಕ್ ಮಹೀಂದ್ರಾ ಬ್ಯಾಂಕ್ ಇದೆ.












Click it and Unblock the Notifications